For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

  |

  ನಟಿ ಕಂಗನಾ ರಣೌತ್ ಹಾಗೂ ಸಹೋದರಿ ರಂಗೋಲಿ ಗೆ ಸಂಕಷ್ಟ ಎದುರಾಗಿದೆ. ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಮುಂಬೈ ಪೊಲೀಸರಿಗೆ ಸೂಚಿಸಿದೆ.

  ಉದ್ರೇಕಕಾರಿ ಟ್ವೀಟ್‌ಗಳನ್ನು ಮಾಡಿರುವ ಕಾರಣ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕಂಗನಾ ರಣೌತ್ ಹಾಗೂ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ.

  ಬಾಂಬೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ಸೂಚನೆ ನೀಡಿದ್ದು, ಕಂಗನಾ ರಣೌತ್ ಹಾಗೂ ರಂಗೋಲಿ ಚಾಂಡೆಲ್ ಅವರ ಕೆಲವು ಟ್ವೀಟ್‌ಗಳು ಎರಡು ಧರ್ಮಗಳ ನಡುವೆ ಬಿರುಕು ಮೂಡಿಸುವಂತಹವು ಎಂದು ಅಭಿಪ್ರಾಯಪಟ್ಟಿದೆ.

  ಸಯ್ಯದ್ ಎಂಬುವರು ಕಂಗನಾ ರಣೌತ್ ಹಾಗೂ ರಂಗೋಲಿ ವಿರುದ್ಧ ಹಲವು ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

  ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja

  ಸುಶಾಂತ್ ಸಿಂಗ್ ಮರಣದ ನಂತರ ನಟಿ ಕಂಗನಾ ರಣೌತ್ ಸಾಮಾಜಿಕ ಜಾಲತಾಣದಲ್ಲಿ ಹಿಂದೆಂದಿಗಿಂತಲೂ ಸಾಕಷ್ಟು ಸಕ್ರಿಯರಾಗಿದ್ದರು. ಬಾಲಿವುಡ್ ನಟ-ನಟಿಯರು, ಮುಂಬೈ ಪೊಲೀಸ್, ಮುಂಬೈ ಸರ್ಕಾರ ಸೇರಿದಂತೆ ಮುಸ್ಲಿಂ ವಿರೋಧಿ ಟ್ವೀಟ್‌ಗಳನ್ನು ಅವರು ಮಾಡಿದ್ದರು.

  English summary
  Bombay magistrate court ordered to file FIR against actress Kangana Ranaut and Rangoli for divisible tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X