'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆಗೆ ಕಾಂಗ್ರೆಸ್ ವಿರೋಧ: ನಟ ಚೇತನ್ ಅಹಿಂಸಾ ಹೇಳಿದ್ದಿಷ್ಟು

ಬಾಲಿವುಡ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾ ವಿವಾದದ ಬಿರುಗಾಳಿ ಎಬ್ಬಿಸಿದೆ. ಕೇರಳದ ಆಡಳಿತಾರೂಢ ಸಿಪಿಐ(ಎಂ) ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ವಿವಾದಾತ್ಮಕ 'ದಿ ಕೇರಳ ಸ್ಟೋರಿ' ವಿರುದ್ಧ ವಾಗ್ದಾಳಿ ನಡೆಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದಲ್ಲಿ ವಿಷವನ್ನು ಉಗುಳುವ ಪರವಾನಗಿಯಲ್ಲ ಎಂದಿವೆ. ಸುದೀಪ್ತೋ ಸೇನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ದಿ ಕೇರಳ ಸ್ಟೋರಿ' ಕೇರಳ ಸ್ಟೋರಿ ನೈಜ ಕಥೆಯನ್ನು ಆಧರಿಸಿದ ಚಿತ್ರ ಎನ್ನಲಾಗಿದೆ. ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿಸಿದರು ಎನ್ನುವ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಇದೆ. ಕೆಲವು ಯುವತಿಯರು ಇದ್ದಕ್ಕಿದ್ದಂತೆ ಕಾಣೆಯಾಗುತ್ತಾರೆ. ಅವರನ್ನು ಮತಾಂತರ ಮಾಡುವುದಷ್ಟೆ ಅಲ್ಲದೇ ಬ್ರೈನ್ ವಾಶ್ ಮಾಡಿ ಐಸಿಸ್ ಭಯೋತ್ಪಾದಕರನ್ನಾಗಿ ಪರಿವರ್ತಿಸುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಹಿಜಾಬ್ ಪ್ರಸ್ತಾಪವೂ ಇದೆ. ಮಹಿಳೆ ಹಿಜಾಬ್ ಧರಿಸಿದರೆ, ಅವಳು ಅತ್ಯಾಚಾರಕ್ಕೊಳಗಾಗುವುದಿಲ್ಲ. ಅಲ್ಲಾ ಎಲ್ಲಾ ಜನರನ್ನು ರಕ್ಷಿಸುತ್ತಾನೆ, ಮುಸ್ಲಿಂ ಯುವತಿ ಹಿಂದೂ ಯುವತಿಗೆ ಹೇಳುತ್ತಾಳೆ.

Congress urges not to give permission to Release The Kerala Story movie, Chetan Reacts about issue

ಕೇರಳದಲ್ಲೂ ಇಂತಹ ಘಟನೆಗಳು ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ. ಜನವರಿ 2022 ರಲ್ಲಿ, ಕೇರಳದಲ್ಲಿ ಐಎಸ್ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ ಎಂದು ಎನ್ಐಎ ಬಹಿರಂಗಪಡಿಸಿತ್ತು. 8 ಉಗ್ರರ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿದೆ. ಕೇರಳದಲ್ಲಿ ಮುಸ್ಲಿಂ ಯುವಕರನ್ನು ಭಯೋತ್ಪಾದನೆಗೆ ಪ್ರೋತ್ಸಾಹಿಸುವ ಪ್ರಯತ್ನಗಳು ನಡೆದಿವೆ ಎಂದು ಹೇಳಿತ್ತು. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು ಎಂದು ಹೇಳಿದೆ.

ಮತ್ತೊಂದು ಕಡೆ ಉಮ್ಮನ್ ಚಾಂಡಿ ಸಿಎಂ ಆಗಿದ್ದ ಅವಧಿಯಲ್ಲಿ ಮತಾಂತರದ ಅಂಕಿ-ಅಂಶ ಬಹಿರಂಗವಾಗಿದೆ. 2006-2012ರಲ್ಲಿ 7713 ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. 2009-2012ರ ನಡುವೆ ಮತಾಂತರಗೊಂಡವರಲ್ಲಿ 2667 ಯುವಕರು ಸೇರಿದ್ದಾರೆ. ಇವರಲ್ಲಿ 2195 ಯುವಕರು ಹಿಂದೂಗಳು ಮತ್ತು 492 ಯುವಕರು ಕ್ರಿಶ್ಚಿಯನ್ನರು. ಇದೇ ಕಾರಣಕ್ಕೆ 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ರಾಜಕೀಯ ಗದ್ದಲ ಎದ್ದಿದೆ.

Congress urges not to give permission to Release The Kerala Story movie, Chetan Reacts about issue

ಇದೆಲ್ಲದರ ನಡುವೆ ಕೇರಳವನ್ನು ಕರಾಳವಾಗಿ ತೋರಿಸಲಾಗುತ್ತಿದೆ ಎಂದು ಈ ಚಿತ್ರದ ವಿರುದ್ಧ ಆಡಳಿತಾರೂಢ ಸಿಪಿಐ(ಎಂ) ಹಾಗೂ ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಇನ್ನಿತರೆ ಕೆಲ ಪಕ್ಷಗಳು ಮುಗಿಬಿದ್ದಿವೆ. ಅಷ್ಟೇ ಅಲ್ಲ ಕಾಂಗ್ರೆಸ್, ಕೇರಳ ಕಾಂಗ್ರೆಸ್, ಡಿವೈಎಫ್​ಐ, ಸಿಪಿಐಎಂ ಯುವ ಸಂಘ ಸೇರಿದಂತೆ ಕೆಲ ಪಕ್ಷಗಳು ಸಿನಿಮಾ ಬಿಡುಗಡೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಈ ಸಿನಿಮಾದ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. "ದೇಶದಲ್ಲಿ ಧಾರ್ಮಿಕ ದ್ವೇಷ ಬಿತ್ತುವ ಷಡ್ಯಂತ್ರದ ಭಾಗವಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಆದರೆ ಜನ ಇದನ್ನು ಒಪ್ಪುವುದಿಲ್ಲ, ಕೇರಳದ ಜನರು ಒಗ್ಗಟ್ಟಾಗಿ ಅಂತಹ ಶಕ್ತಿಗಳನ್ನು ಸೋಲಿಸುತ್ತಾರೆ" ಎಂದಿದ್ದಾರೆ.

ಇನ್ನು ನಟ ಚೇತನ್ ಅಹಿಂಸಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಮೇ 5 ರಂದು ತೆರೆಗೆ ಬರಲಿದೆ. ನಾನು ಈ ಹಿಂದೆ ಸಮುದಾಯದ/ಲಿಂಗದ ವಿರುದ್ಧ ದ್ವೇಷ ಮತ್ತು ಅವಹೇಳನ ಮಾಡುವ ಚಲನಚಿತ್ರಗಳಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ, ಸೈದ್ಧಾಂತಿಕ ಆಧಾರದ ಮೇಲೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಲನಚಿತ್ರವನ್ನು ರಾಜ್ಯವು ನಿಷೇಧಿಸಬೇಕು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಗತ್ಯ" ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Congress urges not to give permission to Release The Kerala Story movie, Chetan Ahimsa Reacts about issue. Movie written and directed by Sudipto Sen and bankrolled by Sunshine Pictures. 'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆ ಮಾಡದಂತೆ ಒತ್ತಡ ಹೆಚ್ಚಾಗುತ್ತಿದೆ. ಇನ್ನು ಈ ಸಿನಿಮಾ ಬಗ್ಗೆ ನಡ ಚೇತನ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X