300 ಸಿಬ್ಬಂದಿಗೆ ಹಣ ಕೊಟ್ಟಿಲ್ಲ: ನಟ ಫರ್ಹಾನ್ ಅಖ್ತರ್ ವಿರುದ್ಧ ದೂರು

ಬಾಲಿವುಡ್‌ನ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ಫರ್ಹಾನ್ ಅಖ್ತರ್ ವಿರುದ್ಧ ದೂರು ದಾಖಲಾಗಿದೆ. ಫರ್ಹಾನ್ ಅಖ್ತರ್, ಗೆಳೆಯ ರಿತೇಶ್ ಸಿದ್ವಾನಿ ಜೊತೆ ಸೇರಿ ಎಕ್ಸೆಲ್ ಎಂಟರ್ಟೈನರ್ ಆರಂಭ ಮಾಡಿದ್ದು, ಈ ನಿರ್ಮಾಣ ಸಂಸ್ಥೆ ವಿರುದ್ಧ ಗಂಭೀರ ಆರೋಪ ಎದುರಾಗಿದೆ.

ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ಒಡೆತನದ ಎಕ್ಸೆಲ್ ಎಂಟರ್ಟೈನರ್ ನಿರ್ಮಾಣ ಸಂಸ್ಥೆಯು 300 ಮಂದಿ ಕಾರ್ಮಿಕರಿಗೆ ಹಣ ಬಾಕಿ ಉಳಿಸಿಕೊಂಡಿದೆ ಎಂದು ಎಫ್‌ಎಸ್‌ಎಸ್‌ಎಎಂಯು (ಫಿಲಂ ಸ್ಟುಡಿಯೋ ಸೆಟ್ಟಿಂಗ್ಸ್ ಮತ್ತು ಏಲ್ಡ್ ಮಜ್ದೂರ್ ಯೂನಿಯನ್) ಆರೋಪ ಮಾಡಿದೆ.

ಮಾಧ್ಯಮಗಳಿಗೆ ಪತ್ರ ಬರೆದಿರುವ ಎಫ್‌ಎಸ್‌ಎಸ್‌ಎಎಂಯು ಸಂಘಟನೆ, ಎಕ್ಸೆಲ್ ಎಂಟರ್ಟೈನರ್ ನಿರ್ಮಾಣ ಸಂಸ್ಥೆಯು ತನ್ನ ಸಂಘಟನೆಯ ಸುಮಾರು 300 ಸದಸ್ಯರಿಗೆ ಸಂಬಳದ ಬಾಕಿ ಹಣ ನೀಡಿಲ್ಲದೆ ದುಡಿಸಿಕೊಳ್ಳುತ್ತಿದೆ ಎಂದಿದೆ. ಸುಮಾರು 25 ಲಕ್ಷ ರುಪಾಯಿ ಹಣ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದೆ ಸಂಘಟನೆ.

Complaint Against Farhan Akhtars Excel Entertainment Production House For Not Making Payment

ಇದೇ ವರ್ಷದ ಮೇ ತಿಂಗಳಲ್ಲಿ ಎಕ್ಸೆಲ್‌ ನಿರ್ಮಾಣ ಮಾಡುತ್ತಿರುವ ವೆಬ್ ಸೀರೀಸ್ ಒಂದರ (ಮಿರ್ಜಾಪುರ 3) ಚಿತ್ರೀಕರಣಕ್ಕಾಗಿ ದುಡಿದಿದ್ದು, ಅವರಿಗೆ ಸಂಬಳ ನೀಡಲಾಗಿಲ್ಲ. ಅಲ್ಲದೆ ಕಾರ್ಮಿಕ ಕಾನೂನು ಮೀರಿ ಹೆಚ್ಚಿನ ಅವಧಿಗೆ ಕೆಲಸ ಮಾಡಿಸಿಕೊಳ್ಳಲಾಗಿದೆ. ಅಲ್ಲದೆ ಅವರಿಗೆ ಸೂಕ್ತವಾದ ಆಹಾರ ಹಾಗೂ ವಿಶ್ರಾಂತಿ ವ್ಯವಸ್ಥೆಯನ್ನು ಸಹ ನೀಡಲಾಗಿಲ್ಲ ಎಂದು ಸಂಘಟನೆ ಆರೋಪ ಮಾಡಿದೆ.

ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಎಕ್ಸೆಲ್ ನಿರ್ಮಾಣ ಸಂಸ್ಥೆ, ''ಈ ರೀತಿಯ ಆರೋಪವೊಂದನ್ನು ನಾವು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇವೆ. ಈಗ ನಮ್ಮ ವಿರುದ್ಧ ಆರೋಪ ಮಾಡಿರುವ ಸಂಘಟನೆ ನಮಗೆ ಈ ಬಗ್ಗೆ ಈವರೆಗೆ ಇ-ಮೇಲ್ ಮೂಲಕವಾಗಲಿ, ದೂರವಾಣಿ ಮೂಲಕವಾಗಲಿ, ಪತ್ರ ಮುಖೇನವಾಗಲಿ ದೂರು ನೀಡಿಲ್ಲ. ನೇರವಾಗಿ ಮಾಧ್ಯಮಗಳಿಗೆ ಪತ್ರ ಬರೆದಿದೆ' ಎಂದಿದ್ದಾರೆ.

''ನಾವು 22 ವರ್ಷದಿಂದಲೂ ಈ ವ್ಯವಹಾರದಲ್ಲಿದ್ದು ಈ ವರೆಗೆ ನಮ್ಮ ಮೇಲೆ ಪೇಮೆಂಟ್ ವಿಳಂಬ ಮಾಡಿರುವ ದೂರು ಬಂದಿಲ್ಲ. ನಮ್ಮಲ್ಲಿ ಪೇಮೆಂಟ್ ಮಾಡಲೆಂದೇ ಪ್ರತ್ಯೇಕ ವಿಭಾಗವು, ಅದರ ಮೇಲ್ವಿಚಾರಣೆಗೆ ಪ್ರತ್ಯೇಕ ವಿಭಾಗವೂ ಇದೆ. ಜೊತೆಗೆ ನಮ್ಮ ಸಂಸ್ಥೆಯು ಶಿಸ್ತಿನ ದೂರು ವಿಭಾಗವನ್ನು ನಡೆಸಿಕೊಂಡು ಬಂದಿದೆ. ಕಟ್ಟಕಡೆಯ ವ್ಯಕ್ತಿ ಸಹ ಬಂದು ಸಂಸ್ಥೆಯ ಬಗ್ಗೆ ಸಂಸ್ಥೆಯ ನೌಕರನ ಬಗ್ಗೆ ದೂರು ನೀಡಿ ನ್ಯಾಯ ಪಡೆಯಬಹುದಾಗಿದೆ'' ಎಂದಿದ್ದಾರೆ.

''ನಮ್ಮ ನಿರ್ಮಾಣ ಸಂಸ್ಥೆಗಾಗಿ ಕೆಲಸ ಮಾಡುವ ಸಿಬ್ಬಂದಿಗೆ, ದಿನಗೂಲಿ ನೌಕರರಿಗೆ ನೇರವಾಗಿ ಪೇಮೆಂಟ್ ಮಾಡುತ್ತೇವೆ. ಯಾವುದೇ ಸಂಘ-ಸಂಸ್ಥೆಯ ಮೂಲಕ ಸಿಬ್ಬಂದಿಗೆ ಪೇಮೆಂಟ್ ಮಾಡುವುದಿಲ್ಲ. ನಮ್ಮ ಆರೇಳು ಪ್ರಾಜೆಕ್ಟ್‌ಗಳು ಪ್ರಸ್ತುತ ಚಾಲ್ತಿಯಲ್ಲಿವೆ ಎಲ್ಲದರಲ್ಲೂ ಅದೇ ರೀತಿಯ ವ್ಯವಹಾರ ಮಾಡುತ್ತಿದ್ದೇವೆ'' ಎಂದು ಎಕ್ಸೆಲ್ ಹೇಳಿದೆ.

''ಈಗ ಮಾಡಲಾಗಿರುವ ಆರೋಪದ ಬಗ್ಗೆ ನಾವು ಆಂತರಿಕ ತನಿಖೆ ನಡೆಸುತ್ತೇವೆ. ಎಕ್ಸೆಲ್ ಸಂಸ್ಥೆಗೆ ಈ ಉದ್ಯಮದಲ್ಲಿ ತನ್ನದೇ ಆದ ಗೌರವ ಇದೆ. ನಾವು ಎಲ್ಲ ತೆರೆನಾದ ಕಾರ್ಮಿಕರನ್ನು ಸಮಾನ ಗೌರವದಿಂದ ಕಾಣುವುದನ್ನು ಸಂಸ್ಥೆಯ ಪಾಲಿಸಿಯಾಗಿಸಿಕೊಂಡಿದ್ದೇವೆ'' ಎಂದಿದೆ ಎಕ್ಸೆಲ್.

More from Filmibeat

English summary
Complaint against Farhan Akhtar's excel entertainment production house for not making payment to daily wagers who worked for their web series project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X