For Quick Alerts
  ALLOW NOTIFICATIONS  
  For Daily Alerts

  ಲೋಕಸಭಾ ಚುನಾವಣೆಯಲ್ಲಿ ಕರೀನಾ ಸ್ಪರ್ಧೆಗೆ ಕಾಂಗ್ರೆಸ್ ನಾಯಕರ ಪಟ್ಟು.!

  |

  ಶೀರ್ಷಿಕೆ ಓದಿದ ಕೂಡಲೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇದೇ ಸತ್ಯ.! ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

  ಭೋಪಾಲ್ ಮತ್ತು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರ ಕಣ್ಣು ಸದ್ಯಕ್ಕೆ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಮೇಲೆ ಬಿದ್ದಿದೆ. ಭೋಪಾಲ್ ಕ್ಷೇತ್ರದಿಂದ ಕರೀನಾ ಕಪೂರ್ ಖಾನ್ ಕಣಕ್ಕೆ ಇಳಿಸಲು ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿದ್ದಾರೆ.

  ಹಾಗಾದ್ರೆ, ಕರೀನಾ ಕಪೂರ್ ಖಾನ್ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ.? ರಾಜಕೀಯಕ್ಕೆ ಧುಮುಕಲು ಸೈಫ್ ಅಲಿ ಖಾನ್ ಮಡದಿ ರೆಡಿ ಇದ್ದಾರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಕರೀನಾ ಯಾಕೆ.?

  ಕರೀನಾ ಯಾಕೆ.?

  ಕರೀನಾ ಕಪೂರ್ ಪತಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೂಲತಃ ಭೋಪಾಲ್ ದವರು. ನಟಿ ಕರೀನಾ ಕೂಡ ಆಗಾಗ ಭೋಪಾಲ್ ಗೆ ಭೇಟಿ ನೀಡುತ್ತಲಿರುತ್ತಾರೆ. ಹೀಗಾಗಿ, ಕರೀನಾ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸುವುದು ಸೂಕ್ತ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಅಲ್ಲದೇ, ಕರೀನಾ ಮಾವ ಅಂದ್ರೆ ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ 1991 ರಲ್ಲಿ ಭೋಪಾಲ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಶತಾಯಗತಾಯ ಕರೀನಾ ರನ್ನ ಗೆಲ್ಲಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರಂತೆ.

  ಮಾರುಕಟ್ಟೆಯಲ್ಲಿ ಸೈಫ್-ಕರೀನಾ ಪುತ್ರ ತೈಮೂರ್ ಪ್ರತಿರೂಪದ ಗೊಂಬೆ.!

  ಕರೀನಾಗೆ ಟಿಕೆಟ್ ಕೊಡಿ.!

  ಕರೀನಾಗೆ ಟಿಕೆಟ್ ಕೊಡಿ.!

  ಭೋಪಾಲ್ ಕ್ಷೇತ್ರದಿಂದ ಕರೀನಾ ಕಪೂರ್ ಖಾನ್ ಗೆ ಟಿಕೆಟ್ ಕೊಡಿ ಎಂದು ಮುಖ್ಯಮಂತ್ರಿ ಕಮಲ್ ನಾಥ್ ಬಳಿ ಮನವಿ ಮಾಡಲು ಕಾರ್ಪೊರೇಟರ್ ಗುಡ್ಡು ಚೌಹಾನ್ ಅಪಾಯಿಟ್ಮೆಂಟ್ ಪಡೆದಿದ್ದಾರಂತೆ.

  ಟ್ರೋಲ್ ಮಾಡಿದವರ ಬಾಯಿಗೆ ಬೀಗ ಜಡಿದ ಕರೀನಾ ಕಪೂರ್ ಖಾನ್.!

  ಯುವಕರ ವೋಟ್ ಬ್ಯಾಂಕ್

  ಯುವಕರ ವೋಟ್ ಬ್ಯಾಂಕ್

  ಕರೀನಾ ಕಪೂರ್ ಎಲೆಕ್ಷನ್ ಗೆ ನಿಂತರೆ, ಯುವ ಸಮೂಹದ ಮತದಾನ ಪ್ರಮಾಣ ಹೆಚ್ಚಾಗುತ್ತದೆ ಎಂಬ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿದೆ. ಹೀಗಾಗಿ, ಕರೀನಾ ಪರ ಕಾಂಗ್ರೆಸ್ ನಾಯಕರು ವಾಲಿದ್ದಾರೆ.

  ಕರೀನಾ ಕಪೂರ್ ಖಾನ್ ಗೆ ಕಮ್ಮಿ ಆಗಿಲ್ಲ ಬೇಡಿಕೆ: ಸಂಭಾವನೆ ದಿಢೀರ್ ಏರಿಕೆ.!

  ಬಿಜೆಪಿ ಲೇವಡಿ

  ಬಿಜೆಪಿ ಲೇವಡಿ

  ಈ ಸುದ್ದಿ ಜಗಜಾಹ್ಹೀರಾಗುತ್ತಿದ್ದಂತೆಯೇ, ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ನಾಯಕರಿಲ್ಲ. ಹೀಗಾಗಿ, ಅಭಿನೇತ್ರಿಯರ ಹಿಂದೆ ಬಿದ್ದಿದ್ದಾರೆ ಎಂದು ಬಿಜೆಪಿ ಲೇವಡಿ ಮಾಡಿದೆ.

  ಸಿನಿಮಾಗಳಲ್ಲಿ ಕರೀನಾ

  ಸಿನಿಮಾಗಳಲ್ಲಿ ಕರೀನಾ

  ಕರೀನಾ ಕಪೂರ್ ಖಾನ್ ಕೈಯಲ್ಲಿ ಸದ್ಯಕ್ಕೆ ಅಕ್ಷಯ್ ಕುಮಾರ್ ಮತ್ತು ಕರಣ್ ಜೋಹರ್ ಚಿತ್ರಗಳಿವೆ. ಬಣ್ಣದ ಬದುಕಿನಿಂದ ಗ್ಯಾಪ್ ಪಡೆದು ರಾಜಕೀಯಕ್ಕೆ ಕರೀನಾ ಧುಮುಕುತ್ತಾರಾ.? ಈ ಬಗ್ಗೆ ಕರೀನಾ ಇನ್ನೂ ಪ್ರತಿಕ್ರಿಯೆ ಕೊಟ್ಟಿಲ್ಲ.

  English summary
  Congress Leaders in Bhopal want Kareena Kapoor Khan to contest in Elections 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X