ಶ್ರೀದೇವಿ ಪಾರ್ಥೀವ ಶರೀರ ಕುಟುಂಬಕ್ಕೆ ಹಸ್ತಾಂತರ: ಇಂದು ಮಧ್ಯರಾತ್ರಿ ಭಾರತಕ್ಕೆ ಆಗಮನ.?
ಕಡೆಗೂ ಶ್ರೀದೇವಿ ಪಾರ್ಥೀವ ಶರೀರ ಕುಟುಂಬದ ಕೈಸೇರಿದೆ. ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ರವಾನೆ ಮಾಡಲು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದೆ.
ವೈದ್ಯಕೀಯ ವರದಿಗಳು, ಮರಣ ಪ್ರಮಾಣ ಪತ್ರ ಹಾಗೂ ಭಾರತಕ್ಕೆ ಮೃತದೇಹ ಸಾಗಿಸಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ಎಲ್ಲ ದಾಖಲೆಗಳನ್ನ ದುಬೈ ಪೊಲೀಸರು ಶ್ರೀದೇವಿ ಕುಟುಂಬಕ್ಕೆ ನೀಡಿದ್ದಾರೆ.
ಸದ್ಯ ಶ್ರೀದೇವಿ ಮೃತದೇಹವನ್ನ ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ)ಗೆ ಒಳಪಡಿಸಲಾಗಿದೆ. ಅದು ಮುಗಿದ ಮೇಲೆ ಶ್ರೀದೇವಿ ಮೃತದೇಹವನ್ನ ಭಾರತಕ್ಕೆ ತರಲಾಗುತ್ತದೆ. ಮುಂದೆ ಓದಿರಿ...
ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಕ್ಕಿದೆ
ಕಾನೂನು ಪ್ರಕ್ರಿಯೆ ಮುಗಿದು, ಸಂಪೂರ್ಣ ತನಿಖೆ ಕೈಗೊಂಡ ಬಳಿಕ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಶ್ರೀದೇವಿ ಅವರ ಮೃತದೇಹವನ್ನ ಭಾರತಕ್ಕೆ ರವಾನೆ ಮಾಡಲು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದೆ ಎಂದು ಕಾಲೀಜ್ ಟೈಮ್ಸ್ ವರದಿ ಮಾಡಿದೆ.
ಇದು ಖಚಿತ ಮಾಹಿತಿ
ಶ್ರೀದೇವಿ ಮೃತದೇಹವನ್ನ ಕುಟುಂಬಕ್ಕೆ ಹಸ್ತಾಂತರಿಸಲು ದುಬೈ ಪೊಲೀಸರು ಹಸಿರು ನಿಶಾನೆ ನೀಡಿರುವ ಬಗ್ಗೆ ದುಬೈನಲ್ಲಿರುವ ಭಾರತೀಯ ರಾಯಭಾರ ಕಛೇರಿ ಟ್ವೀಟ್ ಮಾಡಿದೆ.

ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆಗೆ ಚಾಲನೆ
ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ನಿಂದ ಕ್ಲಿಯರೆನ್ಸ್ ಲೆಟರ್ ಬಂದ ಕೂಡಲೆ, ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ (ಎಂಬ್ಲೇಮಿಂಗ್)ಗೆ ಚಾಲನೆ ನೀಡಲಾಗಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಭಾರತಕ್ಕೆ ಶ್ರೀದೇವಿ ಮೃತದೇಹ ರವಾನೆ ಆಗಲಿದೆ.

ಇನ್ನೂ ನಾಲ್ಕೈದು-ಗಂಟೆ ಬೇಕು
ಎಂಬ್ಲೇಮಿಂಗ್ ಪ್ರಕ್ರಿಯೆ ಮುಗಿದು, ದುಬೈ ನಿಂದ ಶ್ರೀದೇವಿ ಕುಟುಂಬ ಹೊರಡಲು ಕನಿಷ್ಟ ಅಂದ್ರೂ ಇನ್ನೂ ನಾಲ್ಕೈದು ಗಂಟೆ ಬೇಕು. ಹೀಗಾಗಿ, ಶ್ರೀದೇವಿ ಪಾರ್ಥೀವ ಶರೀರ ಇಂದು ಮಧ್ಯರಾತ್ರಿ ಅಥವಾ ನಾಳೆ ಮುಂಜಾನೆ ವೇಳೆಗೆ ಭಾರತಕ್ಕೆ ತಲುಪುವ ಸಾಧ್ಯತೆ ಇದೆ


Click it and Unblock the Notifications











