For Quick Alerts
  ALLOW NOTIFICATIONS  
  For Daily Alerts

  ನಟಿ ಕರೀನಾ ಕಪೂರ್ ಖಾನ್ ವಿರುದ್ಧ ದೂರು ದಾಖಲು

  |

  ಸೆಲೆಬ್ರಿಟಿಗಳು ಏನು ಮಾಡಿದರು ಹುಳುಕು ಹುಡುಕಲು, ಟ್ರೋಲ್ ಮಾಡಲು, ದೂರು ನೀಡಲು ಕೆಲವರು ಕಾಯುತ್ತಿರುತ್ತಾರೆ. ಎಷ್ಟು ದೊಡ್ಡ ಸ್ಟಾರ್‌ಗಳು ಅಷ್ಟು ಸಮಸ್ಯೆ.

  ಇದೀಗ ನಟಿ ಕರೀನಾ ಕಪೂರ್ ವಿರುದ್ಧ ಮಹಾರಾಷ್ಟ್ರದ ಬೀಡ್ ನಗರದ ಪೊಲೀಸ್ ಠಾಣೆಯೊಂದರಲ್ಲಿ ಗುಂಪೊಂದು ದೂರು ನೀಡಿದೆ.

  ಇತ್ತೀಚೆಗಷ್ಟೆ ಎರಡನೇ ಮಗುವಿಗೆ ತಾಯಿಯಾದ ನಟಿ ಕರೀನಾ ಕಪೂರ್, ಗರ್ಭಿಣಿ ಆಗಿದ್ದಾಗಿನ ಅನುಭವಗಳು, ತಾಯಿಯಾಗುವ ಪಯಣದ ಮಹತ್ವ, ತೆಗೆದುಕೊಳ್ಳಬೇಕಾದ ಎಚ್ಚರಿಕೆ ಇತರೆ ವಿಷಯಗಳನ್ನು ಸೇರಿಸಿ ಪುಸ್ತಕವೊಂದನ್ನು ಹೊರತಂದಿದ್ದರು. ಅದಕ್ಕೆ 'ಕರೀನಾ ಕಪೂರ್ ಖಾನ್‌'ಸ್ ಪ್ರೆಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು.

  ಈ ಹೆಸರು ಕೆಲವರಿಗೆ ಇಷ್ಟವಾಗಿಲ್ಲ. ಮಹಾರಾಷ್ಟ್ರದ ಬಿಡೆಯಲ್ಲಿನ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಸದಸ್ಯರು ಕರೀನಾ ಕಪೂರ್ ವಿರುದ್ಧ ನಗರದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

  ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ: ಆರೋಪ

  ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದಾರೆ: ಆರೋಪ

  ಈ ಬಗ್ಗೆ ಮಾತನಾಡಿರುವ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶಿಶ್ ಶಿಂಧೆ, ''ಪುಸ್ತಕಕ್ಕೆ ಬೈಬಲ್ ಎಂದು ಹೆಸರಿಟ್ಟಿರುವುದರಿಂದ ಕ್ರಿಶ್ಚಿಯನ್ನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ ಕರೀನಾ ಕಪೂರ್ ಹಾಗೂ ಆ ಪುಸ್ತಕದ ಮತ್ತೊಬ್ಬ ಲೇಖಕಿಯ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ದುಷ್ಕೃತ್ಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದು, ಮತ್ತೊಬ್ಬರ ಧರ್ಮವನ್ನು ಅವಹೇಳನ ಮಾಡುವುದು) ಎಂದು ಒತ್ತಾಯಿಸಲಾಗಿದೆ'' ಎಂದಿದ್ದಾರೆ.

  ಎಫ್‌ಐಆರ್ ದಾಖಲಾಗಿಲ್ಲ

  ಎಫ್‌ಐಆರ್ ದಾಖಲಾಗಿಲ್ಲ

  ಈ ಬಗ್ಗೆ ಮಾತನಾಡಿರುವ ಶಿವಾಜಿನಗರ ಪೊಲೀಸ್ ಠಾಣೆ ಅಧಿಕಾರಿ, ''ಕರೀನಾ ಕಪೂರ್ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಘಟನೆ ಇಲ್ಲಿ ನಡೆದಿಲ್ಲವಾದ ಕಾರಣ ಎಫ್‌ಐಆರ್ ದಾಖಲಿಸಲಾಗಿಲ್ಲ. ಅವರಿಗೆ ಮುಂಬೈಗೆ ಹೋಗಿಯೇ ದೂರು ನೀಡುವಂತೆ ಸಲಹೆ ನೀಡಿದ್ದೇನೆ'' ಎಂದಿದ್ದಾರೆ.

  ಕರೀನಾ ಕಪೂರ್ ಹಾಗೂ ಅದಿತಿ ಶಿಂಧೆ ಭೀಮ್ಜಾನಿ ಬರೆದ ಪುಸ್ತಕ

  ಕರೀನಾ ಕಪೂರ್ ಹಾಗೂ ಅದಿತಿ ಶಿಂಧೆ ಭೀಮ್ಜಾನಿ ಬರೆದ ಪುಸ್ತಕ

  ಜುಲೈ 9 ರಂದು ಕರೀನಾ ಕಪೂರ್, ''ಕರೀನಾ ಕಪೂರ್ ಖಾನ್'ಸ್ ಪ್ರೆಗ್ನೆನ್ಸಿ ಬೈಬಲ್' ಪುಸ್ತಕ ಬಿಡುಗಡೆ ಮಾಡಿದರು. ಈ ಪುಸ್ತಕವನ್ನು ಕರೀನಾ ಕಪೂರ್ ಹಾಗೂ ಅದಿತಿ ಶಿಂಧೆ ಭೀಮ್ಜಾನಿ ಬರೆದಿದ್ದಾರೆ. ಪುಸ್ತಕವನ್ನು ಜಗ್ಗರ್‌ನಟ್ ಬುಕ್ಸ್ ಹೊರತಂದಿದೆ.

  ದರ್ಶನ್ ವಿರುದ್ದ ತಿರುಗಿ ಬಿದ್ದ ಇಂದ್ರಜಿತ್ ಲಂಕೇಶ್ | Filmibeat Kannada
  ಎರಡನೇ ಮಗುವಿಗೆ ಜೆಹ್ ಎಂದು ಹೆಸರು

  ಎರಡನೇ ಮಗುವಿಗೆ ಜೆಹ್ ಎಂದು ಹೆಸರು

  ಕರೀನಾ ಕಪೂರ್ ಇತ್ತೀಚೆಗೆ ಎರಡನೇ ಮಗುವಿನ ತಾಯಿಯಾಗಿದ್ದು ಮಗುವಿಗೆ ಜೆಹ್ ಎಂದು ಹೆಸರಿಟ್ಟಿದ್ದಾರೆ. ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟದ್ದರು. ಮೊದಲ ಮಗುವಿಗೆ ಹೆಸರಿಟ್ಟಾಗ ಕರೀನಾ ಹಾಗೂ ಸೈಫ್ ಅಲಿ ಖಾನ್ ಭಾರಿ ವಿರೋಧ ಎದುರಿಸಬೇಕಾಯ್ತು. ಹಾಗಾಗಿ ಈ ಬಾರಿ ಎಚ್ಚರಿಕೆಯಿಂದ ಹೆಸರು ಆಯ್ಕೆ ಮಾಡಿದ್ದಾರೆ. ಕರೀನಾ ಕಪೂರ್ ಪ್ರಸ್ತುತ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಅಮೀರ್ ಮುಖ್ಯ ಪಾತ್ರದಲ್ಲಿದ್ದಾರೆ. ತೆಲುಗಿನ ನಾಗಚೈತನ್ಯ ಸಹ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Complaint lodged against actress Kareena Kapoor for hurting religious sentiments by naming her new book as 'Kareena Kapoor Khan's Pregnancy Bible'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X