For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಳ ನಾಯಿ: ಕಾಂಗ್ರೆಸ್ ಮುಖಂಡ

  |

  ಭಾರತದ ಹೆಮ್ಮೆಯ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ನಾಯಿಗೆ ಹೋಲಿಸಲಾಗಿದೆ. ಕಾಂಗ್ರೆಸ್ ಮುಖಂಡನೊಬ್ಬ 'ವಿರಾಟ್ ಕೊಹ್ಲಿ, ಅನುಷ್ಕಾಳ ನಾಯಿ ಇದ್ದಂತೆ' ಎಂದಿದ್ದಾರೆ.

  ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada

  ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದ ವಿರಾಟ್ ಕೊಹ್ಲಿ, ಪಟಾಕಿಗಳನ್ನು ಸಿಡಿಸಬೇಡಿ, ದೀಪಗಳು ಹಾಗೂ ಸಿಹಿ ಹಂಚಿ ಸಂಭ್ರಮಿಸಿ ಎಂದಿದ್ದರು. ಇದು ಕೆಲವರನ್ನು ಸಿಟ್ಟಿಗೇಳಿಸಿತ್ತು.

  ಕೊಹ್ಲಿಯ ಸಂದೇಶದ ವಿರುದ್ಧ ಟ್ವಿಟ್ಟರ್‌ನಲ್ಲಿ ಸಾಕಷ್ಟು ಮಂದಿ ಕೊಹ್ಲಿ ಹಾಗೂ ಅನುಷ್ಕಾ ಗೆ ಮೂದಲಿಸಿದ್ದರು. ಕೆಲವರು ಬೆಂಬಲವನ್ನೂ ನೀಡಿದ್ದರು. ಆದರೆ ಕಾಂಗ್ರೆಸ್‌ನ ಮುಖಂಡ ಉದಿತ್ ರಾಜ್, ಕೊಹ್ಲಿ ಹೇಳಿಕೆಯನ್ನು ಬೆಂಬಲಿಸಿದ್ದಾರಾದರೂ, ಕೊಹ್ಲಿಯನ್ನು ನಾಯಿ ಎಂದು ಕರೆದಿದ್ದಾರೆ.

  ಅನುಷ್ಕಾ ಶರ್ಮಾಳ ನಾಯಿ ವಿರಾಟ್ ಕೊಹ್ಲಿ: ಉದಿತ್ ರಾಜ್

  ಅನುಷ್ಕಾ ಶರ್ಮಾಳ ನಾಯಿ ವಿರಾಟ್ ಕೊಹ್ಲಿ: ಉದಿತ್ ರಾಜ್

  ಪಟಾಕಿ ಹೇಳಿಕೆಯಿಂದ ಕೊಹ್ಲಿ ಮೇಲಾಗುತ್ತಿದ್ದ ಬೈಗುಳಗಳ ಸುರಿಮಳೆಯನ್ನು ಖಂಡಿಸಿರುವ ಉದಿತ್ ರಾಜ್, 'ಅನುಷ್ಕಾಳ ನಾಯಿ ಕೊಹ್ಲಿಯನ್ನು ಆಕೆ ಜೋಪಾನ ಮಾಡಬೇಕಿಲ್ಲ. ನಾಯಿಗಿಂತಲೂ ನಿಯತ್ತಿನ ಪ್ರಾಣಿ ಮತ್ತೊಂದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ ಉದಿತ್ ರಾಜ್.

  'ಕೊಹ್ಲಿಯನ್ನು ಬೈಯ್ಯುತ್ತಿರುವವರು ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಿ'

  'ಕೊಹ್ಲಿಯನ್ನು ಬೈಯ್ಯುತ್ತಿರುವವರು ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಿ'

  ಮುಂದುವರೆದು, 'ಫುಂಡ, ಫಟಿಂಗ, ಲೂಟಿಕೋರರಾ ವಾಯುಮಾಲಿನ್ಯದಿಂದ ಕೋಟ್ಯಂತರ ಜನರಿಗೆ ತೊಂದರೆ ಆಗುತ್ತಿದೆ. ಕೊಹ್ಲಿಗೆ ಬೈಯುತ್ತಿರುವ ನೀವು ಇಲ್ಲಿನವರೇ ಅಥವಾ ಬೇರೆ ದೇಶದವರಾ ಎಂದು ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳಿ' ಎಂದಿದ್ದಾರೆ ಉದಿತ್ ರಾಜ್.

  ಕೊಹ್ಲಿಯನ್ನು ಬೈದವರ ವಿರುದ್ಧ ಕ್ರಮ ಕೈಗೊಳ್ಳಿ: ಉದಿತ್ ರಾಜ್

  ಕೊಹ್ಲಿಯನ್ನು ಬೈದವರ ವಿರುದ್ಧ ಕ್ರಮ ಕೈಗೊಳ್ಳಿ: ಉದಿತ್ ರಾಜ್

  ಮತ್ತೊಂದು ಟ್ವೀಟ್‌ನಲ್ಲಿ, 'ವಿರಾಟ್ ಕೊಹ್ಲಿಯ ಸಲಹೆ ಸ್ವಾಗತಿಸುವಂಥಹದು, ಆದರೆ ಕೆಲವು ಅಯೋಗ್ಯರು ಟ್ವಿಟ್ಟರ್‌ನಲ್ಲಿ ಕೊಹ್ಲಿಯನ್ನು ಮೂದಲಿಸುತ್ತಿದ್ದಾರೆ. ಸರ್ಕಾರ ಇದನ್ನೆಲ್ಲಾ ಗಮನಿಸುತ್ತಿದೆ ಎಂದುಕೊಂಡಿದ್ದೇನೆ. ಕೊಹ್ಲಿಯನ್ನು ಮೂದಲಿಸುವವರನ್ನು ಕೂಡಲೇ ಬಂಧಿಸಬೇಕು ಎಂದಿದ್ದಾರೆ ಉದಿತ್ ರಾಜ್.

  ಮಾಜಿ ಸಂಸದ ಉದಿತ್ ರಾಜ್

  ಮಾಜಿ ಸಂಸದ ಉದಿತ್ ರಾಜ್

  ಬಿಜೆಪಿಯಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಸಂಸದರಾಗಿದ್ದ ಉದಿತ್ ರಾಜ್, 2019 ರಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ತೋರಿದಾಗ ಅವರು ಇವಿಎಂಗಳನ್ನು ದೂರಿ ಟ್ವೀಟ್ ಮಾಡಿದ್ದರು.

  English summary
  Congress leader Udit Raj said Virat Kohli is Anushka Sharma's dog.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X