ಶ್ರೀದೇವಿಯನ್ನೇ ಹೋಲುತ್ತಿದ್ದ ನಟಿ: ಈಕೆಯದ್ದು ದುರಂತ ಸಾವೇ.!
ನಟಿ ಶ್ರೀದೇವಿ ಸಾವಿನ ನಂತರ ಹಲವು ಬೆಳವಣಿಗೆಗಳು ಆಗುತ್ತಿದೆ. ದುಬೈ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಪೊಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಹೃದಯಾಘಾತ ಆಗಿಲ್ಲ, ಆಕಸ್ಮಿಕ ಸಾವು ಎಂಬ ವರದಿ ಬಂದಿದೆ. ಈ ಮಧ್ಯೆ ಶ್ರೀದೇವಿಯ ನಿಗೂಢ ಸಾವಿನ ಬಗ್ಗೆ ಹಲವು ಅನುಮಾನಗಳು ಕಾಡುತ್ತಿದೆ.
ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಇಂಟ್ರೆಸ್ಟಿಂಗ್ ವಿಷ್ಯವೊಂದು ಚರ್ಚೆಯಾಗ್ತಿದೆ. ಶ್ರೀದೇವಿಯನ್ನೇ ಹೋಲುವಂತೆ ಬಾಲಿವುಡ್ ನಲ್ಲಿ ಇನ್ನೊಬ್ಬ ನಟಿಯಿದ್ದರು ಎಂಬುದು ಈಗ ವೈರಲ್ ಆಗಿದೆ.
ದುರಂತ ಅಂದ್ರೆ, ಆ ನಟಿ ಚಿಕ್ಕವಯಸ್ಸಿನಲ್ಲೇ ದುರಂತ ಸಾವಿಗೆ ತುತ್ತಾಗಿದ್ದಳು. ಆ ಸಮಯದಲ್ಲೇ ''ಈಕೆ ಎರಡನೇ ಶ್ರೀದೇವಿ ಆಗುತ್ತಾಳೆ'' ಎಂದೇ ಬಣ್ಣಿಸಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಶ್ರೀದೇವಿ ಮತ್ತು ಈ ನಟಿಯ ಮಧ್ಯೆ ಸಾಮ್ಯತೆ ಇತ್ತು. ಅಷ್ಟಕ್ಕೂ ಯಾರದು? ಮುಂದೆ ಓದಿ....

ಶ್ರೀದೇವಿ ಸಹೋದರಿಯಂತಿದ್ದ ದಿವ್ಯ ಭಾರತಿ
ನೋಡಲು ಬಹುತೇಕ ಶ್ರೀದೇವಿಯನ್ನೇ ಹೋಲುತ್ತಿದ್ದ ಈಕೆಯ ಹೆಸರು ದಿವ್ಯ ಭಾರತಿ. ಈಕೆಯನ್ನ ಎಲ್ಲರೂ ಶ್ರೀದೇವಿಯ ಸಹೋದರಿಯಂದೇ ನೋಡುತ್ತಿದ್ದರು. ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಚಿರಪರಿಚಿತವಾಗಿದ್ದ ನಟಿ ದಿವ್ಯ ಭಾರತಿ.

ಎರಡನೇ ಶ್ರೀದೇವಿ
'ಬೊಬ್ಬಿಲಿ ಪುಲಿ', 'ರೌಡಿ ಅಲ್ಲುಡು', 'ಅಸೆಂಬ್ಲಿ ರೌಡಿ' ಸೇರಿದಂತೆ ಹಲವು ತೆಲುಗು ಸಿನಿಮಾ ಮಾಡಿದ್ದ ದಿವ್ಯ, ದಿವಾನ್, ಬಲ್ವಾನ್, ಜಾನ್ ಸೇ ಪ್ಯಾರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ದಿವ್ಯ ನಟನೆಯನ್ನ ಮೆಚ್ಚಿದ್ದ ಎಲ್ಲರೂ ಈಕೆಯನ್ನ ಎರಡನೇ ಶ್ರೀದೇವಿ ಎನ್ನುತ್ತಿದ್ದರು.

ದುರಂತ ಸಾವು ಕಂಡಿದ್ದ ದಿವ್ಯ
1993, ಏಪ್ರಿಲ್ 5 ರಂದು ರಾತ್ರಿ 11 ಗಂಟೆಗೆ ಮುಂಬೈನಲ್ಲಿ ತಾನು ವಾಸವಾಗಿದ್ದ ಅಪಾರ್ಟ್ ಮೆಂಟ್ ನ 5 ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು. ಮಧ್ಯಪಾನ ಸೇವಿಸಿ ಬಿದ್ದಿರಬಹುದು, ಯಾರಾದರೂ ತಳ್ಳಿರಬಹುದು, ಅಥವಾ ಕೊಲೆಯಾಗಿರಬಹುದು ಎಂಬ ಅನುಮಾನ ಮೂಡಿತ್ತು. ಕೊನೆಗೆ ತನಿಖೆ ನಡೆಸಿದ್ದ ಪೊಲೀಸರು ಇದು ಆಕಸ್ಮಿಕ ಸಾವು ಎಂದು ಪ್ರಕರಣ ಕ್ಲೋಸ್ ಮಾಡಿದ್ದರು.

ದಿವ್ಯ ಪಾತ್ರ ಮುಂದುವರೆಸಿದ್ದ ಶ್ರೀದೇವಿ
ದಿವ್ಯ ಭಾರತಿ ಅಭಿನಯಿಸುತ್ತಿದ್ದ ಸಿನಿಮಾವೊಂದು ಅರ್ಧದಲ್ಲೇ ನಿಂತು ಹೋಗಿತ್ತು. ನಂತರ ಈ ಪಾತ್ರವನ್ನ ನಟಿ ಶ್ರೀದೇವಿ ಅವರಿಂದ ಮಾಡಿಸಲಾಯಿತು. ಅನಿಲ್ ಕಪೂರ್ ಅಭಿನಯಿಸಿದ್ದ 'ಲಾಡ್ಲಾ' ಸಿನಿಮಾದಲ್ಲಿ ದಿವ್ಯ ಬದಲು ಶ್ರೀದೇವಿ ಅಭಿನಯಿಸಿದ್ದರು.

ದಿವ್ಯರಂತೆ ನಿಗೂಢವಾಗಿ ಸಾನ್ನಪ್ಪಿದ ಶ್ರೀದೇವಿ
ಕೆಲವು ವಿಚಾರಗಳಲ್ಲಿ ದಿವ್ಯ ಭಾರತಿ ಅವರಂತೆ ಸಾಮ್ಯತೆ ಹೊಂದಿದ್ದ ಶ್ರೀದೇವಿ ಈಗ ದುಬೈನ ಹೋಟೆಲ್ ವೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿದೆ. ಸಾವಿನಲ್ಲೂ ಒಂದೇ ರೀತಿ ಅಂತ್ಯ ಕಂಡರೂ ಎಂಬ ವಿಚಾರವೂ ಇಲ್ಲಿ ಗಮನಿಸಬೇಕಾಗಿದೆ.

ಇಬ್ಬರಿಗೂ ಫೆಬ್ರವರಿ ವಿಶೇಷ ಆಗೋಯ್ತು
19ನೇ ವಯಸ್ಸಿಗೆ ಸಾವನ್ನಪ್ಪಿದ್ದ ದಿವ್ಯ ಭಾರತಿ ಹುಟ್ಟುಹಬ್ಬ ಫೆಬ್ರವರಿ 24ರಂದು. 54 ವರ್ಷದ ಶ್ರೀದೇವಿ ನಿಧನವಾಗಿದ್ದು ಫೆಬ್ರವರಿ 25 ರಂದು. ಇದು ಕೂಡ ಒಂದು ರೀತಿಯಲ್ಲಿ ಕಾಕತಾಳೀಯವೇ ಸರಿ.


Click it and Unblock the Notifications











