ವಂಚಕ ಸುಖೇಶ್ ಜೊತೆಗೆ ನಟಿ ಜಾಕ್ವೆಲಿನ್‌ಳ ಮತ್ತೊಂದು 'ಆಪ್ತ' ಚಿತ್ರ ಬಿಡುಗಡೆ

ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ವಂಚಕ ಸುಖೇಶ್ ನಡುವಿನ ಸಂಬಂಧ ಗುಟ್ಟುಗಳು ಒಂದೊಂದಾಗಿ ಬಹಿರಂಗವಾಗುತ್ತಲೇ ಇದೆ.

200 ಕೋಟಿ ವಂಚನೆ ಪ್ರಕರಣದಲ್ಲಿ ಸುಖೇಶ್ ವಿರುದ್ಧ ಇಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸುಖೇಶ್‌ಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೂ ಆಪ್ತ ಸಂಬಂಧ ಇರುವುದು, ಸುಖೇಶ್, ಜಾಕ್ವೆಲಿನ್‌ಗೆ ಕೋಟ್ಯಂತ ಮೌಲ್ಯದ ಉಡುಗೊರೆಗಳನ್ನು ಕೊಟ್ಟಿರುವ ಅಂಶಗಳು ಬೆಳಕಿಗೆ ಬಂದಿತ್ತು.

ಇಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಿ ಕೆಲವು ಚಿತ್ರಗಳು ಸಹ ಹೊರಗೆ ಬಂದಿದ್ದವು. ಇಬ್ಬರು ಪರಸ್ಪರ ಮುತ್ತು ನೀಡುತ್ತಾ ಅದನ್ನು ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಂಡಿರುವ ಚಿತ್ರಗಳು ವೈರಲ್ ಆಗಿದ್ದವು. ಇದೀಗ ಇಬ್ಬರ ಸಂಬಂಧ ಸಾಕಷ್ಟು ಗಾಢವಾಗಿಯೇ ಇತ್ತು ಎಂಬುದಕ್ಕೆ ಸಾಕ್ಷಿಯಾಗಿ ಹೊಸ ಚಿತ್ರವೊಂದು ವೈರಲ್ ಆಗಿದೆ.

ಜಾಕ್ವೆಲಿನ್‌ರ ಮೂಗಿಗೆ ಸುಖೇಶ್ ಮುತ್ತು ಕೊಡುತ್ತಿರುವ ಇದಾಗಿದ್ದು, ಸುಖೇಶ್‌ ನೀಡುತ್ತಿರುವ ಮುತ್ತನ್ನು ಪ್ರೀತಿಯಿಂದ ಕಣ್ಣು ಮುಚ್ಚಿ ಜಾಕ್ವೆಲಿನ್ ಸ್ವಾಗತಿಸುತ್ತಿದ್ದಾರೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಕತ್ತಿನ ಮೇಲೆ ಆಗಿರುವ ಗಾಯದ ಗುರುತು ನೆಟ್ಟಿಗರ ಗಮನ ಸೆಳೆದಿದೆ. ಅದು 'ಲವ್ ಬೈಟ್' ಆಗಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

Conman Sukhesh And Actress Jacqueline Fernandez One More Image Released

ಕೆಲವು ದಿನಗಳ ಹಿಂದಷ್ಟೆ ತನ್ನ ವಕೀಲರಿಗೆ ಪತ್ರ ಬರೆದಿರುವ ವಂಚನೆ ಆರೋಪಿ ಸುಖೇಶ್, ''ನನಗೂ ಜಾಕ್ವೆಲಿನ್ ಫರ್ನಾಂಡೀಸ್‌ಗೂ ಸಂಬಂಧವಿತ್ತು. ಹಾಗಾಗಿಯೇ ನಾನು ಆಕೆಗೆ ಕೋಟ್ಯಂತರ ರುಪಾಯಿ ಮೌಲ್ಯದ ಉಡುಗೊರೆಗಳನ್ನು ಕೊಟ್ಟಿದ್ದೇನೆ. ಆಕೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ'' ಎಂದಿದ್ದ.

''ನನ್ನ ಹಾಗೂ ಜಾಕ್ವೆಲಿನ್ ನಡುವೆ ಯಾವುದೇ ಹಣಕಾಸು ವ್ಯವಹಾರ, ಉಡುಗೊರೆ ವಿನಿಮಯ ಆಗಿದ್ದರೂ ಅದು ನಮ್ಮ ಖಾಸಗಿ ವಿಷಯ. ಆಕೆಗೆ ಉಡುಗೊರೆ ಕೊಡಲು ಇತರರ ಹಣವನ್ನು ಬಳಕೆ ಮಾಡಿಲ್ಲ. ಅಥವಾ ಅಕ್ರಮದ ಹಣ ಬಳಕೆ ಮಾಡಿಲ್ಲ. ಹಾಗೊಂದು ವೇಳೆ ಮಾಡಿದ್ದರೆ ಅದನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ. ಉಳಿದಂತೆ ಆಕೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಎಲ್ಲ ಬಾಲಿವುಡ್ ಗೆಳೆಯರನ್ನು ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಕೆಟ್ಟವನು ಎಂದು ತೋರಿಸಲು ಅವರನ್ನೆಲ್ಲ ಬಳಸಿಕೊಳ್ಳಲಾಗುತ್ತಿದೆ. ನಾನು ಇನ್ನು ಮುಂದೆ ಸಿನಿಮಾ ಸಂಬಂಧಿ ವ್ಯವಹಾರ ಮಾಡದಂತೆ ಮಾಡಲಾಗುತ್ತಿದೆ'' ಎಂದು ಸುಕೇಶ್ ಪತ್ರದಲ್ಲಿ ಹೇಳಿದ್ದಾನೆ.

ತಿಹಾರ್ ಜೈಲಿನ ಪೊಲೀಸರ ಮೇಲೂ ಆರೋಪ ಮಾಡಿದರು ಸುಕೇಶ್, ''ಸುಳ್ಳು ಪ್ರಕರಣಗಳನ್ನು ನನ್ನ ಮೇಲೆ ಹೇರಲಾಗಿದೆ. ನಾನು ಈ ಪ್ರಕರಣದಲ್ಲಿ ಸಂತ್ರಸ್ಥ. ಜೈಲು ಪೊಲೀಸರಿಗೆ, ಅಧಿಕಾರಿಗಳಿಗೆ 12.50 ಕೋಟಿ ಹಣವನ್ನು ನಾನು ನೀಡಿದ್ದೇನೆ'' ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸುಕೇಶ್ ಕೆಲವು ವರ್ಷಗಳಿಂದ ದೆಹಲಿಯ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಫೋನ್ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ, ದೊಡ್ಡ ಉದ್ಯಮಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಸುಖೇಶ್‌ಗೆ ಜಾಕ್ವೆಲಿನ್ ಮಾತ್ರವೇ ಅಲ್ಲ, ಹಲವು ಬಾಲಿವುಡ್ ನಟಿಯರ ಪರಿಚಯ ಇದೆ. ತಿಹಾರ್ ಜೈಲಿಗೆ ಸುಮಾರು ಹತ್ತು ನಟಿಯರಿಗಿಂತಲೂ ಹೆಚ್ಚು ಮಂದಿ ಸುಖೇಶ್ ಅನ್ನು ಕಾಣಲು ಬಂದು ಹೋಗಿದ್ದಾರೆ ಎನ್ನಲಾಗುತ್ತಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಸುಕೇಶ್‌ಗೆ ಸೇರಿದ ಚೆನ್ನೈನ ಐಶಾರಾಮಿ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ರುಪಾಯಿ ನಗದು ಹಣ, ಕೆಜಿಗಟ್ಟಲೆ ಚಿನ್ನ. ಹಾಗೂ ಹಲವು ಐಶಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದರು. ಐಶಾರಾಮಿ ಬಂಗ್ಲೆಯನ್ನು ಸಹ ಸೀಜ್ ಮಾಡಿದ್ದಾರೆ.

More from Filmibeat

English summary
Conman Sukhesh and actress Jacqueline Fernandez's one more image released. Both seemed to very close to each other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X