'ಬಿಗ್ ಬಾಸ್'ಗೆ ಹೋಗಿ ಬಂದವರದ್ದೆಲ್ಲಾ ಒಂದೊಂದು ಕಾಂಟ್ರವರ್ಸಿ.!

By Bharath Kumar

Recommended Video

ಬಿಗ್ ಬಾಸ್'ಗೆ ಹೋಗಿ ಬಂದ್ಮೇಲೆ ಯಾಕ್ ಹಿಂಗ್ ಆಡ್ತಾರೋ ಇವ್ರು..!! | Filmibeat Kannada

ಬಿಗ್ ಬಾಸ್ ಶೋಗೆ ಹೋಗಿ ಬಂದ ಮೇಲೆ ಪಬ್ಲಿಸಿಟಿ ಎರಡು ಪಟ್ಟು ಹೆಚ್ಚಾಗುತ್ತೆ ಎನ್ನುವುದ್ರಲ್ಲಿ ಎರಡು ಮಾತಿಲ್ಲ. ಆ ವ್ಯಕ್ತಿ ಯಾರು ಎಂಬುದೇ ಅನೇಕರಿಗೆ ಗೊತ್ತಿರಲ್ಲ. ಆದ್ರೆ, ಈ ಮನೆಗೆ ಎಂಟ್ರಿ ಕೊಟ್ಟು ವಾಪಸ್ ಆದ್ಮೇಲೆ ಕೋಟ್ಯಾಂತರ ಜನರ ಪಾಲಿಗೆ ಸ್ಟಾರ್ ಆಗಿಬಿಡ್ತಾರೆ.

ಬಿಗ್ ಮನೆಗೆ ಹೋಗಿ ಬಂದ್ಮೇಲೆ ಎಷ್ಟು ಸ್ಟಾರ್ ಗಿರಿ ಸಿಗುತ್ತೋ ಅಷ್ಟೇ ವಿವಾದಗಳನ್ನ ಕೂಡ ಎದುರಿಸುತ್ತಾರೆ. ತಮ್ಮ ಖಾಸಗಿ ಲೈಫ್, ಲೈಫ್ ಸ್ಟೈಲ್, ತೊಡುವ ಬಟ್ಟೆ, ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಸ್ಟೇಟಸ್ ಗಳು,,,ಹೀಗೆ, ಒಂದಲ್ಲ ಒಂದು ಕಾರಣದಿಂದ ಕಾಂಟ್ರುವರ್ಸಿಗೆ ಸಿಕ್ಕಿಹಾಕಿಕೊಳ್ತಾರೆ.

ಆದರಲ್ಲೂ ಇಂತಹ ವಿವಾದಗಳು ಬಾಲಿವುಡ್ ನಲ್ಲೇ ಹೆಚ್ಚು. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇದೆ. ಹಾಗಿದ್ರೆ, ಬಿಗ್ ಬಾಸ್ ನ ಯಾವೆಲ್ಲಾ ಮಾಜಿ ಸ್ಪರ್ಧಿಗಳು ವಿವಾದಗಳಿಗೆ ಗುರಿಯಾಗಿದ್ದಾರೆ ಎಂಬುದನ್ನ ಮುಂದೆ ಓದಿ....

ಗೆಳತಿ ಮೇಲೆ ಹಲ್ಲೆ ಮಾಡಿದ್ದ ಸ್ಪರ್ಧಿ

ಗೆಳತಿ ಮೇಲೆ ಹಲ್ಲೆ ಮಾಡಿದ್ದ ಸ್ಪರ್ಧಿ

ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ, ನಟ ಅರ್ಮಾನ್ ಕೊಹ್ಲಿ ತಮ್ಮ ಗರ್ಲ್ ಫ್ರೆಂಡ್ ಮೀನು ರಂದಾವಾ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು. 2015ರಿಂದ ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು. ಆರ್ಥಿಕ ವ್ಯವಹಾರಕ್ಕೆ ಕುರಿತಂತೆ ಇಬ್ಬರಿಗೂ ಜೋರು ಜಗಳವಾಗಿದೆ. ಈ ಸಂದರ್ಭದಲ್ಲಿ ಸಿಟ್ಟಿನಿಂದ ಮೀನು ಮೇಲೆ ಅರ್ಮಾನ್ ಹಲ್ಲೆ ಮಾಡಿದ್ದಾರೆ. ಈ ಕುರಿತು ಸಾಂತಾ ಕ್ರೋಜ್ ಪೊಲೀಸ್ ಠಾಣೆಯಲ್ಲಿ, ಐಪಿಸಿ ಸೆಕ್ಷನ್ 323, 326,504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ನಟಿಗೆ ರೇಟ್ ಕೇಳಿದ್ದ ವ್ಯಕ್ತಿ

ನಟಿಗೆ ರೇಟ್ ಕೇಳಿದ್ದ ವ್ಯಕ್ತಿ

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋಫಿಯಾ ಹಯತ್ ಗೆ ಅನಾಮಿಕ ವ್ಯಕ್ತಿಯೊಬ್ಬ 'ಒಂದು ರಾತ್ರಿಗೆ ನಿನ್ನ ರೇಟ್ ಎಷ್ಟು' ಎಂದು ಅಸಭ್ಯವಾಗಿ ಮೆಸೆಜ್ ಮಾಡಿದ್ದನು. ಇದನ್ನ ಪ್ರತಿಕ್ರಿಯಿಸಿದ್ದ ಸೋಫಿಯಾ ''ಹೋಗಿ ನಿಮ್ಮ ಅಮ್ಮ, ತಂಗಿ, ಹೆಂಡತಿನ ಕೇಳು'' ಎಂದು ಟಾಂಗ್ ನೀಡಿದ್ದರು.

ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ

ಅಕ್ಕನ ನಗ್ನ ವಿಡಿಯೋ ಪೋಸ್ಟ್ ಮಾಡಿದ ತಂಗಿ

ಬಿಗ್ ಬಾಸ್ ಹಿಂದಿಯ ಮಾಜಿ ಸ್ಪರ್ಧಿ ಸಾರಾ ಖಾನ್ ಅವರ ನಗ್ನ ವಿಡಿಯೋವನ್ನ ತಂಗಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಈ ವಿಡಿಯೋ ಕ್ಷಣಮಾತ್ರದಲ್ಲೇ ವೈರಲ್ ಆಗಿದ್ದು, ನಂತರ ಡಿಲೀಟ್ ಆಗಿದೆ. ನಂತರ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಾರಾ ಖಾನ್ ''ಇದು ಜಸ್ಟ್ ಫಾರ್ ಫನ್ ಆಗಿತ್ತು. ಯಾವುದೇ ಉದ್ದೇಶದಿಂದ ಈ ವಿಡಿಯೋ ಪೋಸ್ಟ್ ಮಾಡಿರುವುದಿಲ್ಲ. ಕುಡಿದ ಮತ್ತಿನಲ್ಲಿ ಹಾಗೆ ಮಾಡಿದ್ದಾಳೆ ಎಂದಿದ್ದರು.

ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗಿದ್ದ ಹೀನಾ

ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗಿದ್ದ ಹೀನಾ

ಬಿಗ್ ಬಾಸ್ ಹಿಂದಿ 11ನೇ ಆವೃತ್ತಿಯ ಸ್ಪರ್ಧಿ ಹೀನಾ ಖಾನ್ ತಾನು ತೊಟ್ಟಿದ್ದ ಕಾಸ್ಟ್ಯೂಮ್ ವಿಚಾರದಲ್ಲಿ ಟ್ರೋಲ್ ಆಗಿದ್ದರು. ಬಿಳಿ ಬಣ್ಣ ಮಿನಿ ಡ್ರೆಸ್ ಓಕೆ. ಆದ್ರೆ, ಕೆಳಗೆ ಇರುವ ಫ್ರಿಲ್ಸ್ ನೆಟ್ ಬಾಸ್ಕೆಟ್ ತರಹ ಕಾಣುತ್ತಿದೆ. ಈ ಡ್ರೆಸ್ ನೋಡ್ತಿದ್ರೆ, ಅರ್ಧ ಡ್ರೆಸ್ ಕಿತ್ಹೋಗಿ ಕೆಳಗೆ ಬಿದ್ದಿರುವ ಹಾಗಿದೆ ಅಂತೆಲ್ಲ ಲೇವಡಿ ಮಾಡಿದ್ದರು ನೆಟ್ಟಿಗರು.

ಸ್ಯಾಮ್ ಸಾಂಗ್ ಫ್ರಿಡ್ಜ್ ಗಾಗಿ ಹೀನಾ ಟ್ರೋಲ್

ಸ್ಯಾಮ್ ಸಾಂಗ್ ಫ್ರಿಡ್ಜ್ ಗಾಗಿ ಹೀನಾ ಟ್ರೋಲ್

ಬಿಗ್ ಬಾಸ್ ಸ್ಪರ್ಧಿ ಹೀನಾ ಖಾನ್ ತಾಯಂದಿರ ದಿನದಂದು ಎಡವಟ್ಟು ಮಾಡಿಕೊಂಡಿದ್ದರು. ತಾಯಂದಿರ ದಿನಾಚರಣೆಯಂದು ಸ್ಯಾಮ್ ಸಂಗ್ ಇಂಡಿಯಾ ಒಂದು ಕಾನ್ಟೆಸ್ಟ್ ಆಯೋಜಿಸಿತ್ತು. #MomsLoveNonStop ಎಂಬ ಹ್ಯಾಶ್ ಟ್ಯಾಗ್ ಬಳಸಿ, ತಮ್ಮ ತಾಯಿಯ ಮೇಲೆ ತಾವಿಟ್ಟಿರುವ ಪ್ರೀತಿಯನ್ನು ಫೋಟೋ ಅಥವಾ ವಿಡಿಯೋ ಮೂಲಕ ಟ್ವೀಟ್ ಮಾಡುವ ಅದೃಷ್ಟಶಾಲಿಗಳಿಗೆ ಸ್ಯಾಮ್ ಸಂಗ್ ರೆಫ್ರಿಜಿರೇಟರ್ ಉಡುಗೊರೆಯಾಗಿ ದೊರೆಯಲಿದೆ ಎಂದು ಘೋಷಿಸಿತ್ತು. ಅದೇ ದಿನ ಹೀನಾ ತಾಯಿಯ ಜೊತೆ ಫೋಟೋ ಪೋಸ್ಟ್ ಮಾಡಿದ್ದರು. ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುವ ಹೀನಾ ಒಂದು ಫ್ರಿಡ್ಜ್ ಗೋಸ್ಕರ ಹೀಗೆ ಮಾಡಿದ್ರಾ ಎಂದು ನೆಟ್ಟಿಗರು ಕಾಲೆಳೆದಿದ್ದರು.

ಮತ್ತದೇ ಅದೇ ಹೀನಾ ಖಾನ್

ಮತ್ತದೇ ಅದೇ ಹೀನಾ ಖಾನ್

ಸೋಶಿಯಲ್ ಮೀಡಿಯಾದಲ್ಲಿ ಹಿಂದೆಂದೆನೇ ಟ್ರೋಲ್ ಆಘಿರುವ ಹೀನಾ ಖಾನ್ ಮತ್ತೆ ಬಟ್ಟೆಯ ವಿಚಾರದಲ್ಲಿ ವಿವಾದಕ್ಕ ಗುರಿಯಾಗಿದ್ದರು. ರಂಜಾನ್ ಹಬ್ಬದ ಆಚರಣೆ ಸಂದರ್ಭದಲ್ಲಿ ಕೆಲವು ವಿಡಿಯೋ ಮತ್ತು ಫೋಟೋ ಶೇರ್ ಮಾಡಿದ್ದರು. 'ಪವಿತ್ರ ರಂಝಾನ್ ಹಬ್ಬದ ಸಂದರ್ಭದಲ್ಲಿ ಇಂತಹ ಬಟ್ಟೆಯನ್ನ ಧರಿಸಬೇಕಾ.? ನಿಮಗೆ ಸ್ವಲ್ಪವೂ ನಾಚಿಕೆ ಆಗೋದಿಲ್ವಾ.?'' ಅಂತೆಲ್ಲ ನೆಟ್ಟಿಗರು ಹೀನಾ ಖಾನ್ ಗೆ ಛೀಮಾರಿ ಹಾಕಿದ್ದರು.

More from Filmibeat

English summary
The controversies of bigg boss contestants. bigg boss ex contestants hina khan, arman kohli, sara khan, sofia hayat are on the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X