'ಚಪಾಕ್' ಚಿತ್ರದ 920 ಟಿಕೆಟ್ ಪಡೆದ ಕಾಂಗ್ರೆಸ್ ನಾಯಕ

ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ಮುಸುಕುದಾರಿ ತಂಡ ಮಾಡಿದ್ದ ದಾಳಿಯನ್ನ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಖಂಡಿಸಿದ್ದರು. ಖುದ್ದು ಜೆ ಎನ್ ಯು ಕ್ಯಾಂಪಸ್ ಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಜೆ ಎನ್ ಯು ವಿದ್ಯಾರ್ಥಿಗಳ ಪರ ಬಹಿರಂಗವಾಗಿ ದನಿ ಎತ್ತಿದ ದೀಪಿಕಾ ಪಡುಕೋಣೆಯ ನಿರ್ಧಾರವನ್ನು ಹಲವು ಸ್ವಾಗತಿಸಿದರು. ಹಲವರು ವಿರೋಧಿಸಿದರು. ದೀಪಿಕಾ ಜೆ ಎನ್ ಯು ಪ್ರವೇಶ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣ ಆಯ್ತು.

ಇದರ ಪರಿಣಾಮ ಕೆಲವು ಬಿಜೆಪಿ ನಾಯಕರು ದೀಪಿಕಾ ಪಡುಕೋಣೆ ನಟನೆಯ ಚಪಾಕ್ ಚಿತ್ರವನ್ನು ವಿರೋಧಿಸಿದರು. ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಕಿಡಿಕಾರಿದರು. ಪ್ರಮುಖ ದೆಹಲಿ ಬಿಜೆಪಿ ಮುಖಂಡರು ಚಪಾಕ್ ಬಹಿಷ್ಕರಿಸಲು ಕರೆ ನೀಡಿದರು. ಇದಕ್ಕೆ ಪ್ರತಿಯಾಗಿ ದೆಹಲಿ ಕಾಂಗ್ರೆಸ್ ಕಾರ್ಯಕತರು ದೀಪಿಕಾ ಪಡುಕೋಣೆ ಪರವಾಗಿ ಬೆಂಬಲವಾಗಿ ನಿಂತರು .

Congress Leader Bought 920 Chhapaak Movie Tickets

ಚಪಾಕ್ ಚಿತ್ರವನ್ನ ಬೆಂಬಲಿಸುವ ಉದ್ದೇಶದಿಂದ ಇಡೀ ಶೋ ಬುಕ್ ಮಾಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿನಿಮಾ ತೋರಿಸಿದ್ದಾರೆ. ಶುಕ್ರವಾರ ಮಧ್ಯಾಹ್ನದ ಶೋ ಒಂದರ ಒಟ್ಟು 920 ಟಿಕೆಟ್ ಅನ್ನು ಕಾಂಗ್ರೆಸ್ ನಾಯಕರು ಖರೀದಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದಾರೆ.

ಈ ಕುರಿತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಮಾತನಾಡಿದ್ದು ''ದೀಪಿಕಾ ಪಡುಕೋಣೆಯನ್ನು ಬೆಂಬಲಿಸುವ ಉದ್ದೇಶದಿಂದ ಟಿಕೆಟ್ ಖರೀದಿಸಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳ ಜೊತೆ ನಿಲ್ಲುವ ಧೈರ್ಯ ತೋರದವರಿಂದ ನಾವು ಯಾವುದೇ ಬಹಿಷ್ಕಾರವನ್ನು ಬಯಸುವುದಿಲ್ಲ'' ಎಂದು ಹೇಳಿದ್ದಾರೆ.

Congress Leader Bought 920 Chhapaak Movie Tickets

ನಿರೀಕ್ಷೆಯಂತೆ ಚಪಾಕ್ ಸಿನಿಮಾ ತೆರೆಕಂಡಿದೆ. ಹಲವು ಕಡೆ ಉತ್ತಮ ಒಪನಿಂಗ್ ಸಿಕ್ಕಿದೆ. ಕೆಲವು ಕಡೆ ನಿರಸ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಜೆ ಎನ್ ಯು ವಿದ್ಯಾರ್ಥಿಗಳ ಪರ ದೀಪಿಕಾ ನಿಂತಿದ್ದು ಚಿತ್ರಕ್ಕೆ ಹಿನ್ನಡೆಯಾಗುವಂತೆ ಮಾಡಿದೆ ಎನ್ನುವುದು ವಾಸ್ತವ.

More from Filmibeat

English summary
Congress Leader bought 920 Chapaak movie tickets for support Deepika padukone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X