For Quick Alerts
  ALLOW NOTIFICATIONS  
  For Daily Alerts

  ಭಾರತ ನಕ್ಷೆಯ ವಿರೂಪ ಚಿತ್ರ ಪೋಸ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟನ ವಿರುದ್ಧ ದೂರು ದಾಖಲು

  |

  ಸಾಮಾಜಿಕ ಜಾಲತಾಣದಲ್ಲಿ ಭಾರತ ನಕ್ಷೆಯ ವಿರೂಪ ಚಿತ್ರ ಪೋಸ್ಟ್ ಮಾಡಿದ ಬಾಲಿವುಡ್ ನ ಖ್ಯಾತ ನಟ ಫರಾನ್ ಅಖ್ತಾರ್ ವಿರುದ್ಧ ದೂರು ದಾಖಲಾಗಿದೆ. ಗೋವ ಸೈಬರ್ ಪೊಲೀಸ್ ಅಪರಾಧ ವಿಭಾಗಕ್ಕೆ ದೂರು ನೀಡಲಾಗಿದೆ. ಗೋವ ಕ್ರಾನಿಕಲ್.ಕಾಮ್ ನ ಪ್ರಧಾನ ಸಂಪಾದಕರು ಆಗಿರುವ ಸವಿಯೊ ರೋಡ್ರಿಗಸ್ ದೂರು ನೀಡಿದ್ದಾರೆ.

  ನಟನಿಗೆ CAA ಬಗ್ಗೆ ಏನು ತಿಳಿದಿಲ್ಲ ಮತ್ತು CAA ವಿರುದ್ಧ ನಿಲ್ಲುವಂತೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಟ ಫರಾನ್ ಅಖ್ತಾರ್ ಟ್ವಿಟ್ಟರ್ ನಲ್ಲಿ 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ಮುಂಬೈನ ಕ್ರಾಂತಿ ಮೈದಾನದಲ್ಲಿ ಸೇರುವಂತೆ ಟ್ವಿಟ್ಟ್ ಮಾಡಿದ್ದರು.

  ಪ್ರತಿಭಟನೆಗೆ ಜನರನ್ನು ಆಹ್ವಾನಿಸುವ ಜೊತೆಗೆ ವಿರೂಪಗೊಳಿಸಿದ ಭಾರತ ನಕ್ಷೆಯನ್ನು ಶೇರ್ ಮಾಡಿದ್ದರು. ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಪ್ರತ್ಯೇಕಗೊಳಿಸಲಾಗಿತ್ತು. ಅಂದ್ಹಾಗೆ ಫರಾನ್ ಪೋಸ್ಟ್ ಮಾಡಿದ್ದ ನಕ್ಷೆಯನ್ನು, ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸದ ಕಾಶ್ಮೀರಿ ಪ್ರತ್ಯೇಕತವಾದಿಗಳು ಹೆಚ್ಚಾಗಿ ಈ ನಕ್ಷೆಯನ್ನು ಬಳಸುತ್ತಾರೆ.

  ಇಂತಹ ವಿಕೃತಗೊಳಿಸಿದ ಭಾರತಗ ನಕ್ಷೆಯನ್ನು ಪೋಸ್ಟ್ ಮಾಡಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಫರಾನ್ ವಿರುದ್ಧ ಆರೋಪ ಕೇಳಿಬರುತ್ತಿದೆ. ಪೋಸ್ಟ್ ಮಾಡಿ ಸುಮಾರು 14 ದಿನಗಳಾದರು ಈ ಫೋಸ್ಟ್ ಅನ್ನು ಟ್ವಿಟ್ಟರ್ ನಿಂದ ಇನ್ನು ಡಿಲಿಟ್ ಮಾಡಿಲ್ಲ. ಹಾಗಾಗಿ ಆ ನಟನ ನಿಜವಾದ ಉದ್ದೇಶವೇನು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಸವಿಯೊ ರೋಡ್ರಿಗಸ್ ಹೇಳಿದ್ದಾರೆ.

  ಫರಾನ್ ಈ ಫೋಸ್ಟ್ ಮಾಡಿದ ನಂತರ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಬಾಯ್ ಕಟ್ ಫರಾನ್ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ವಿವಾದ ದೊಡ್ಡದಾಗುತ್ತಿದ್ದಂತೆ ಫರಾನ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದಾರೆ. ಗ್ರಾಫಿಕ್ಸ್ ಮಾಡುವಾಗ ಭಾರತದ ನಕ್ಷೆ ತಪ್ಪಾಗಿದೆ. ಕಾಶ್ಮೀರದ ಪ್ರತಿ ಇಂಚು ಕೂಡ ಭಾರತದ್ದೆ. ಈ ಪೋಸ್ಟ್ ಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

  English summary
  Complaint filed against bollywood actor farhan akhtar For Posting incorrect Map of India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X