ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್‌ಗೆ ಫ್ಯಾನ್ಸ್ ಆಕ್ರೋಶ!

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾರಂಗದಲ್ಲಿ ಗಾಸಿಪ್‌ಗಳು ಕಾಮನ್. ಅಫೇರ್, ಡೇಟಿಂಗ್ ಅನ್ನೋ ವಿಷಯಗಳು ಇಂದಲ್ಲ, ಹಿಂದಿನಿಂದಲೂ ಚಿತ್ರರಂಗದಲ್ಲಿ ಕೇಳುವುದಕ್ಕೆ ಸಿಗುವ ಸುದ್ದಿಗಳು. ಆದರೆ, ಎಲ್ಲದಕ್ಕೂ ಒಂದು ಲಿಮಿಟ್ ಇದೆ. ಅದೆಂತಹದ್ದೇ ಗಾಸಿಪ್ ಹುಟ್ಟಿಕೊಂಡರೂ ಒಂದು ಲಿಮಿಟ್‌ ಅನ್ನೋದು ಇರುತ್ತೆ. ಆದ್ರೀಗ ಅದೇ ಲಿಮಿಟ್ ಮೀರಿ ಸುದ್ದಿಗಳು ಹಬ್ಬುತ್ತಿವೆ.

ಭಾರತೀಯ ಚಿತ್ರರಂಗದಲ್ಲಿ ವಿವಾದಗಳಿಂದ ದೂರ ಉಳಿದಿರುವ ನಟಿಯರು ಅದೆಷ್ಟೋ ನಟಿಯರು ಇದ್ದಾರೆ. ಅವರಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ಚಿತ್ರರಂಗದ ಇತಿಹಾಸದಲ್ಲಿ ಉಳಿದುಕೊಳ್ಳುವ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿಲ್ಲ. ತನ್ನ ವೃತ್ತಿ ಬದುಕಿನಲ್ಲಿ ಕ್ಲೀನ್ ಇಮೇಜ್ ಇಟ್ಟುಕೊಂಡಿದ್ದಾರೆ.

Controversial critic Umair Sandhu tweeted about Madhuri Dixit pregnancy with Sanjay Dutt

ಆದ್ರೀಗ ಇದೇ ಮಾಧುರಿ ದೀಕ್ಷಿತ್ ವಿರುದ್ಧ ವಿವಾದಾತ್ಮಕ ಟ್ವೀಟ್ (ಎಕ್ಸ್) ಮಾಡಲಾಗಿದೆ. ಮಾಧುರಿ ದೀಕ್ಷಿತ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು ಎಂದು ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ಟ್ವೀಟ್ (ಎಕ್ಸ್) ಮಾಡಿದ್ದು, ಸದ್ಯ ಇದೇ ಟ್ವೀಟ್ (ಎಕ್ಸ್) ವಿರುದ್ಧ ಮಾಧುರಿ ಅಭಿಮಾನಿಗಳ ಕಣ್ಣುಗಳು ಕೆಂಪಗಾಗಿವೆ. ಅಷ್ಟಕ್ಕೂ ಆ ಟ್ವೀಟ್‌ನಲ್ಲಿ ಅಂತಹದ್ದೇನಿದೆ? ಟ್ವೀಟ್ ಮಾಡಿದ್ದು ಯಾರು? ಅನ್ನೋದನ್ನು ತಿಳಿಯಲು ಮುಂದೆ ಓದಿ..

80 ಹಾಗೂ 90ರ ದಶಕದಲ್ಲಿ ಮಾಧುರಿ ದೀಕ್ಷಿತ್‌ಗೆ ಇದ್ದಷ್ಟು ಬೇರೆ ಯಾವುದೇ ನಟಿಗೂ ಇರಲಿಲ್ಲವೇನೋ? ಬಾಲಿವುಡ್‌ನ ಸ್ಟಾರ್ ಹೀರೊಗಳಿಗೆ ನಾಯಕಿಯಾಗಿ ಮಾಧುರಿ ದೀಕ್ಷಿತ್ ಅವರೇ ನಟಿಸಬೇಕಿತ್ತು. ಆ ಮಟ್ಟಿಗೆ ಧಕ್ ಧಕ್ ಬೆಡಗಿ ಬೇಡಿಕೆಯ ನಟಿಯಾಗಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ಜೊತೆಗೆ ಬಾಲಿವುಡ್ 'ಖಳನಾಯಕ್' ಹಲವು ಸಿನಿಮಾಗಳನ್ನು ಮಾಡಿದ್ದರು. ಆಗ ಇಬ್ಬರ ನಡುವೆ ಏನೋ ನಡೀತಿದೆ ಅನ್ನೋ ಸುದ್ದಿ ಹಬ್ಬಿತ್ತು. ಈಗ ವಿವಾದಾತ್ಮಕ ಕ್ರಿಟಿಕ್ ಉಮೈರ್ ಸಂಧು " 90 ದಶಕದ ಆರಂಭದಲ್ಲಿ ಸಂಜಯ್ ದತ್ ಅವರಿಂದ ಮಾಧುರಿ ದೀಕ್ಷಿತ್ ಗರ್ಭಿಣಿಯಾಗಿದ್ದರು" ಎಂದು ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಟ್ವೀಟ್‌ ವಿರುದ್ಧ ಕಿಡಿಕಾರಿದ್ದಾರೆ.

Controversial critic Umair Sandhu tweeted about Madhuri Dixit pregnancy with Sanjay Dutt

ಸಂಜಯ್ ದತ್ ಅದಾಗಲೇ ಬಾಲಿವುಡ್‌ನಲ್ಲಿ ನೆರೆಯೂರಿ ಆಗಿತ್ತು. ಬಾಲಿವುಡ್ ಲೆಜೆಂಡ್ ಸುನೀಲ್ ದತ್ ಹಾಗೂ ನರ್ಗೀಸ್ ಪುತ್ರನಾಗಿದ್ದರಿಂದ ಬಾಲಿವುಡ್‌ ಎಂಟ್ರಿ ಕೊಡುವುದು ಸುಲಭವಾಗಿರಲಿಲ್ಲ. ಸ್ಟಾರ್ ಕಿಡ್ ಆಗಿದ್ದರಿಂದ ಸಿನಿಮಾಗಳು ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದವು. ಈ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

'ಥಾನೆದಾರ್', 'ಕತ್ರೋಂಕೆ ಕಿಲಾಡಿ', 'ಕಾನೂನ್ ಅಪ್ನಾ ಅಪ್ನಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾ ವೇಳೆ ಮಾಧುರಿ ದೀಕ್ಷಿತ್ ಹಾಗೂ ಸಂಜಯ್ ದತ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಅನ್ನೋ ಸುದ್ದು ಹರಿದಾಡಿತ್ತು. ಅದ್ಯಾವಾಗ ಸಂಜಯ್ ದತ್ ಎಕೆ 47 ಕೇಸ್‌ನಲ್ಲಿ ಸಿಕ್ಕಿಬಿದ್ದರೋ ಆ ವೇಳೆ ಮಾಧುರಿ ದೀಕ್ಷಿತ್ ಬ್ರೇಕಪ್ ಮಾಡಿಕೊಂಡರು ಎಂದು ವರದಿಗಳಾಗಿದ್ದವು.

ಈಗ ಮಾಧುರಿ ದೀಕ್ಷಿತ್ ವಿವಾಹವಾಗಿ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಆಗೊಮ್ಮೆ ಈಗೊಮ್ಮೆ ಮಾಧುರಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ವಿವಾದಾತ್ಮಕ ವಿಮರ್ಶಕ ಉಮೈರ್ ಸಂಧು ಮಾಡಿದ ಒಂದು ಟ್ವೀಟ್ ಟೀಕೆಗೆ ಗುರಿಯಾಗಿದೆ. ಮಾಧುರಿ ಅಭಿಮಾನಿಗಳು ಉಮೈರ್ ಸಂಧು ವಿರುದ್ಧ ಕಿಡಿಕಾರುತ್ತಿದ್ದಾರೆ.

More from Filmibeat

English summary
Umair Sandhu's Controversial tweet on Madhuri Dixit pregnancy with Sanjay Dutt is trending:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X