ರಶ್ಮಿಕಾ ಮಂದಣ್ಣ ಚಿತ್ರದ ಮೇಲೆ ಕೃತಿ ಚೌರ್ಯದ ಆರೋಪ ; ಹಾಡು ಕದ್ದಿದ್ದು ಎಲ್ಲಿಂದ ?

ಆ ಭಾಷೆ ಈ ಭಾಷೆ ಅಂತಲ್ಲ. ಭಾರತದ ಚಿತ್ರರಂಗದಲ್ಲಿ ಅನೇಕರು.. ಕೊರಿಯನ್ ಸೇರಿದಂತೆ ಬೇರೆ ಭಾಷೆಯ ಚಿತ್ರಗಳನ್ನು ಆಧರಿಸಿ ಚಿತ್ರ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ.

ಹೀಗೆ ಕದಿಯುವ ಮನೋವ್ಯಾಧಿ ಇಲ್ಲಿಗೆ ಮುಕ್ತಾಯವಾಗುವುದಿಲ್ಲ. ಹಲವರು ಬೇರೆ ಭಾಷೆಯಲ್ಲಿ ಗಮನ ಸೆಳೆದ ಪೋಸ್ಟರ್‌ಗಳನ್ನು ಕೂಡ ತಮ್ಮದೇ ವಿನ್ಯಾಸವೆನ್ನುವಂತೆ ತೋರ್ಪಡಿಸುತ್ತಾರೆ. ಮತ್ತೂ ಕೆಲವರು ನಮ್ಮನ್ಯಾರು ಕೇಳ್ತಾರೆ ಎಂಬ ಮನೋಭಾವದಲ್ಲಿ ಸಂಗೀತವನ್ನು ಕೂಡ ಯಥಾವತ್ತಾಗಿ ನಕಲು ಮಾಡುತ್ತಾರೆ. ಉದಾಹರಣೆಗೆ ಬಾಲಿವುಡ್‌ನ ಸಂಗೀತ ನಿರ್ದೇಶಕ ಪ್ರೀತಂ.

Cocktail 2 Track Mashooqa Sparks Outrage Over Striking Similarities to 1993 Italian Hit

ಹೌದು, ಪ್ರೀತಂ.. ಬಾಲಿವುಡ್‌ ಸಂಗೀತ ಲೋಕದಲ್ಲಿ ದೊಡ್ಡ ಹೆಸರು. ಒಂದಕ್ಕಿಂತ ಒಂದು ಸುಂದರ ಸುಮಧುರ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ ಖ್ಯಾತಿ ಇವರದ್ದು. ಆದರೆ ಇದೇ ವೇಳೆ ನೆಟ್ಟಿಗರು ಇವರನ್ನು 'ಕಾಪಿ ಕ್ಯಾಟ್' ಎಂದು ಟ್ರೋಲ್ ಮಾಡುವುದು ಹೊಸದೇನಲ್ಲ. ''ರೇಸ್'' ಚಿತ್ರದ ''ಪೆಹಲಿ ನಜರ್ ಮೇ'' ಹಾಡಿರಬಹುದು, ''ವೋ ಲಮ್ಹೆ'' ಚಿತ್ರದ ''ಕ್ಯಾ ಮುಜೇ ಪ್ಯಾರ್ ಹೈ'' ಹಾಡಿರಬಹುದು, ''ಧೂಮ್'' ಚಿತ್ರದ ''ಧೂಮ್ ಮಚಾಲೆ'' ಇರಬಹುದು, ''ಗ್ಯಾಂಗಸ್ಟರ್'' ಚಿತ್ರದ ''ಯಾ ಅಲಿ'' ಹಾಡು ಇರಬಹುದು.

ಹೀಗೆ ಕಳೆದ ಎರಡು ದಶಕಗಳಲ್ಲಿ ಅರೇಬಿಕ್, ಚೀನಿ, ಇಂಡೋನೇಷ್ಯಾ, ಈಜಿಪ್ಟ್, ಹೀಗೆ ಹಲವೆಡೆ ಸದ್ದು ಮಾಡಿದ್ದ ಹಾಡುಗಳ ಸಂಗೀತವನ್ನು ಕಾಪಿ ಮಾಡಿದ್ದಾರೆ ಪ್ರೀತಂ. ಸದ್ಯ ಈ ಸಾಲಿಗೆ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ''ಕಾಕ್‌ಟೇಲ್ 2'' ಚಿತ್ರದ ''ಮಾಶೂಕಾ'' ಹಾಡು ಕೂಡ ಸೇರಿಕೊಂಡಿದೆ ಎನ್ನುವುದು ಸದ್ಯದ ಆರೋಪ.

ಹೌದು, ಜೂನ್ 19ಕ್ಕೆ ''ಕಾಕ್‌ಟೇಲ್ 2'' ಬಿಡುಗಡೆಯಾಗಲಿರುವ ಹಿನ್ನೆಲೆ ಚಿತ್ರತಂಡ ಈಗಾಗಲೇ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದೆ. ಚಿತ್ರದ ಪ್ರಚಾರಾರ್ಥ ಹಾಡೊಂದನ್ನು ಬಿಡುಗಡೆ ಮಾಡಿದೆ. ಆ ಹಾಡಿನ ಹೆಸರೇ ''ಮಾಶೂಕಾ''. ಮೊನ್ನೆ..ಮೊನ್ನೆ ಬಿಡುಗಡೆಯಾದ ಈ ಹಾಡು 1993ರ ಇಟಾಲಿಯನ್ ಹಾಡು ''ಸೇ ಸೊ ಅರುಬೇಟ್ ಎ ನೊನ್ನಾ''ದ ನಕಲು ಎನ್ನುವ ವಿಚಾರವನ್ನು ರೆಡ್ಡಿಟ್‌ನಲ್ಲಿ ಬಳಕೆದಾರರು ಕಂಡು ಹಿಡಿದಿದ್ದಾರೆ.

ರೆಡ್ಡಿಟ್ ಬಳಕೆದಾರರೊಬ್ಬರು 1993ರ ಇಟಾಲಿಯನ್ ಗೀತೆ ''ಸೇ ಸೊ ಅರುಬೇಟ್ ಎ ನೊನ್ನಾ''ಗೆ ''ಮಾಶೂಕಾ'' ಹಾಡಿನ ಟ್ಯೂನ್ ಹೋಲುತ್ತದೆ ಎಂದು ವೀಡಿಯೊ ಹಂಚಿಕೊಂಡಿದ್ದು, ಸದ್ಯ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಹಲವರು ಪ್ರೀತಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಕಳ್ಳತನದ ಕೆಲಸ ಇನ್ನೂ ಬಿಟ್ಟಿಲ್ವಾ..? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

cocktail-2-track-mashooqa-sparks-outrage-over-striking-similarities-to-1993-italian-hit

ಮತ್ತೊಂದು ಕಡೆ ಇದು ಸ್ಯಾಂಪ್ಲಿಂಗ್ ಆಗಿರಬಹುದು, ಅಂದರೆ ಹಾಡನ್ನು ನಕಲು ಮಾಡುವುದಲ್ಲ, ಬದಲಿಗೆ ಹಾಡಿನ ಬಹುಮುಖ್ಯವಾದ ಬೀಟ್ ತೆಗೆದುಕೊಂಡು ಅದರ ಮೇಲೆ ಇತರ ವಾದ್ಯಗಳನ್ನು ಸೇರಿಸಿ ಬೇರೆಯದ್ದೇ ಆದ ರೂಪ ಕೊಡುವ ಪ್ರಯತ್ನವನ್ನು ಪ್ರೀತಂ ಮಾಡಿರಬಹುದು ಎನ್ನುತ್ತಿದ್ದಾರೆ. ಸದ್ಯ ಸಂಗೀತ ಲೋಕದಲ್ಲಿ ಈ ಸ್ಯಾಂಪ್ಲಿಂಗ್ ತುಂಬಾನೇ ಜನಪ್ರಿಯ ಜಗದ್ವಿಖ್ಯಾತ ಸಂಗೀತ ನಿರ್ದೇಶಕರು ಕೂಡ ಈ ಕೆಲಸ ಮಾಡುತ್ತಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ತಮ್ಮ ಮೇಲಿನ ಈ ಆರೋಪಕ್ಕೆ ಸದ್ಯ ಪ್ರೀತಂ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನುಳಿದಂತೆ ''ಕಾಕ್‌ಟೇಲ್ 2 '' ಚಿತ್ರ 2012ರಲ್ಲಿ ಬಿಡುಗಡೆಯಾಗಿದ್ದ ''ಕಾಕ್‌ಟೇಲ್'' ಚಿತ್ರದ ಸಿಕ್ವೆಲ್. ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ''ಕಾಕ್‌ಟೇಲ್'' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಯಶಸ್ವಿಯಾಗಿತ್ತು. ''ಕಾಕ್‌ಟೇಲ್ 2 ''ಕೂಡ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

English summary
"Pritam can't stop copying!" Internet reacts as Cocktail 2 song ‘Mashooqa’ gets called out for striking similarities to a 30-year-old Italian classic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X