ಸಣ್ಣ ವಯಸ್ಸಿನಲ್ಲೇ ಅಪಘಾತಕ್ಕೆ ಬಲಿಯಾದ ಖ್ಯಾತ ಕಾಮಿಡಿಯನ್!

ದಿಲ್ ಸೆ ಬುರಾ ಲಗ್ತಾ ಹೈ ಮೀಮ್‌ಗಳಿಗೆ ಜನಪ್ರಿಯರಾಗಿರುವ ಹಾಸ್ಯನಟ, ನಟ ಮತ್ತು ಯೂಟ್ಯೂಬರ್ ದೇವರಾಜ್ ಪಟೇಲ್ ಇಂದು (ಜೂನ್ 26) ರಂದು ಛತ್ತೀಸ್‌ಗಢದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ ದೇವರಾಜ್ ರಾಯ್‌ಪುರ ನಗರದಲ್ಲಿ ಕಾಮಿಡಿ ವಿಡಿಯೋ ಚಿತ್ರೀಕರಣಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತವಾಗಿ ಸಾವನ್ನಪ್ಪಿದ್ದಾರೆ.

ಇನ್ನು ದೇವರಾಜ್ ಪಟೇಲ್ ಅವರಿಗೆ 20 ರಿಂದ 26ರವರೆಗೆ ವಯಸ್ಸಾಗಿತ್ತು ಎಂದು ಮೂಲಗಳು ತಿಳಿಸಿದ್ದು, ಎರಡು ವಾಹನಗಳ ನಡುವೆ ಪರಸ್ಪರ ಡಿಕ್ಕಿ ನಡೆದಿದೆ ಎಂದೂ ಸಹ ವರದಿಗಳು ತಿಳಿಸಿವೆ.

Comedian Devaraj Patel dies at the age of 20 in road accident

ಇನ್ನು ದಿಲ್ ಸೆ ಬುರಾ ಲಗ್ತಾ ಹೈ ಎಂಬ ಡೈಲಾಗ್ ಮೂಲಕ ವೈರಲ್ ಆಗಿದ್ದ ದೇವರಾಜ್ ಪಟೇಲ್ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಅನ್ನೂ ಸಹ ಹೊಂದಿದ್ದರು ಹಾಗೂ ಇದರಲ್ಲಿ 4 ಲಕ್ಷ ಚಂದಾದಾರನ್ನೂ ಸಹ ದೇವರಾಜ್ ಪಟೇಲ್ ಹೊಂದಿದ್ದರು.

ಹೀಗೆ ಚಿಕ್ಕ ವಯಸ್ಸಿನಲ್ಲೇ ಮೃತರಾಗಿರುವ ದೇವರಾಜ್ ಪಟೇಲ್ ಸಾವಿಗೆ ನೆಟ್ಟಿಗರು ಕಂಬನಿ ಮಿಡಿದಿದ್ದು, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಭಗೆಲ್ ಸಹ ದೇವರಾಜ್ ಪಟೇಲ್‌ರ ಹಳೇ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.

"ದಿಲ್ ಸೆ ಬುರಾ ಲಗ್ತಾ ಹೈ ಮೂಲಕ ಕೋಟಿ ಜನರ ನಡುವೆ ಸ್ಥಾನವನ್ನು ಗಳಿಸಿದ, ನಮ್ಮೆಲ್ಲರನ್ನೂ ನಗಿಸಿದ ದೇವರಾಜ್ ಪಟೇಲ್ ಇಂದು ನಮ್ಮನ್ನು ಅಗಲಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ" ಎಂದು ಭೂಪೇಶ್ ಭಗೆಲ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Comedian Devaraj Patel dies at the age of 20 in road accident. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X