For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಿನಿಮಾ ವಿರುದ್ಧ ದೂರು ದಾಖಲು

  By Bharath Kumar
  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಸೇರಿದಂತೆ ಇತರೆ ವ್ಯಕ್ತಿಗಳು ವಿರುದ್ಧ ಬಿಹಾರದ ನ್ಯಾಯಾಲದಲ್ಲಿ ದೂರು ದಾಖಲಾಗಿದೆ. ಹಿಂದೂ ಧರ್ಮದ ಧಾರ್ಮಿಕ ನಂಬಕೆಗಳಿಗೆ ಧಕ್ಕೆ ತರುವಂತೆ ಸಿನಿಮಾ ಮಾಡುತ್ತಿದ್ದಾರೆ ಎಂದು ವಕೀಲರೊಬ್ಬರು ದೂರು ನೀಡಿದ್ದಾರೆ.

  ಸಲ್ಮಾನ್ ಖಾನ್ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ಲವ್ ರಾತ್ರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಈ ಚಿತ್ರದ ಹೆಸರು ಹಿಂದೂ ನಂಬಿಕೆಗಳಿಗೆ ನೋವುಂಟು ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

  ಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟಕೇರಳಕ್ಕೆ 12 ಕೋಟಿ ಕೊಟ್ಟ ಸಲ್ಮಾನ್ ಖಾನ್: ಟ್ವೀಟ್ ಮಾಡಿ ಡಿಲೀಟ್ ಮಾಡಿದ ನಟ

  ದಸರಾ ಹಬ್ಬದ ನವರಾತ್ರಿ ಪದದ ಸಂಕೇತವಾಗಿ 'ಲವ್ ರಾತ್ರಿ' ಬಳಸಲಾಗಿದೆ. ಈ ಚಿತ್ರದಿಂದ ದುರ್ಗಾದೇವಿಗೆ ಅವಮಾನ ಮಾಡಲಾಗಿದೆ ಎಂದು ವಕೀಲರು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

  ದಸರಾ ಹಬ್ಬದ ಪ್ರಯುಕ್ತ ಈ ಸಿನಿಮಾ ಅಕ್ಟೋಬರ್ 5 ರಂದು ಬಿಡುಗಡೆಯಾಗಿತ್ತಿದೆ. ಇದು ಕೂಡ ದುರ್ಗಾದೇವಿಗೆ ಮಾಡುತ್ತಿರುವ ಅಪಮಾನ ಎಂದು ಸುಧೀರ್ ಕುಮಾರ್ ಓಜಾ ಎಂಬ ವಕೀಲರು ಪ್ರಕರಣ ದಾಖಲಿಸಿದ್ದಾರೆ.

  ಸಲ್ಮಾನ್ ಸಹಾಯ ಹಸ್ತದಿಂದ ಮರುಜೀವ ಪಡೆದ ನಟಿ ಪೂಜಾ ದದ್ವಾಲ್ಸಲ್ಮಾನ್ ಸಹಾಯ ಹಸ್ತದಿಂದ ಮರುಜೀವ ಪಡೆದ ನಟಿ ಪೂಜಾ ದದ್ವಾಲ್

  ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮುಜಫ್ಫರ್ ಪುರ ಉಪ ವಿಭಾಗೀಯ ಜ್ಯುಡಿಶಿಯಲ್ ಮ್ಯಾಜಿಸ್ಪ್ರೇಟ್ ಶೈಲೇಂದ್ರ ಕುಮಾರ್‌ ಅವರು ಇದೇ ತಿಂಗಳ 12ನೇ ತಾರೀಖಿಗೆ ವಿಚಾರಣೆಯನ್ನು ನಿಗದಿಪಡಿಸಿದ್ದಾರೆ.

  ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!

  ಇನ್ನುಳಿದಂತೆ ಈ ಚಿತ್ರವನ್ನ ಸಲ್ಮಾನ್ ಖಾನ್ ನಿರ್ಮಾಣ ಮಾಡಿದ್ದು, ಸಲ್ಮಾನ್ ಸಂಬಂಧಿ ಆಯುಷ್ ಶರ್ಮಾ ಹಾಗೂ ಹೊಸ ನಟಿ ವರೀನಾ ಹುಸೇನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಭಿರಾಜ್ ಮಿನವಾಲಾ ಎಂಬ ಯುವ ನಿರ್ದೇಶಕ ಮೊದಲ ಭಾರಿಗೆ ನಿರ್ದೇಶನ ಮಾಡಿದ್ದಾರೆ. ಖ್ಯಾತ ನಟರಾದ ರಾಮ್ ಕಪೂರ್ ಮತ್ತು ರೊನಿತ್ ರಾಯ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  An advocate Sudhir Kumar Ojha filed a complaint in a Bihar court against Salman Khan and others associated with his next home production Loveratri, alleging that the title of the film hurts Hindu sentiments by deriding the festival of Navaratri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X