Tejas: ನಟಿ ಕಂಗನಾ ರನೌತ್ ಅವರ ಪ್ಲಾಪ್ ಸಿನಿಮಾ 'ತೇಜಸ್' ನೋಡಿ ಕಣ್ಣೀರಿಟ್ಟ ಸಿಎಂ ಯೋಗಿ ಆದಿತ್ಯನಾಥ್!
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ನಟಿ ಕಂಗನಾ ರನೌತ್ ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಪ್ಲಾಪ್ ಆಗಿರುವ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಮಂಗಳವಾರ ಲಕ್ನೋದ ಲೋಕಭವನ ಸಭಾಂಗಣದಲ್ಲಿ ಸಿನಿಮಾ ವೀಕ್ಷಿಸಿ ಸಿಎಂ ಯೋಗಿ ಆದಿತ್ಯನಾಥ್ ಭಾವುಕರಾಗಿದ್ದರಂತೆ.
ಚಿತ್ರದ ಪ್ರದರ್ಶನದ ನಂತರ, ನಟಿ ಕಂಗನಾ ರನೌತ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರವನ್ನು ನೋಡುವಾಗ ಭಾವುಕರಾದರು ಎಂದು ಹೇಳಿದ್ದಾರೆ. ಜೊತೆಗೆ ಹಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಕಂಗನಾ ರನೌತ್ ಮಾತು
ಮಂಗಳವಾರ ಟ್ವಿಟರ್‌ನಲ್ಲಿ ತೇಜಸ್ ವಿಶೇಷ ಪ್ರದರ್ಶನ ಆಯೋಜನೆಯ ಫೋಟೋಗಳನ್ನು ಹಂಚಿಕೊಂಡಿರುವ ಕಂಗನಾ, ಮುಖ್ಯಮಂತ್ರಿ ಅವರಿಗೆ 'ತೇಜಸ್‌ನ ಕೊನೆಯಲ್ಲಿ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ. ಮೊದಲ ಫೋಟೋದಲ್ಲಿ, ಕಂಗನಾ, ಯೋಗಿ ಆದಿತ್ಯನಾಥ್ ಮತ್ತು ಇತರರು ತೇಜಸ್ ವೀಕ್ಷಿಸುತ್ತಿದ್ದಾರೆ. ಮುಂದಿನ ಚಿತ್ರಗಳಲ್ಲಿ ಕ್ಯಾಮರಾಗೆ ಮುಗುಳ್ನಗುತ್ತಲೇ ಯೋಗಿ ಆದಿತ್ಯನಾಥ್ ಕಂಗನಾಗೆ ಗಿಫ್ಟ್ ಕೊಟ್ಟಿದ್ದಾರೆ.
ವಿಶೇಷ ಪ್ರದರ್ಶನಕ್ಕೆ ಕಂಗನಾ ರನೌತ್ ಬಿಳಿ ಸೀರೆ ಮತ್ತು ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ಅವಳು ತನ್ನ ಕೂದಲನ್ನು ತುರುಬು ಕಟ್ಟಿ ಮುದ್ದಾಘಿ ಕಾಣಿಸುತ್ತಿದ್ದರು. ಫೋಟೋಗಳನ್ನು ಹಂಚಿಕೊಂಡಿರುವ ಅವರು, "ಇಂದು ಗೌರವಾನ್ವಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ಹುತಾತ್ಮರ ಜೀವನ ಆಧಾರಿತ ತೇಜಸ್ ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿದೆ. ನೀವು ಮೊದಲ ಚಿತ್ರದಲ್ಲಿ ನೋಡುವಂತೆ ಮಹಾರಾಜ್ ಜೀ ಅವರಿಗೆ ಕೊನೆಯವರೆಗೂ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ತಿಳಿಸಿರಿವ ಅವರು, " ಒಬ್ಬ ಸೈನಿಕನಿಗೆ ಇದಕ್ಕಿಂತ ಇನ್ನೇನು ಬೇಕು...? ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ಕಂಡು ಮಹಾರಾಜ್ ಜೀ ಎಷ್ಟು ಭಾವುಕರಾದರು ಎಂದರೆ ಅವರ ಕಣ್ಣುಗಳು ತುಂಬಿ ಬಂದವು.
ಧನ್ಯವಾದಗಳು ಮಹಾರಾಜ್ ಜೀ, ನಿಮ್ಮ ಪ್ರಶಂಸೆ ಮತ್ತು ಆಶೀರ್ವಾದದಿಂದ ನಾವು ಕೃತಜ್ಞರಾಗಿರುತ್ತೇವೆ" ಎಂದು ಧನ್ಯವಾದ ತಿಳಿಸಿದ್ದಾರೆ.
ಇತ್ತೀಚೆಗೆ, ಚಿತ್ರದ ಬಿಡುಗಡೆಯ ಮೊದಲು, ನಟಿ ಕಂಗನಾ ರನೌತ್ ಅವರು ದೆಹಲಿಯ ಇಂಡಿಯನ್ ಏರ್‌ಫೋರ್ಸ್ ಆಡಿಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಲವಾರು ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.
ತೇಜಸ್ ಸಿನಿಮಾ
ನಟಿ ಕಂಗನಾ ರನೌತ್ ನಟನೆಯ ತೇಜಸ್ ಸಿನಿಮಾ ಏರ್ ಯಂಡಿಯಾ ಫೋರ್ಸ್ ಪೈಲಟ್ ತೇಜಸ್ ಗಿಲ್ ಅವರ ಜೀವನ ಪ್ರಯಾಣದ ಸುತ್ತ ಸುತ್ತುತ್ತದೆ. ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ ಈ ಸಿನಿಮಾಕ್ಕೆ ರೋನಿ ಸ್ಕ್ರೂವಾಲಾ ಬಂಡವಾಳ ಹೂಡಿದ್ದಾರೆ. ಈ ಚಿತ್ರವು ಅಕ್ಟೋಬರ್ 27 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿತ್ತು.
ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಕಮಾಲ್ ಮಾಡದ ಸಿನಿಮಾ ಅಕ್ಟೋಬರ್ 31 ರಂದು, ಇದು ಕೇವಲ 35 ಲಕ್ಷ ರೂಪಾಯಿಗಳನ್ನು ಗಳಿಸಿದೆ. ಹಾಗಾಗಿ ಭಾರತದಲ್ಲಿ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಈಗ 4.50 ಕೋಟಿ ರೂಪಾಯಿಗಳಾಗಿವೆ. ನಟಿ ಕಂಗನಾ ಅವರ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಅವುಗಲ ಸಾಲಿಗೆ ತೇಜಸ್ ಕೂಡ ಸೇರಿಕೊಂಡಿದೆ.


Click it and Unblock the Notifications











