ಬಾಲಿವುಡ್‌ 'ಗುಟ್ಕಾ ಸ್ಟಾರ್'ಗಳ ವಿರುದ್ಧ ದೂರು

ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಆಕ್ಷನ್ ಸ್ಟಾರ್‌ಗಳಂತೆಯೇ ಬಾಲಿವುಡ್‌ನಲ್ಲಿ ಗುಟ್ಕಾ ಸ್ಟಾರ್‌ಗಳಿದ್ದಾರೆ. ಹಣದ ಆಸೆಗೆ ಗುಟ್ಕಾ ಉತ್ಪನ್ನಗಳನ್ನು ಪ್ರಚಾರ ಮಾಡುವ ಕೆಲವು ಸ್ಟಾರ್‌ನಟರನ್ನು ಒಟ್ಟಾಗಿ 'ಗುಟ್ಕಾ ಸ್ಟಾರ್'ಗಳೆಂದು ಕರೆಯುವುದು ನೆಟ್ಟಿಗರ ರೂಢಿ.

ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ನಟರು ಗುಟ್ಕಾ ಉತ್ಪಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ತಲೆ ಕೆಡಿಸಿಕೊಂಡಿಲ್ಲ ಈ ನಟರು. ಆದರೆ ಇದೀಗ ಬಾಲಿವುಡ್‌ನ 'ಗುಟ್ಕಾ ಗ್ಯಾಂಗ್' ವಿರುದ್ಧ ದೂರು ದಾಖಲಾಗಿದೆ.

ಬಿಹಾರದ ಮುಜಫ್ಫರ್‌ಪುರ್‌ನ ಸಾಮಾಜಿಕ ಕಾರ್ಯಕರ್ತ ತಮನ್ನ ಹಶ್ಮ್ ಎಂಬುವರು ಬಾಲಿವುಡ್‌ನ 'ಗುಟ್ಕಾ ಗ್ಯಾಂಗ್' ವಿರುದ್ಧ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 467, 468, 439, 120ಬಿ ಅಡಿ ಪ್ರಕರಣ ದಾಖಲಾಗಿದೆ. ಬಾಲಿವುಡ್‌ನ ಕೆಲವು ಸ್ಟಾರ್ ನಟರು ತಮ್ಮ ಜನಪ್ರಿಯತೆಯನ್ನು ಗುಟ್ಕಾ ಉತ್ಪನ್ನ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆಗೆ ನ್ಯಾಯಾಲಯವು ಸಮ್ಮತಿ ಸೂಚಿಸಿದ್ದು ಮೇ 27 ರಂದು ವಿಚಾರಣೆ ನಡೆಯಲಿದೆ.

Complaint Against Amitabh Bachchan, Shah Rukh Khan and Other Stars For Promoting Gutka Product

ನಟ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಜಯ್ ದೇವಗನ್, ರಣ್ವೀರ್ ಸಿಂಗ್, ಅಕ್ಷಯ್ ಕುಮಾರ್ ಇನ್ನೂ ಕೆಲವು ಸ್ಟಾರ್ ನಟರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಾವು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದ ಅಕ್ಷಯ್ ಕುಮಾರ್ ಸಹ ಕೆಲವು ದಿನಗಳ ಹಿಂದೆ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಗುಟ್ಕಾ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಕ್ಷಮಾಪಣೆ ಕೇಳಿದರು ಹಾಗೂ ಅದರ ಸಂಭಾವನೆ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸುವುದಾಗಿ ಹೇಳಿದರು.

ಅಕ್ಷಯ್ ಕುಮಾರ್, ಗುಟ್ಕಾ ಜಾಹೀರಾತಿನಿಂದ ಹಿಂದೆ ಸರಿದರಾದರೂ ಇತರೆ ನಟರು ಜಾಹೀರಾತಿನಿಂದ ಹಿಂದೆ ಸರಿದಿಲ್ಲ. ಈ ಬಗ್ಗೆ ಮಾತನಾಡಿದ್ದ ಅಜಯ್ ದೇವಗನ್ ನಾವು ಇಲಾಯ್ಚಿಯನ್ನು ಪ್ರಚಾರ ಮಾಡುತ್ತಿದ್ದೇವೆಯೇ ಹೊರತು ಗುಟ್ಕಾ ಅನ್ನಲ್ಲ ಎಂದಿದ್ದರು. ಮುಂದುವರೆದು, ಗುಟ್ಕಾ ಹಾನಿಕಾರಕ ಎನ್ನುವುದಾದರೆ ಆ ಉತ್ಪವನ್ನೇ ನಿಷೇಧ ಮಾಡಲಿ ಜಾಹೀರಾತನ್ನು ಮಾತ್ರ ನಿಷೇಧ ಮಾಡುವಂತೆ ಒತ್ತಾಯಿಸುವುದು ಏಕೆ ಎಂದು ಪ್ರಶ್ನಿಸಿದ್ದರು.

ಬಾಲಿವುಡ್ ನಟರು ಮಾತ್ರವೇ ಅಲ್ಲ, ದಕ್ಷಿಣ ಭಾರತದ ಕೆಲವು ನಟರು ಸಹ ಗುಟ್ಕಾ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ನಟ ಯಶ್, ತೆಲುಗಿನ ಅಲ್ಲು ಅರ್ಜುನ್, ಬಾಲಿವುಡ್‌ನ ಅಮೀರ್ ಖಾನ್ ಅಂಥಹವರು ಗುಟ್ಕಾ ಉತ್ಪನ್ನಗಳ ಜಾಹೀರಾತಿನಲ್ಲಿ ನಟಿಸಲು ಒಲ್ಲೆ ಎಂದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

More from Filmibeat

English summary
Complaint against Amitabh Bachchan, Shah Rukh Khan, Ajay Devgn, Ranveer Singh and other stars for promoting gutka product.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X