For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಡೆಲ್ಟಾ ತಳಿ ಪತ್ತೆ: ಸೀಲ್‌ಡೌನ್‌ನಲ್ಲಿ ಸುನಿಲ್ ಶೆಟ್ಟಿ ನಿವಾಸ

  |

  ಕೊರೊನಾ ಡೆಲ್ಟಾ ತಳಿ ಪತ್ತೆಯಾಗಿರುವ ಕಾರಣ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಿವಾಸವಿರುವ ಅಪಾರ್ಟ್‌ಮೆಂಟ್ ಅನ್ನು ಬೃಹತ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಸೀಜ್ ಮಾಡಿದೆ.

  ದಕ್ಷಿಣ ಮುಂಬೈನ ಅಲ್ಟಾಮೌಂಟ್‌ ರಸ್ತೆಯ ಪೃಥ್ವಿ ಅಪಾರ್ಟ್‌ಮೆಂಟ್ಸ್‌ನಲ್ಲಿ ಸುನಿಲ್ ಶೆಟ್ಟಿ ಕುಟುಂಬದೊಂದಿಗೆ ವಾಸವಿದ್ದು ಅಪಾರ್ಟ್‌ಮೆಂಟ್‌ನಲ್ಲಿ ಐದು ಕೊರೊನಾ ವೈರಸ್ ಡೆಲ್ಟಾ ತಳಿ ಪತ್ತೆಯಾಗಿದೆ. ಹಾಗಾಗಿ ಬಿಎಂಸಿಯು ಅಪಾರ್ಟ್‌ಮೆಂಟ್ ಅನ್ನು ಸೀಜ್ ಮಾಡಿದೆ.

  ಅಪಾರ್ಟ್‌ಮೆಂಟ್ ಮುಂದೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು ಯಾರೂ ಸಹ ಒಳಗೆ ಬರದಂತೆ ಹೊರಗೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದೆ.

  ಸುನೀಲ್ ಶೆಟ್ಟಿ ಮತ್ತು ಕುಟುಂಬ ಪೃಥ್ವಿ ಅಪಾರ್ಟ್‌ಮೆಂಟ್‌ನ 18ನೇ ಮಹಡಿಯಲ್ಲಿ ವಾಸವಿದ್ದು, ಅವರ ಕುಟುಂಬದವರಿಗೆ ವೈರಸ್ ಸೋಂಕು ತಗುಲಿಲ್ಲ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ನಾಳೆ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ಪರೀಕ್ಷೆ ಮಾಡಲಾಗುತ್ತಿತ್ತು. ಫಲಿತಾಂಶ ಬಂದ ಬಳಿಕ ಸುನಿಲ್ ಶೆಟ್ಟಿ ಕುಟುಂಬ ಹಾಗೂ ಇತರರಿಗೆ ಕೊರೊನಾ ಸೋಂಕು ತಗುಲಿದೆಯೇ ಒಂದು ವೇಳೆ ತಗುಲಿದ್ದರೆ ಡೆಲ್ಟಾ ತಳಿಯೇ ಅಲ್ಲವೇ ಎಂಬುದು ಪತ್ತೆಯಾಗಲಿದೆ.

  ಬಿಎಂಸಿ ಮಾರ್ಗಸೂಚಿ ಪ್ರಕಾರ ಯಾವುದೇ ವಸತಿ ಸಮುಚ್ಛಯದಲ್ಲಿ ಐದಕ್ಕಿಂತಲೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದರೆ ಅದನ್ನು ಮಿನಿ ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸಬೇಕು ಎಂದಿದೆ. ಹಾಗಾಗಿಯೇ ಸುನಿಲ್ ಶೆಟ್ಟಿ ವಾಸವಿರುವ ಅಪಾರ್ಟ್‌ಮೆಂಟ್ ಅನ್ನೂ ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಿ ಕಟ್ಟೆಚ್ಚರ ವಹಿಸಲಾಗಿದೆ.

  ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada

  ಕನ್ನಡದ 'ಪೈಲ್ವಾನ್' ಸಿನಿಮಾದಲ್ಲಿ ನಟಿಸಿರುವ ಸುನಿಲ್ ಶೆಟ್ಟಿ ಬಹುಭಾಷಾ ನಟರಾಗಿದ್ದು, ಸುನಿಲ್ ಶೆಟ್ಟಿ ನಟಿಸಿರುವ 'ಮರಕ್ಕರ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ತೆಲುಗಿನ 'ಗನಿ' ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಿಂದಿಯ 'ಹೇರಾ-ಪೇರಿ 3', 'ಹೆಲೊ ಇಂಡಿಯಾ' ಸಿನಿಮಾದಲ್ಲಿ ನಟಿಸುವವರಿದ್ದಾರೆ.

  English summary
  Coronavirus delta case found in Sunil Shetty's apartment so BMC seized the apartment. As per now Sunil Shetty's family is safe.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X