Don't Miss!
- Sports
ಮುಂದಿನ ಆವೃತ್ತಿಯಲ್ಲಿ ಮತ್ತೊಂದು ಟ್ರೋಫಿ ಗೆಲ್ಲುತ್ತೇವೆ: MI ಆಟಗಾರ ಸೂರ್ಯಕುಮಾರ್ ವಿಶ್ವಾಸ
- News
ಭಾರತೀಯರೇ ಭಯ ಬಿಡಿ: ನಮ್ಮಲ್ಲಿ ಇಲ್ಲ ಒಂದೇ ಒಂದು ಮಂಕಿಪಾಕ್ಸ್ ಪ್ರಕರಣ
- Finance
ಕಳೆದ ವಾರ ಟಾಪ್ 10 ಕಂಪನಿಗಳ ಪೈಕಿ HDFC ಬ್ಯಾಂಕಿಗೆ ಹೆಚ್ಚಿನ ಲಾಭ
- Automobiles
ಭಾರತದಲ್ಲಿ ಸ್ಥಗಿತಗೊಂಡ ಜನಪ್ರಿಯ ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು
- Technology
ಪ್ರಸ್ತುತ ನೀವು ಖರೀದಿಸಬಹುದಾದ ಮಧ್ಯಮ ಶ್ರೇಣಿಯ ಅತ್ಯುತ್ತಮ ಸ್ಮಾರ್ಟ್ಫೋನ್ಗಳು!
- Lifestyle
ಮೇ 29 ರಿಂದ ಜೂನ್ 4ರ ವಾರ ಭವಿಷ್ಯ: ಮಿಥುನ, ಸಿಂಹ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
- Education
BCWD Dolu And Nadaswara Music Training : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಿನಿಮಾ ಆಗಲಿದೆ ಕಮಿಡಿಯನ್ ಕಪಿಲ್ ಶರ್ಮಾ ಜೀವನ
ಭಾರತದಲ್ಲಿ ಸ್ಟಾಂಡಪ್ ಕಾಮಿಡಿ ಬಹಳ ವೇಗವಾಗಿ ಪ್ರಗತಿ ಸಾಧಿಸಿದೆ. ಸ್ಟಾಂಡಪ್ ಕಮಿಡಿಯನ್‌ಗಳ ಸಂಖ್ಯೆ ನೂರಕ್ಕೂ ಮೀರಿ ಹೋಗಿದೆ. ಪ್ರಾದೇಶಿಕ ಭಾಷೆಗಳಲ್ಲಿಯೂ ಸ್ಟಾಂಡಪ್ ಕಾಮಿಡಿ ಶುರುವಾಗಿದೆ.
ಆದರೆ ಭಾರತದ ಹಾಸ್ಯ ಅಥವಾ ಸ್ಟಾಂಡಪ್ ಕಾಮಿಡಿ ಅಷ್ಟೇನೂ ದೊಡ್ಡದಾಗಿ ಬೆಳೆಯದಿದ್ದಾಗಲೇ ಕಮಿಡಿಯನ್ ಆಗಿ ಬಹಳ ದೊಡ್ಡ ಜನಪ್ರಿಯತೆ ಗಳಿಸಿದ್ದು ಕಪಿಲ್ ಶರ್ಮಾ.
ಹಾಸ್ಯ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಯಾಗಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುವ ಮೂಲಕ ಹಾಸ್ಯಲೋಕಕ್ಕೆ ಎಂಟ್ರಿ ಕೊಟ್ಟ ಕಪಿಲ್ ಶರ್ಮಾ ಇಂದು ಬಾಲಿವುಡ್ ಸ್ಟಾರ್ ನಟರಿಗೆ ಸಮನಾದ ಸೆಲೆಬ್ರಿಟಿ. ಸಣ್ಣ ಊರಿನಿಂದ ಮುಂಬೈಗೆ ಬಂದು ಇಷ್ಟು ದೊಡ್ಡ ಸೆಲೆಬ್ರಿಟಿ ಆಗುವುದರ ಹಿಂದೆ ಕಪಿಲ್ ಶರ್ಮಾರ ಶ್ರಮ ದೊಡ್ಡದು. ಕಪಿಲ್ ಶರ್ಮಾರ ಜೀವನ ಜರ್ನಿ ಸಾಮಾನ್ಯದ್ದಲ್ಲ, ಅವರ ಜೀವನ ಯಾನವನ್ನು ಎಲ್ಲರಿಗೂ ತೋರಿಸುವ ಮೂಲಕ ಇನ್ನಷ್ಟು ಜನರಿಗೆ ಸ್ಪೂರ್ತಿ ತುಂಬಲೆಂದು ಕಪಿಲ್ ಶರ್ಮಾರ ಜೀವನ ಕತೆಯನ್ನು ಸಿನಿಮಾ ಮಾಡಲಾಗುತ್ತಿದೆ.

ಮನ್‌ದೀಪ್ ಸಿಂಗ್ ಲಂಭಾ ನಿರ್ದೇಶನ
ಕಪಿಲ್ ಶರ್ಮಾರ ಜೀವನವನ್ನು ಸಿನಿಮಾ ಮಾಡುವ ಜವಾಬ್ದಾರಿಯನ್ನು ನಿರ್ದೇಶಕ ಮನ್‌ದೀಪ್ ಸಿಂಗ್ ಲಂಭಾ ವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು 'ಫಕ್ರೆ' ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಕಪಿಲ್ ಶರ್ಮಾ ಜೀವನ ಕುರಿತ ಸಿನಿಮಾಕ್ಕೆ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ. ಸಿನಿಮಾಕ್ಕೆ 'ಫನ್‌ಕಾರ್' ಎಂದು ಹೆಸರಿಡಲಾಗಿದೆ. ಫನ್‌ಕಾರ್ ಎಂದರೆ ಕಲಾವಿದ ಅಥವಾ ಮನರಂಜನೆ ನೀಡುವವ ಎಂದರ್ಥ.

ಏರಿಳಿತಗಳಿಂದ ಕೂಡಿದೆ ಕಪಿಲ್ ಶರ್ಮಾ ಜೀವನ
ಅಮೃತ್‌ಸರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಮಗನಾಗಿ ಜನಿಸಿದ ಕಪಿಲ್ ಶರ್ಮಾ ಅತ್ಯಂತ ಮಧ್ಯಮವರ್ಗದ ಕುಟುಂಬದಿಂದ ಬಂದವರು. 2007ರಲ್ಲಿ ಮೊದಲಿಗೆ 'ಗ್ರೇಟ್ ಇಂಡಿಯಲ್ ಲಾಫ್ಟರ್ ಚಾಲೆಂಜ್' ಹೆಸರಿನ ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಕಪಿಲ್, ಅಲ್ಲಿಂದ 'ಲಾಫ್ಟರ್ ನೈಟ್ಸ್', 'ಕಾಮಿಡಿ ಸರ್ಕಸ್', 'ಕಾಮಿಡಿಕಾ ಡೈಲಿ ಸೋಪ್' ಹೀಗೆ ಹಲವು ಶೋಗಳಲ್ಲಿ ಸ್ಪರ್ಧಿಯಾಗಿ ನಗಿಸಿದರು. ಬಳಿಕ 2013 ರಲ್ಲಿ ಮೊದಲ ಬಾರಿಗೆ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಹೆಸರಿನ ತಮ್ಮದೇ ಶೋ ಪ್ರಾರಂಭ ಮಾಡಿದರು. ಆ ಶೋ ದೊಡ್ಡ ಹಿಟ್ ಆಯಿತು. ಆದರೆ ಚಾನೆಲ್ ಜೊತೆಗಿನ ಮುನಿಸಿನಿಂದ ಆ ಶೋ ಬಂದ್ ಮಾಡಿದರು ಕಪಿಲ್.

ತಮ್ಮ ಪಾತ್ರದಲ್ಲಿ ತಾವೇ ನಟಿಸುತ್ತಿದ್ದಾರೆ ಕಪಿಲ್
ನಂತರ ಬೇರೆ ಚಾನೆಲ್‌ನಲ್ಲಿ 'ದಿ ಕಪಿಲ್ ಶರ್ಮಾ ಶೋ' ಪ್ರಾರಂಭ ಮಾಡಿದರು. ಆ ಶೋ ಸಹ ದೊಡ್ಡ ಹಿಟ್ ಆಯಿತು. ಕಪಿಲ್ ಶರ್ಮಾ ಯಾವುದೇ ಬಾಲಿವುಡ್‌ನ ಸ್ಟಾರ್ ನಟರಿಗೆ ಕಡಿಮೆಯಲ್ಲದ ಸೆಲೆಬ್ರಿಟಿ ಎನಿಸಿಕೊಂಡರು. ಅಲ್ಲಿಂದ ಸಿನಿಮಾಗಳು, ಅಂತರಾಷ್ಟ್ರೀಯ ಶೋಗಳು ಹೀಗೆ ಪ್ರಗತಿ ಸಾಧಿಸುತ್ತಲೇ ಸಾಗಿದರು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಪಿಲ್ ಶರ್ಮಾ ಅನುಭವಿಸಿದ್ದಾರೆ. ಆ ಎಲ್ಲವೂ ಕಪಿಲ್ ಶರ್ಮಾ ಜೀವನ ಕುರಿತ ಸಿನಿಮಾದಲ್ಲಿ ತೆರೆಯ ಮೇಲೆ ಬರಲಿದೆ. ತಮ್ಮ ಜೀವನದ ಕತೆಯಲ್ಲಿ ಸ್ವತಃ ಕಪಿಲ್ ಶರ್ಮಾ ಅವರೇ ನಾಯಕ ನಟನಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕಾಗಿ ಕಪಿಲ್ ಶರ್ಮಾ ತೂಕ ಇಳಿಸಿಕೊಳ್ಳುವುದರಲ್ಲಿ ನಿರತಾಗಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಶೋ ಬರುತ್ತಿದೆ
ಕಪಿಲ್ ಶರ್ಮಾ ಇದೀಗ ತಮ್ಮ ಜೀವನ ಕತೆಯನ್ನು ತಾವೇ ಹೇಳುತ್ತಿದ್ದಾರೆ ಅದೂ ನೆಟ್‌ಫ್ಲಿಕ್ಸ್‌ನಲ್ಲಿ. ಕಪಿಲ್ ಶರ್ಮಾಗಾಗಿ ನೆಟ್‌ಫ್ಲಿಕ್ಸ್ ವಿಶೇಷ ಶೋ ಆಯೋಜಿಸಿದೆ. ಈ ಶೋನಲ್ಲಿ ಕಪಿಲ್ ಶರ್ಮಾ ತಮ್ಮ ಜೀವನದ ಕತೆಯನ್ನು ತಮ್ಮದೇ ಹಾಸ್ಯದ ಶೈಲಿಯಲ್ಲಿ ಹೇಳಿದ್ದಾರೆ. ಶೋಗೆ 'ಐ ಆಮ್ ನಾಟ್ ಡನ್ ಯೆಟ್' ಎಂದು ಹೆಸರಿಡಲಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಶೋ ಜನವರಿ 28 ರಿಂದ ಪ್ರಸಾರವಾಗಲಿದೆ.