For Quick Alerts
  ALLOW NOTIFICATIONS  
  For Daily Alerts

  ದಿಶಾ ಪಟಾನಿಯ ಹಾಟ್ ಫೋಟೋಗೂ ಬಿಜೆಪಿಗೂ ಏನು ಸಂಬಂಧ?

  |

  ದಿಶಾ ಶೇರ್ ಮಾಡಿರುವ ಈ ಫೋಟೋಗೂ ಮತ್ತು ಬಿಜೆಪಿಗೂ ಏನು ಸಂಬಂಧ ಅಂತಾ ಅಚ್ಚರಿಯಾಗುತ್ತಿದೆಯಾ? ಅಚ್ಚರಿ ಎನಿಸಿದರು ಈ ಫೋಟೋಗೂ ಬಿಜೆಪಿಗೂ ಇಲ್ಲಿ ಸಂಬಂಧ ಇದೆ. ಅಂದ್ಹಾಗೆ, ದಿಶಾ ಪಟಾನಿ ಎನ್ನುವ ಬಾಲಿವುಡ್ ನ ಈ ಬೆಡಗಿಯ ಬಗ್ಗೆ ಗೊತ್ತಿರಬೇಕು. ಹಾಟ್ ಅವತಾರಗಳ ಮೂಲಕವೇ ಪಡ್ಡೆಗಳ ನಿದ್ದೆ ಗೆಡಿಸಿರುವ ಸುಂದರಿ.

  ಬಾಲಿವುಡ್ ನ ಹಾಟ್ ಅಂಡ್ ಬ್ಯೂಟಿಫುಲ್ ನಟಿ ದಿಶಾ ಪಟಾನಿ ಸದ್ಯ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. CAA ಮತ್ತು CNR ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚಗಳಾಗುತ್ತಿವೆ. ಅಲ್ಲದೆ ಇಡೀ ದೇಶವೆ ಹೊತ್ತಿಯುರಿಯುತ್ತಿದ್ದಾರೆ. ಇದರ ನಡುವೆ ನಟಿ ದಿಶಾ ಪಟಾನಿ ಹಾಟ್ ಫೋಟೋ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

  ಬಾಲಿವುಡ್ ನಲ್ಲಿ ಬೆರಳೆಣಿಕೆಯ ಸಿನಿಮಾಗಳನ್ನು ಮಾತ್ರ ಮಾಡಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗನ್ನು ಹೊಂದಿರುವ ನಟಿ. ಸದಾ ಬೋಲ್ಡ್ ಅವತಾರದ ಮೂಲಕ ಕಾಣಿಸಿಕೊಳ್ಳುವ ದಿಶಾ ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದೇನೆ ಇರಲಿ ಸದ್ಯ ದಿಶಾ ಶೇರ್ ಮಾಡಿರುವ ಹಾಟ್ ಫೋಟೋ ಗೂ ಈಗ ನಡೆಯುತ್ತಿರುವ ಪ್ರತಿಭಟನೆಗೂ ಲಿಂಕ್ ಮಾಡಲಾಗಿದೆ.

  ದಿಶಾ ಫೋಟೋ ನೋಡಿ ಖ್ಯಾತ ಕಾಮಿಡಿಯನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟ ವಿರೋಧಿ ಆಗಿರುವ ಅತುಲ್ ಖತ್ರಿ CAA-NRC ಯಿಂದ ಯುವಕರನ್ನು ಬೇರೆಡೆಗೆ ಸೆಳೆಯುವ ಹುನ್ನಾರಾ ಎಂದು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಅನೇಕರು ಪರ ವಿರೋಧದ ಕಮೆಂಟ್ ಮಾಡುತ್ತಿದ್ದಾರೆ.

  ದೇಶದಲ್ಲಿ ದೊಡ್ಡ ಮಟ್ಟಿಗೆ ಪ್ರತಿಭಟನೆ ನಡೆಯುತ್ತಿದ್ದರೆ ದಿಶಾ ಪಟಾನಿಯ ಹಾಟ್ ಪೋಟೋ ಪ್ರತಿಭಟನೆಯ ನಡುವೆಯು ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇನ್ಸ್ಟಾಗ್ರಾಮ್ ನಲ್ಲಿ ತರಹೇವಾರಿ ಕಮೆಂಟ್ ಗಳು ಹರಿದುಬರುತ್ತವೆ. ಆದರೆ ಈ ಬಗ್ಗೆ ದಿಶಾ ಪಟಾನಿ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ದಿಶಾ ಇನ್ಸ್ಟಾಗ್ರಾಮ್ ಫಾಲೋರ್ಸ್ ಮತ್ತು ಕಮೆಂಟ್ ಸಂಖ್ಯೆ ಹೆಚ್ಚಾಗಿದೆ.

  English summary
  Comedian Atul Khatri comment on Disha Patani's bikini photo. Atul Khatri linked Disha photo to BJP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X