Cocktail- 2 Trailer: ಯಾರ ಒಲುವು ಯಾರ ಕಡೆಗೋ; ತ್ರಿಕೋನ ಪ್ರೇಮಕಥೆ 'ಕಾಕ್‌ಟೇಲ್- 2' ಟ್ರೈಲರ್

ಹೋಮಿ ಅಡಜಾನಿಯಾ ನಿರ್ದೇಶನದಲ್ಲಿ ಶಾಹಿದ್ ಕಪೂರ್, ಕೃತಿ ಸನೂನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಕಾಕ್‌ಟೇಲ್'-2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು ಕೊನೆಗೆ ನಾಯಕನಿಗೆ ಯಾರು ಜೋಡಿ ಆಗುತ್ತಾರೆ ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ.

ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಕಾಮಿಡಿ, ಎಮೋಷನ್, ರೊಮ್ಯಾನ್ಸ್ ಎಲ್ಲವನ್ನು ಮಿಕ್ಸ್ ಮಾಡಿ ಸಿನಿಮಾ ತೆರೆಗೆ ತರುತ್ತಿರುವುದು ಟ್ರೈಲರ್ ನೋಡಿದ್ರೆ ಅರ್ಥವಾಗುತ್ತದೆ. 2012ರಲ್ಲಿ 'ಕಾಕ್‌ಟೇಲ್' ಸಿನಿಮಾ ತೆರೆಗೆ ಬಂದು ಸಕ್ಸಸ್ ಕಂಡಿತ್ತು. ಅದೇ ಟೈಟಲ್‌ನಲ್ಲಿ ಇದೀಗ ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ಜೂನ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ದಿನೇಶ್ ವಿಜನ್, ಲವ್ ರಂಜನ್, ಪ್ರಮಿತಾ ಆರ್ ವಿಜನ್, ಅಂಕುರ್ ಗರ್ಗ್ ಚಿತ್ರಕ್ಕೆ ಹಣ ಹೂಡಿದ್ದಾರೆ.

Cocktail - 2 Trailer Shahid Kapoor Caught Between Rashmika and Kriti in Intriguing Love Triangle

ಲವ್ ರಂಜನ್ ಕಥೆ ಬರೆದಿದ್ದು ತರುಣ್ ಜೈನ್ ಜೊತೆ ಸೇರಿ ಚಿತ್ರಕಥೆ ಸಿದ್ಧಪಡಿಸಿದ್ದಾರೆ. 14 ವರ್ಷಗಳ ಹಿಂದೆ 'ಕಾಕ್‌ಟೇಲ್' ಸಿನಿಮಾ ನಿರ್ದೇಶಿಸಿದ್ದ ಹೋಮಿ ಅಡಜಾನಿಯಾ ಮತ್ತೆ ಈ ಚಿತ್ರದ ಸಾರಥ್ಯ ವಹಿಸಿದ್ದಾರೆ. ಕುನಾಲ್(ಶಾಹಿದ್ ಕಪೂರ್), ದಿಯಾ(ರಶ್ಮಿಕಾ ಮಂದಣ್ಣ) ಹಾಗೂ ಅಲೈ(ಕೃತಿ ಸನೂನ್) ಮೂವರು ಆತ್ಮೀಯ ಸ್ನೇಹಿತರು. ಆದರೆ ಕುನಾಲ್ ಮೇಲೆ ದಿಯಾ ಹಾಗೂ ಅಲೈ ಇಬ್ಬರಿಗೂ ಲವ್ ಆಗುತ್ತದೆ. ಮುಂದೆ ಈ ತ್ರಿಕೋನ ಪ್ರೇಮಕಥೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಸಿನಿಮಾ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

ಪಕ್ಕಾ ಬಾಲಿವುಡ್ ಸ್ಟೈಲ್ ರೊಮ್ಯಾಂಟಿಕ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಇದು. ಪ್ರೀತಂ ಸಂಗೀತದಲ್ಲಿ 'ಕಾಕ್‌ಟೇಲ್'-2 ಸಿನಿಮಾ ಸಾಂಗ್ಸ್ ಮೂಡಿ ಬಂದಿದೆ. ಮದುವೆ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾಳ ಮೊದಲ ಸಿನಿಮಾ ಇದು. ಕೊಡಗಿನ ಚೆಲುವೆಗೆ ಬಾಲಿವುಡ್ ಹೊಸದೇನು ಅಲ್ಲ. 'ಗುಡ್‌ಬೈ' ಸಿನಿಮಾ ಮೂಲಕ ಆಕೆ ಬಿಟೌನ್ ಪ್ರವೇಶಿಸಿದ್ದರು. 'ಮಿಷನ್ ಮಜ್ನು' ಬಣ್ಣ ಹಚ್ಚಿದ ಮೊದಲ ಹಿಂದಿ ಸಿನಿಮಾ. 'ಅನಿಮಲ್' ಹಾಗೂ 'ಛಾವ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.

'ಕಾಕ್‌ಟೇಲ್'-2 ಚಿತ್ರದಲ್ಲಿ ರಶ್ಮಿಕಾ ಹಾಗೂ ಕೃತಿ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಇಬ್ಬರೂ ಬಿಕಿನಿ ತೊಟ್ಟು ಪಡ್ಡೆ ಹುಡುಗರ ಗಮನ ಸೆಳೆದಿದ್ದಾರೆ. ರಶ್ಮಿಕಾ ಇದೇ ಮೊದಲ ಬಾರಿಗೆ ಟೂ ಪೀಸ್ ಸ್ವಿಮ್ ಸೂಟ್ ಧರಿಸಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕೃತಿ ಕೊಂಚ ಮೈಚಳಿ ಬಿಟ್ಟು ನಟಿಸಿರುವುದು ಟ್ರೈಲರ್ ನೋಡಿದ್ರೆ ಅರ್ಥವಾಗ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X