ನನಗೂ ನಟಿ ಜಾಕ್ವೆಲಿನ್‌ಗೂ ಸಂಬಂಧವಿತ್ತು: ವಂಚಕ ಸುಕೇಶ್

ಮಹಾ ವಂಚಕ ಸುಕೇಶ್ ಚಂದ್ರಶೇಖರ್, ತನ್ನ ಹಾಗೂ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ ನಡುವಿನ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಜೈಲಿನಲ್ಲಿದ್ದುಕೊಂಡೆ ನೂರಾರು ಕೋಟಿ ರುಪಾಯಿ ಹಣ ಸುಲಿಗೆ ಮಾಡಿದ, ವಂಚನೆ ಮಾಡಿದ ಆರೋಪ ಸುಕೇಶ್‌ ಚಂದ್ರಶೇಖರ್ ಮೇಲಿದ್ದು, ಪ್ರಕರಣದ ತನಿಖೆ ನಡೆಸಿದಾಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಕೇಶ್ ಬಹಳ ಆಪ್ತವಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು, ಜಾಕ್ವೆಲಿನ್‌, ಸುಕೇಶ್‌ಗೆ ಮುತ್ತು ಕೊಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.

ಇದೀಗ ಸುಕೇಶ್ ತನ್ನ ವಕೀಲರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಬಗ್ಗೆ ಉಲ್ಲೇಖ ಮಾಡಿದ್ದಾನೆ. ''ನನ್ನ ಹಾಗೂ ಜಾಕ್ವೆಲಿನ್‌ ನಡುವೆ ಪ್ರೀತಿಯ ಸಂಬಂಧವಿತ್ತು. ಹಾಗಾಗಿಯೇ ನಾನು ಆಕೆಗೆ ಕೋಟ್ಯಂತರ ಮೌಲ್ಯದ ಉಡುಗೊರೆಗಳನ್ನು ನೀಡುತ್ತಿದ್ದೆ'' ಎಂದಿದ್ದಾನೆ.

Conman Sukhesh Chandrashekhar Said He Was In Relation With Jacqueline Fernandez

''ನನ್ನ ಹಾಗೂ ಆಕೆಯ ನಡುವೆ ಯಾವುದೇ ಹಣಕಾಸು ವ್ಯವಹಾರ, ಉಡುಗೊರೆ ವಿನಿಮಯ ಆಗಿದ್ದರೂ ಅದು ನಮ್ಮ ಖಾಸಗಿ ವಿಷಯ. ಆಕೆಗೆ ಉಡುಗೊರೆ ಕೊಡಲು ಇತರರ ಹಣವನ್ನು ಬಳಕೆ ಮಾಡಿಲ್ಲ. ಅಥವಾ ಅಕ್ರಮದ ಹಣ ಬಳಕೆ ಮಾಡಿಲ್ಲ. ಹಾಗೊಂದು ವೇಳೆ ಮಾಡಿದ್ದರೆ ಅದನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ. ಉಳಿದಂತೆ ಆಕೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ'' ಎಂದಿದ್ದಾನೆ ಸುಕೇಶ್.

ಮುಂದುವರೆದು, ''ನನ್ನ ಎಲ್ಲ ಬಾಲಿವುಡ್ ಗೆಳೆಯರನ್ನು ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಕೆಟ್ಟವನು ಎಂದು ತೋರಿಸಲು ಅವರನ್ನೆಲ್ಲ ಬಳಸಿಕೊಳ್ಳಲಾಗುತ್ತಿದೆ. ನಾನು ಇನ್ನು ಮುಂದೆ ಸಿನಿಮಾ ಸಂಬಂಧಿ ವ್ಯವಹಾರ ಮಾಡದಂತೆ ಮಾಡಲಾಗುತ್ತಿದೆ'' ಎಂದು ಸುಕೇಶ್ ಪತ್ರದಲ್ಲಿ ಹೇಳಿದ್ದಾನೆ.

ಅಷ್ಟೇ ಅಲ್ಲದೆ, ''ತನಿಖಾ ಸಂಸ್ಥೆಗಳು, ಮಾಧ್ಯಮಗಳು ಹೇಳುತ್ತಿರುವಂತೆ ನಾನು ವಂಚಕ ಅಥವಾ ಸುಲಿಗೆಕೋರ ಅಲ್ಲ ಬದಲಿಗೆ ಕಾರ್ಪೊರೇಟ್ ಮಧ್ಯಸ್ಥಿಕೆದಾರ. ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸರ್ಕಾರಗಳ ನಡುವೆ ನಾನು ಸೇತುವೆಯಂತೆ ಕೆಲಸ ಮಾಡುತ್ತಿದ್ದೇನೆ. ಕಳೆದ 20 ವರ್ಷಗಳಿಂದಲೂ ನಾನು ಈ ಕೆಲಸದಲ್ಲಿ ನಿರತನಾಗದ್ದೇನೆ. ನನ್ನ ಕೆಲಸಕ್ಕಾಗಿ ನಾನು ಫೀಸ್ ಪಡೆದಿದ್ದೇನೆ'' ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.

ತಿಹಾರ್ ಜೈಲಿನ ಪೊಲೀಸರ ಮೇಲೂ ಆರೋಪ ಮಾಡಿದರು ಸುಕೇಶ್, ''ಸುಳ್ಳು ಪ್ರಕರಣಗಳನ್ನು ನನ್ನ ಮೇಲೆ ಹೇರಲಾಗಿದೆ. ನಾನು ಈ ಪ್ರಕರಣದಲ್ಲಿ ಸಂತ್ರಸ್ಥ. ಜೈಲು ಪೊಲೀಸರಿಗೆ, ಅಧಿಕಾರಿಗಳಿಗೆ 12.50 ಕೋಟಿ ಹಣವನ್ನು ನಾನು ನೀಡಿದ್ದೇನೆ'' ಎಂದು ಗಂಭೀರ ಆರೋಪ ಮಾಡಿದ್ದಾರೆ.

More from Filmibeat

English summary
Conman Sukhesh Chandrashekhar said he was in relation with Bollywood actress Jacqueline Fernandez so he gave her gifts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X