For Quick Alerts
  ALLOW NOTIFICATIONS  
  For Daily Alerts

  ವಿವಾದಕ್ಕೆ ಕಾರಣವಾಯ್ತು ದೀಪಿಕಾ-ರಣ್ವೀರ್ ಮದ್ವೆ.!

  |
  ವಿವಾದಕ್ಕೆ ತಿರುಗಿತು ದೀಪಿಕಾ ಪಡುಕೋಣೆ ರಣ್ವೀರ್ ಸಿಂಗ್ ಮದುವೆ | FILMIBEAT KANNADA

  ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೊಮೊದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

  ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ದೀಪ್-ವೀರ್ ಜೋಡಿ ಮದುವೆಯಾಗಿದ್ದು, ಈಗ ಆ ವಿವಾಹ ವಿವಾದಕ್ಕೆ ಕಾರಣವಾಗಿದೆ. ಹೌದು, ಸಿಂಧಿ ಸಂಪ್ರದಾಯದಲ್ಲಿ ನಡೆದ ಮದುವೆ ಈಗ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದೆ.

  ಸಿಂಧಿ ಸಂಪ್ರದಾಯದಂತೆ ಇಂದು ಮದುವೆ ಆದ ದೀಪಿಕಾ-ರಣ್ವೀರ್

  ಆನಂದ್ ಕಾರಂಜ್ ಸಂಪ್ರದಾಯ ಎಂದು ಕರೆಯುವ ಇದರಲ್ಲಿ ಗುರು ಗ್ರಂಥ ಸಾಹೀಬ್ ‍ನ್ನು ಗುರುದ್ವಾರ ಹೊರತುಪಡಿಸಿ ಬೇರೆಲ್ಲೂ ಕೊಂಡೊಯ್ದು ಆಚರಿಸುವಂತಿಲ್ಲ ಎಂದು ಸಿಖ್ಖರ ಪರಮೋಚ್ಚ ಧರ್ಮಪೀಠ ಅಕಾಲ್ ತಖ್ತ್ ಹೇಳುತ್ತದೆ. ಅಕಾಲ್ ತಖ್ತ್ ನಿಯಮಗಳನ್ನು ಉಲ್ಲಂಘಿಸಿ ದೀಪಿಕಾ ಮತ್ತು ರಣವೀರ್ ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿರುವುದು ಸಿಖ್ ಧಾರ್ಮಿಕ ನಾಯಕರ ಕೋಪಕ್ಕೆ ಕಾರಣವಾಗಿದೆ.

  ಚಿತ್ರಪಟ: ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕೊಂಕಣಿ ವಿವಾಹ

  ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಖ್ ಮುಖಂಡರು ಒತ್ತಾಯಿಸಿದ್ದಾರೆ. ದೀಪಿಕಾ ಪಡುಕೋಣೆ ಕೊಂಕಣಿ ಸಮುದಾಯದವರಾಗಿದ್ದು, ರಣ್ವೀರ್ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದ್ದಾರೆ.

  ದೀಪ್ವೀರ್ ಮದುವೆ: ಪ್ಲೇನ್ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟ ವರ ರಣ್ವೀರ್

  ಇಟಲಿಯಲ್ಲಿ ಮದುವೆ ಆದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ನವೆಂಬರ್ 18 ರಂದು ಭಾರತಕ್ಕೆ ಬಂದರು. ನವೆಂಬರ್ 21 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದ್ದು, ನವೆಂಬರ್ 28 ರಂದು ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ.

  English summary
  Deepika Padukone and Ranveer Singh are in the middle of a controversy because of their Anand Karaj wedding ceremony in Italy last week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X