twitter
    For Quick Alerts
    ALLOW NOTIFICATIONS  
    For Daily Alerts

    'ಪದ್ಮಾವತ್' ವಿರುದ್ಧ ಪ್ರತಿಭಟನೆ : ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ

    By Naveen
    |

    'ಪದ್ಮಾವತ್' ಸಿನಿಮಾದ ವಿರುದ್ಧ ಈಗಾಗಲೇ ಅನೇಕ ಪ್ರತಿಭಟನೆಗಳು ನಡೆದಿದೆ. ಶಾಲಾ ವಾಹನದ ಮೇಲೆ ಕಲ್ಲು ತೂರಾಟದಿಂದ ಹಿಡಿದು ಚಿತ್ರದ ವಿರುದ್ಧ ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡಿದ್ದರು. ಈ ರೀತಿ ಮಾಡಿದವರ ವಿರುದ್ಧ ಈಗ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

    ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕರ್ಣಿ ಸೇನೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚಿಸುವಂತೆ ಅರ್ಜಿ ಹಾಕಲಾಗಿದೆ. ಕರ್ಣಿ ಸೇನೆ ಚಿತ್ರದ ವಿರುದ್ಧ ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ದೊಡ್ಡ ಪ್ರತಿಭಟನೆಗಳನ್ನು ಮಾಡಿತ್ತು. ಜೊತೆಗೆ ಎಲ್ಲಿಯೂ 'ಪದ್ಮಾವತ್' ಚಿತ್ರ ಬಿಡುಗಡೆ ಆಗದಂತೆ ತಡೆ ಹಿಡಿಯಲಾಗಿತ್ತು.

     ಫೇಸ್ ಬುಕ್ ಲೈವ್ ಮೂಲಕ 'ಪದ್ಮಾವತ್' ಪುಕ್ಕಟೆ ಪ್ರಸಾರ.! ಫೇಸ್ ಬುಕ್ ಲೈವ್ ಮೂಲಕ 'ಪದ್ಮಾವತ್' ಪುಕ್ಕಟೆ ಪ್ರಸಾರ.!

    ಪ್ರಾರಂಭದಲ್ಲಿ ಸಿನಿಮಾಗೆ ವ್ಯಕ್ತವಾದ ವಿರೋಧದ ಹಿನ್ನಲೆಯಲ್ಲಿ ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಸಿನಿಮಾ ಪ್ರದರ್ಶನವನ್ನು ರದ್ದು ಮಾಡದಂತೆ ತೀರ್ಪು ನೀಡಿತ್ತು. ಅದರಂತೆ ಈಗಾಗಲೇ 'ಪದ್ಮಾವತ್' ಚಿತ್ರ ಪ್ರದರ್ಶನ ಅನೇಕ ಕಡೆ ಶುರುವಾಗಿದೆ. ಬೆಂಗಳೂರಿನಲ್ಲಿಯೂ ನಿನ್ನೆ ಸಂಜೆಯಿಂದ ಚಿತ್ರಪ್ರದರ್ಶನ ಪ್ರಾರಂಭವಾಗಿತ್ತು.

    Contempt filed a petition against karni sena in Supreme Court

    ನಿನ್ನೆ ದೆಹಲಿಯ ಶಾಲಾ ವಾಹನಕ್ಕೆ ಪ್ರತಿಭಟನೆ ಮಾಡುವವರು ಕಲ್ಲು ತೂರಿದ್ದರು. 'GD Goenka world' ಎಂಬ ಶಾಲಾ ವಾಹನ ಗಾಜು ಚೂರು ಚೂರಾಗಿತ್ತು. ಆದರೆ ಅದರಲ್ಲಿ ಇದ್ದ ಮಕ್ಕಳಿಗೆ ಯಾವುದೇ ಅಪಾಯ ಆಗಿರಲ್ಲ.

    English summary
    A petition has been filed in the Supreme Court seeking contempt action against Karni Sena for its violent protests against release of controversial film 'Padmaavat'.
    Thursday, January 25, 2018, 18:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X