ಪತಿಯೊಂದಿಗಿನ ತಮ್ಮದೇ ಖಾಸಗಿ ವಿಡಿಯೋಗಳನ್ನು ಸೋರಿಕೆ ಮಾಡಿ ಸಂಕಷ್ಟಕ್ಕೆ ಒಳಗಾದ ನಟಿ ರಾಖಿ ಸಾವಂತ್!

ಬಾಲಿವುಡ್ ನಟಿ ರಾಖಿ ಸಾವಂತ್ ಅವರು ತಮ್ಮ ಖಾಸಗಿ, ಅಶ್ಲೀಲ ವೀಡಿಯೋಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಆಕೆಯ ಪತಿ ಆದಿಲ್ ಖಾನ್ ದುರಾನಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಂದಲ್ಲಿ ನಟಿ ರಾಖಿ ಸಾವಂತ್ ಅವರಿಗೆ ದಿಂಡೋಶಿ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಹೀಗಾಗಿ ತಮ್ಮ ವಿಡಿಯೋಗಳನ್ನು ಸೋರಿಕೆ ಮಾಡಿ ತಾವೇ ಸಂಕಷ್ಟಕ್ಕೆ ಒಳಗಾಗಿದ್ದಾರೆ ವಿವಾದಿತ ನಟಿ.

ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಶ್ರೀಕಾಂತ್ ವೈ ಭೋಸಲೆ ಅವರು ಜನವರಿ 8 ರಂದು ರಾಖಿ ಸಾವಂತ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಈ ಪ್ರಕರಣದ ವಿವರವಾದ ಆದೇಶವು ಶುಕ್ರವಾರ ಲಭ್ಯವಾಗಿದೆ. ಇದರ ಆದೇಶದಂತೆ ರಾಖಿ ಸಾವಂತ್ ಅವರಿಗೆ ಜಾಮೀನು ನಿರಾಕರಿಸಲಾಗಿದೆ.

Court Denied Anticipatory Bail to Rakhi Sawant in Leaking Private Videos Case

ರಾಖಿ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಿದ್ದ ಆದಿಲ್ ಖಾನ್ ದುರಾನಿ

ರಾಖಿ ಸಾವಂತ್ ಅವರು ಕ್ರಿಮಿನಲ್ ಪೂರ್ವಾಪರಗಳನ್ನು ಹೊಂದಿದ್ದರು. ಅವರು ಸೋರಿಕೆ ಮಾಡಿರುವ ವಿಡಿಯೋಗಳು ಅಶ್ಲೀಲ ಮಾತ್ರವಲ್ಲದೆ ಲೈಂಗಿಕವಾಗಿಯೂ ಕೂಡ ಇದೆ ಎಂದು ನ್ಯಾಯಾಲಯ ಜಾಮೀನು ನಿರಾಕರಿಸುವಾಗ ಗಮನಿಸಿದೆ. ಆದಿಲ್ ಖಾನ್ ದುರಾನಿ ಪ್ರಕಾರ ಆಗಸ್ಟ್ 25, 2023 ರಂದು, ನಟನು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ತನಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳನ್ನು ರಾಖಿ ಸಾವಂತ್ ಪ್ರದರ್ಶಿಸಿದ್ದಾರೆ.

ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋಗಳನ್ನು ಇಟ್ಟುಕೊಂಡು ಅದನ್ನು ಟಿವಿಯಲ್ಲಿ ಹಾಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಎರಡು ವೀಡಿಯೊಗಳನ್ನು ತೋರಿಸಿದ್ದು, ಪ್ರತಿಯೊಂದೂ ಸುಮಾರು 25-30 ನಿಮಿಷಗಳಷ್ಟು ಉದ್ದವಾಗಿದೆ ಎಂಬುದನ್ನು ದೂರುದಾರ ಆದಿಲ್ ಖಾನ್ ದುರಾನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು, ರಾಖಿ ಸಾವಂತ್ ಪರ ವಾದ ಮಂಡಿಸಿದ ವಕೀಲ ಅಲಿ ಕಾಶಿಫ್ ಖಾನ್ ದೇಶ್‌ಮುಖ್, ಆದಿಲ್ ಖಾನ್ ದುರಾನಿ ಅವರು ಕೂಡ ಈ ವಿಡಿಯೋ ಸೋರಿಕೆಯಲ್ಲಿ ಪಾಲುದಾರ, ಅವರ ಪಾತ್ರದ ಬಗ್ಗೆ ಪ್ರಶ್ನೆಯಾಗಬೇಕು ಎಂದರು.ಈಗಾಗಲೇ ಆದಿಲ್ ಖಾನ್ ದುರಾನಿ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇವೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿದ್ದರು.

Court Denied Anticipatory Bail to Rakhi Sawant in Leaking Private Videos Case

"ಆಪಾದಿತ ವೀಡಿಯೊಗಳನ್ನು ಆದಿಲ್ ಖಾನ್ ದುರಾನಿ ಅವರೇ ರೆಕಾರ್ಡ್ ಮಾಡಿದ್ದಾರೆ. ಆದ್ದರಿಂದ ಸೆಕ್ಷನ್ 67 (ಎ) ಅನ್ನು ಅನ್ವಯಿಸಬೇಕಾದರೆ, ಮಾಹಿತಿದಾರನು ಪ್ರಸ್ತುತ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದಾನೆ. ವೀಡಿಯೊವನ್ನು ಟಿವಿಯಲ್ಲಿ ತೋರಿಸಲಾಗಿದ್ದರೂ ಕೂಡ, ಅವುಗಳನ್ನು ಬ್ಲರ್ ಮಾಡಲಾಗಿದೆ. ಆದ್ದರಿಂದ, ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಲಾಗುವುದಿಲ್ಲ" ಎಂದು ವಾದಿಸಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಆರ್‌ಸಿ ಸಾವ್ಲೆ ಅವರು ರಾಖಿ ಸಾವಂತ್ ಅವರ ಅರ್ಜಿಯನ್ನು ವಿರೋಧಿಸಿದರು. ಅವರು ಆಕ್ಷೇಪಾರ್ಹ ವೀಡಿಯೊವನ್ನು ಹೊಂದಿರುವ ತನ್ನ ಫೋನ್ ಅನ್ನು ಟಿವಿ ಶೋನಲ್ಲಿ ಪ್ರದರ್ಶಿಸಿದ್ದು ಮಾತ್ರವಲ್ಲದೆ ಹೇಳಿದ ವೀಡಿಯೊಗಳನ್ನು ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು ಲಿಂಕ್‌ಗಳನ್ನು ಫಾರ್ವರ್ಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಖಿ ಸಾವಂತ್ ಲೈಂಗಿಕವಾಗಿ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುವ ಅಭ್ಯಾಸವನ್ನು ಹೊಂದಿದ್ದರು. ಈ ಬಗ್ಗೆ ಇನ್ನೊಬ್ಬ ನಟ ಕೂಡ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳ ಬಗ್ಗೆ ಚರ್ಚಿಸಿದ ನಂತರ, ಇದು ನಿರೀಕ್ಷಣಾ ಜಾಮೀನ್ನು ನೀಡಲು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ್ ವೈ ಭೋಸಲೆ ಹೇಳಿದರು. ಹೀಗಾಗಿ ನಿರೀಕ್ಷಣ ಜಾಮೀನು ತಿರಸ್ಕರಿಸಲಾಗಿದೆ.

More from Filmibeat

English summary
Anticipatory bail denied to Rakhi Sawant in leaking their private videos case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X