RRR ನಟಿ ಆಲಿಯಾ ಭಟ್ ವಿರುದ್ಧ ಪ್ರಕರಣ ದಾಖಲು
ಬಾಲಿವುಡ್ ನಟಿ ಆಲಿಯಾ ಭಟ್ ವಿರುದ್ಧ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿದೆ. ಆಲಿಯಾ ಭಟ್ ಮಾತ್ರವಲ್ಲದೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿರುವ 'ಗಂಗೂಬಾಯಿ ಕಾತೇವಾಡಿ' ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಗಂಗೂಬಾಯಿ ಕಾತೇವಾಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ.
ಗಂಗೂಬಾಯಿ ಕಾತೇವಾಡಿ ಕುಟುಂಬಸ್ಥರು ಈಗ ನಟಿ ಆಲಿಯಾ ಭಟ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ದೂರು ದಾಖಲಿಸಿದ್ದಾರೆ.

'ಗಂಗೂಬಾಯಿ ಕಾತೇವಾಡಿ' 'ದಿ ಮಾಫಿಯಾ ಕ್ವೀನ್' ಹೆಸರಿನಲ್ಲಿ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇದು ಗಂಗೂಬಾಯಿ ಕಾತೇವಾಡಿ ಕುಟುಂಬದ ಕಣ್ಣು ಕೆಂಪಗೆ ಮಾಡಿದೆ ಹಾಗಾಗಿ ಕುಟುಂಬ ಸದಸ್ಯರು ಬಾಂಬೆ ಸಿವಿಲ್ ಕೋರ್ಟ್‌ನಲ್ಲಿ ಆಲಿಯಾ ಭಟ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಕತೆ ಬರಹಗಾರರ ವಿರುದ್ಧ ದೂರು ದಾಖಲಿಸಿದೆ.
ಗಂಗೂಬಾಯಿ ಕಾತೇವಾಡಿಯನ್ನು ಅಸಭ್ಯ ರೀತಿಯಲ್ಲಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ, ಸಿನಿಮಾದ ಚಿತ್ರೀಕರಣವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.
ಸಿನಿಮಾವು 'ದಿ ಮಾಫಿಯಾ ಕ್ವೀನ್ ಆಫ್ ಮುಂಬೈ' ಹೆಸರಿನ ಪುಸ್ತಕದ ಮೇಲೆ ಆಧರಿತವಾಗಿದ್ದು, ಪುಸ್ತಕವನ್ನು ಜೈದಿ ಬರೆದಿದ್ದಾರೆ. ಜೈದಿ ವಿರುದ್ಧವೂ ಕುಟುಂಬ ಸದಸ್ಯರು ದೂರು ನೀಡಿದ್ದಾರೆ.
Recommended Video
ನಟಿ ಆಲಿಯಾ ಭಟ್ ಪ್ರಸ್ತುತ ಆರ್‌ಆರ್‌ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಶೆಡ್ಯೂಲ್ ಬಳಿಕ ಗಂಗೂಬಾಯಿ ಕಾತೇವಾಡಿ ಚಿತ್ರೀಕರಣ ಪೂರ್ಣಗೊಳಿಸಲಿದ್ದಾರೆ ನಟಿ.


Click it and Unblock the Notifications











