ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋಗೂ ನನಗೂ ಸಂಬಂಧವಿಲ್ಲ: ಒರಿಜಿನಲ್ ವಿಡಿಯೋದಲ್ಲಿರುವ ಜಾರಾ ಪಟೇಲ್ ಹೇಳಿಕೆ

ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಸೈಬರ್ ಕ್ರೈಮ್‌ಗೆ ಒಳಗಾಗಿ ಸುದ್ದಿಯಲ್ಲಿದ್ದಾರೆ. ಕಳೆದೆರಡು ದಿನಗಳಿಂದ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಬಾಲಿವುಡ್, ಟಾಲಿವುಡ್ ಸೆಲಬ್ರಿಟಿಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ರಶ್ಮಿಕಾ ಕೂಡ ವಿಡಿಯೋ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಸದ್ಯ ಈ ವೈರಲ್ ವಿಡಿಯೋದ ಮೂಲ ವಿಡಿಯೋದಲ್ಲಿರುವ ಬ್ರಿಟಿಷ್ ಇಂಡಿಯನ್ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್, ಜಾರಾ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಘಟನೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ಯಪಡಿಸಿದ್ದಾರೆ. ಜೊತೆಗೆ ಇದರಿಂದ ಹೆಚ್ಚು ದುಃಖಿತಳಾಗಿದ್ದೇನೆ ಎಂದು ಹೇಳಿದ್ದಾರೆ.

Content creator Zara Patel reaction on Rashmika Mandannas deepfake viral video

ವೈರಲ್ ವಿಡಿಯೋಗೆ ಜಾರಾ ಪಟೇಲ್ ಪ್ರತಿಕ್ರಿಯೆ

ಜಾರಾ ಪಟೇಲ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ "ಹಾಯ್ ಎಲ್ಲರಿಗೂ, ಯಾರೋ ನನ್ನ ದೇಹ ಮತ್ತು ಜನಪ್ರಿಯ ಬಾಲಿವುಡ್ ನಟಿಯ ಮುಖವನ್ನು ಬಳಸಿಕೊಂಡು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಡೀಪ್‌ಫೇಕ್ ವೀಡಿಯೊಗೂ ನನಗೆ ಯಾವುದೇ ಸಂಬಂಧವಿಲ್ಲ. ಈಗ ಏನಾಗುತ್ತಿದೆಯೀ ಆ ಬಗ್ಗೆ ನಾನು ತೀವ್ರವಾಗಿ ವಿಚಲಿತಳಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ" ಎಂದಿದ್ದಾರೆ.

ಜೊತೆಗೆ, "ನಾನು ಈಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋ, ವಿಡಿಯೋಗಳನ್ನು ಹಾಕಿಕೊಳ್ಳಲು ಭಯಪಡುವಂತೆ ಕಾಣುವ ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತೇನೆ. ದಯವಿಟ್ಟು ಏನಾದರೂ ಹಮಚಿಕೊಳ್ಳುವ ಮುನ್ನ ಯೋಚನೆ ಮಾಡಿ, ಸ್ವಲ್ಪ ಹಿಂದೆ ಸರಿಯಿರಿ. ಇಂಟರ್ನೆಟ್‌ನಲ್ಲಿ ನೀವು ಏನನ್ನು ನೋಡುತ್ತೀರಿ ಎಂಬುದನ್ನು ಪರಿಶೀಲಿಸಿ. ಇಂಟರ್ನೆಟ್‌ನಲ್ಲಿರುವ ಎಲ್ಲವೂ ನಿಜವಲ್ಲ. ಸದ್ಯ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತೀವ್ರ ಅಸಮಾಧಾನಗೊಂಡಿದ್ದೇನೆ" ಎಂದು ಹೇಳಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ಮೊದಲ ಬಾರಿಗೆ ಜಾರಾ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ

ಕಪ್ಪು ಬಣ್ಣದ ಒನ್ ಪೀಸ್ ಡ್ರೆಸ್‌ನಲ್ಲಿರುವ ಜಾರಾ ಪಟೇಲ್ ಅವರ ಮೂಲ ವೀಡಿಯೊವನ್ನುಆರ್ಟಿಫಿಶೀಯಲಗ ಇಂಟಲಿಜೆನ್ಸ್ (AI) ಬಳಸಿಕೊಂಡು ನಕಲಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಇರುವುದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರಂತೆಯೇ ಕಾನುತ್ತಿದ್ದಾರೆ. ಮೂಲ ವೀಡಿಯೊ ಇನ್ನೂ ಜಾರಾ ಪಟೇಲ್ ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಇದೆ.

Content creator Zara Patel reaction on Rashmika Mandannas deepfake viral video

ಈ ವಿಡಿಯೋ ವೈರಲ್ ಆದ ಬೆನ್ನಲ್ಲೆ, ಭಾರತೀಯ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಂದ ಹಿಡಿದು ಅನೇಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. AI ಕಾನೂನು ಚೌಕಟ್ಟಿನ ಅಡಿಯಲ್ಲಿ ಹೇಗೆ ಇರಬೇಕು ಮತ್ತು ಅದನ್ನು ಕ್ರಮಬದ್ಧಗೊಳಿಸುವಿಕೆಯ ಅಗತ್ಯ ಸೇರಿದಂತೆ ಮಾತನಾಡಿದ್ದ ಅವರು, ಘಟನೆ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಇದಾದ ನಂತರ ಶೀಘ್ರದಲ್ಲೇ ಮೃಣಾಲ್ ಠಾಕೂರ್, ನಾಗ ಚೈತನ್ಯ, ಸಾಯಿ ಧರಮ್ ತೇಜ್, ಚಿನ್ಮಯಿ ಶ್ರೀಪಾದ ಸೇರಿದಂತೆ ಅನೇಕ ಕಲಾವಿದರು ನಟಿಯನ್ನು ಬೆಂಬಲಿಸಿದ್ದಾರೆ. ಇದಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ರಶ್ಮಿಕಾ ಮಮದಣ್ಣ ಅವರಿಗೆ ಹೆಚ್ಚು ಬೆಂಬಲ ನೀಡಲಾಯಿತು. ಬಳಿಕ ನಟಿ ರಶ್ಮಿಕಾ ಕೂಡ ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

"ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆದರೂ, ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ. ನಿಜವಾಗಿ ಹೇಳಬೇಕೆಂದರೇ, ಈ ರೀತಿ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಕೃತ್ಯಕ್ಕೆ ಗುರಿಯಾಗುತ್ತಿದ್ದಾರೆ. ಮಹಿಳೆಯಾಗಿ ಮತ್ತು ನಟಿನಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಎಂಬುದು ನಿಜಕ್ಕೂ ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ನಾವು ಇದನ್ನು ಒಂದು ಸಮುದಾಯವಾಗಿ ಆದಷ್ಟು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಮನವಿ ಮಾಡಿದ್ದರು.

More from Filmibeat

English summary
Zara Patel reacts to Rashmika Mandanna’s deepfake viral video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X