80 ಸಾವಿರದ ಜೀನ್ಸ್, 1.5 ಲಕ್ಷದ ಚಪ್ಪಲಿ.. ಜೈಲಿನಲ್ಲಿ ಐಷಾರಾಮಿ ಜೀವನ: ದಾಳಿ ವೇಳೆ ಸುಕೇಶ್ ಕಣ್ಣೀರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್‌ ಸದ್ಯ ವಿಚಾರಧೀನ ಖೈದಿಯಾಗಿ ಜೈಲಿನಲ್ಲಿದ್ದಾನೆ. ಆದರೆ ಆತ ಉಳಿದುಕೊಂಡಿರುವ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಈಗ ಬಹಿರಂಗವಾಗಿದೆ. ದೆಹಲಿಯ ಮಂಡೋಲಿ ಜೈಲಿನಲ್ಲಿ ಇರುವ ಸುಕೇಶ್ ಜೈಲು ಕೋಣೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಈ ವೇಳೆ ಸಾಕಷ್ಟು ಐಷಾರಾಮಿ ವಸ್ತುಗಳು ಕಂಡು ಬಂದಿದೆ. ಅದಕ್ಕೆ ಸಂಬಂಧಿಸಿ ಸಿಸಿಟಿವಿ ಫುಟೇಜ್ ವಿಡಿಯೋ ವೈರಲ್ ಆಗಿದೆ.

ಜೈಲಿನಲ್ಲಿ 1.5 ಲಕ್ಷ ಮೌಲ್ಯದ ದುಬಾರಿ ಚಪ್ಪಲಿಗಳನ್ನು ಗುರುತಿಸಲಾಗಿದೆ. ಸುಮಾರು 80 ಸಾವಿರ ಮೌಲ್ಯದ ಎರಡು ಜೊತೆ ಜೀನ್ಸ್ ಪ್ಯಾಂಟ್‌ ಕೂಡ ಕಂಡು ಬಂದಿದೆ. ಜೈಲರ್ ದೀಪಕ್ ಶರ್ಮ‌ ಜೊತೆಗೆ ಇತರೆ ಅಧಿಕಾರಿಗಳು ಸುಕೇಶ್ ಜೈಲು ಕೋಣೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಆತನ ಕೋಣೆಯಲ್ಲಿ ಬೆಲೆ ಬಾಳುವ ವಸ್ತುಗಳು ದೊರಕಿದೆ. ಜೈಲರ್ ಜೈಲು ಕೋಣೆ ಒಳಗೆ ಪ್ರವೇಶಿಸುತ್ತಿದ್ದಂತೆ ಸುಕೇಶ್ ಅಳಲು ಆರಂಭಿಸಿದ್ದಾನೆ. ಕೋಣೆಯ ಒಂದು ಮೂಲೆಯಲ್ಲಿ ಆತ ಅಳುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

Conman Sukesh Chandrasekhars jail cell raided: Gucci shoes, jeans pants worth ₹80k found

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್‌ನನ್ನು ಬಂಧಿಸಿಸಲಾಗಿದೆ. ಈ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೇಜ್, ನೋರಾ ಫತೇಹಿನ ಕೂಡ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸುಕೇಶ್ ಜೈಲು ಕೋಣೆಯ ವಿಡಿಯೋ ಸೋರಿಕೆಯಾದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ.

Conman Sukesh Chandrasekhars jail cell raided: Gucci shoes, jeans pants worth ₹80k found

ಇತ್ತೀಚೆಗೆ ಎನ್ಐಎ ನ್ಯಾಯಾಲಯದ ಆವರಣದಿಂದಲೇ ಸುಕೇಶ್ ಪ್ರೇಯಸಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ವ್ಯಾಲೆಂಟೈನ್ಸ್‌ ಡೇ ಶುಭಾಶಯ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇನ್ನು ನೋರಾ ಫತೇಹಿ ಕುರಿತಾದ ಪ್ರಶ್ನೆಗೆ "ಗೋಲ್ಡ್ ಡಿಗ್ಗರ್ ಬಗ್ಗೆ ಏನು ಹೇಳಲ್ಲ" ಎಂದು ಆತ ಮಾಧ್ಯಮಗಳಿಗೆ ಹೇಳಿದ್ದನು. ಕೇಶ್ 217 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿರುವ ಆರೋಪ ಎದುರಿಸುತ್ತಿದ್ದು, ಈ ಸಂಬಂಧ ಎನ್‌ಐಎ ವಿಚಾರಣೆ ಮುಂದುವರೆಸಿದೆ.

More from Filmibeat

English summary
Conman Sukesh Chandrasekhars jail cell raided: Gucci shoes, jeans pants worth ₹80k found. CCTV captures Sukesh crying after searches. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X