ಹೃತಿಕ್, ಶಾಹಿದ್, ಸಿದ್ಧಾರ್ಥ್ ಕೈಯಿಂದ ಆಗದ ಕೆಲಸ ಮಾಡಿ ತೋರಿಸಿದ ಕರೀನಾ, ಟಬು, ಕೃತಿ..!

ಸೂಪರ್ ಸ್ಟಾರ್ ಪಟ್ಟಕ್ಕೇರಿ, ಅಟ್ಟದ ಮೇಲೆ ಕುಳಿತ ನಾಯಕರ ಸಿನಿಮಾಗಳಿಗೆ ನೂಕುನುಗ್ಗಲು ಆಗುವುದು ಸಹಜ. ಆದರೆ.. ನಾಯಕಿಯರ ಚಿತ್ರಕ್ಕೂ ಇಂಥಹದ್ದೇ ವಾತಾವರಣ ಕಂಡು ಬಂದರೆ.. ! ಬಾಲಿವುಡ್ ನಲ್ಲಿ ಸದ್ಯಕ್ಕೆ ಇಂಥಹದ್ದೇ ಒಂದು ಪವಾಡ ನಡೆದಿದೆ. ಅದಕ್ಕೆ ಅವರು ಇಟ್ಟಿರುವ ಹೆಸರು ''ಕ್ರೂ''.

ಹೌದು, ''ಪುರುಷ ಪ್ರಧಾನ'' ಚಿತ್ರರಂಗದಲ್ಲಿ ''ಮಹಿಳಾ ಪ್ರಧಾನ'' ಸಿನಿಮಾ ಬರಲ್ಲ, ಅಪ್ಪಿ ತಪ್ಪಿ ಬಂದರೂ ಕೂಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲ್ಲ ಅನ್ನುವ ಮಾತು ಹಾಗೂ ನಂಬಿಕೆ ಎರಡು ಬಣ್ಣದ ಲೋಕದಲ್ಲಿದೆ. ಆದರೆ ಈ ಮಾತು ಹಾಗೂ ನಂಬಿಕೆ ''ಕ್ರೂ'' ವಿಚಾರದಲ್ಲಿ ಸುಳ್ಳಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ''ಹಣ''ದ ಹೊಳೆ ಹರಿಯುತ್ತಿದೆ.

Crew Box Office Collection Kareena Kapoor delivers another hit as film earns 62 crore

ನಿಮಗೆ ಗೊತ್ತಿರಲಿ, ಕಳೆದ ಶುಕ್ರವಾರ ತೆರೆಗೆ ಬಂದ ''ಕ್ರೂ'', ಇಲ್ಲಿಯವರೆಗೆ ಹತ್ತು.. ಇಪ್ಪತ್ತಲ್ಲ.. ''ಅರವತ್ತೇರಡು ಕೋಟಿ''ಯನ್ನ ದೋಚಿದೆ. ಈ ಅರವತ್ತೇರಡಲ್ಲಿ ಮೊದಲನೇ ದಿನದ ಲೆಕ್ಕ ಒಂಬತ್ತು ಕೋಟಿ ಇಪ್ಪತ್ತೈದು ಲಕ್ಷದ್ದಾದರೆ, ಎರಡನೇ ದಿನದ ಲೆಕ್ಕ ಒಂಬತ್ತು ಕೋಟಿ ಎಪ್ಪತ್ತೈದು ಲಕ್ಷ ಇದೆ. ಇನ್ನೂ ಮೂರನೇ ದಿನದ ಗಳಿಕೆ ಹಿಂದಿನ ಎರಡು ದಿನಕ್ಕಿಂತ ಹೆಚ್ಚಿದೆ. ಬಾಕ್ಸಾಫೀಸ್ ನಲ್ಲಿ ಮೂರನೇ ದಿನ ಚಿತ್ರ ಹತ್ತು ಕೋಟಿಯನ್ನ ಗಳಿಸಿದೆ. ಇನ್ನೂ ಮೂರನೇ ದಿನ ''ಮುಂಬೈ'' ಹೊರತು ಪಡಿಸಿದರೆ, ಕರೀನಾ ಕಪೂರ್, ಟಬು ಹಾಗೂ ಕೃತಿ ಸನೋನ್ ಗೆ ''ಬೆಂಗಳೂರು'' ಕೊಟ್ಟಿರುವ ಕಾಣಿಕೆಯೇ ದೊಡ್ಡದು ಅನ್ನುವುದು ವಿಚಿತ್ರ, ವಿಶೇಷ.

ಹೌದು, ಮೂರನೇ ದಿನ ಅಂದರೆ ನಿನ್ನೆ ''ಕ್ರೂ'' ಚಿತ್ರವನ್ನ ಮುಂಬೈನಲ್ಲಿ ಶೇಕಡಾ 34 % ಜನ ಕಣ್ತುಂಬಿಕೊಂಡಿದ್ದಾರೆ. ಪುಣೆಯಲ್ಲಿ ಶೇಕಡಾ 41% ಜನ ಚಿತ್ರ ನೋಡಿ ನಕ್ಕು ಖುಷಿ ಪಟ್ಟಿದ್ದಾರೆ. ಆದರೆ ಬೆಂಗಳೂರಿನಲ್ಲಿ ರಣ ರಣ ಬಿಸಿಲನ್ನೂ ಲೆಕ್ಕಿಸದೇ ಶೇಕಡಾ 51% ಜನ ''ಕ್ರೂ'' ಸಿನಿಮಾ ನೋಡಿದ್ದಾರೆ. ಕೇಕೆ ಹಾಕಿದ್ದಾರೆ. ಈ ಎಲ್ಲ ಅಂಕಿ-ಸಂಖ್ಯೆ ''Sacnilk'' ವೆಬ್ ಸೈಟ್ ನಲ್ಲಿ ಪ್ರಕಟವಾಗಿವೆ

Crew Box Office Collection Kareena Kapoor delivers another hit as film earns 62 crore

ಇನ್ನೂ ''ಬೆಂಗಳೂರಿನಲ್ಲಿ'' ''ಕ್ರೂ'' ಜ್ವರ ಎಷ್ಟರ ಮಟ್ಟಿಗೆ ನೆತ್ತಿಗೇರಿದೆ ಅಂದರೆ, ಇವತ್ತು ಸೋಮವಾರ.. ಆದರೂ ಕೂಡ ಬೆಂಗಳೂರಿನ ಅನೇಕ ಕಡೆ ಚಿತ್ರಮಂದಿರದ ಎದುರು ''ಹೌಸ್ ಫುಲ್'' ಬೋರ್ಡ್ ಬಿದ್ದಿದೆ. ಟಿಕೆಟ್ ದರ ಆರನೂರು ಇರಲಿ, ಎಂಟನೂರು ಇರಲಿ.. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಬೆಂಗಳೂರು ಸಿನಿ ಪ್ರಿಯರು, ''ಕ್ರೂ'' ಚಿತ್ರವನ್ನ ಸಕುಟುಂಬ ಸಮೇತ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ''ಬೆಂಗಳೂರಿಗರು ವಿಶಾಲ ಹೃದಯದವರು'' ಅನ್ನುವುದು ಇದಕ್ಕೆ ತಾನೇ.

Crew Box Office Collection Kareena Kapoor delivers another hit as film earns 62 crore

ಸದ್ಯಕ್ಕೆ ''ಕ್ರೂ'' ಚಿತ್ರದ ಈ ವೇಗ, ಆವೇಗ ನೋಡುತ್ತಿದ್ದರೆ ಇನ್ನೇರಡೇ ದಿನ ಚಿತ್ರ 100 ಕೋಟಿಯ ಕ್ಲಬ್ ಗೆ ಸೇರುವ ಎಲ್ಲ ಲಕ್ಷಣ ದಟ್ಟವಾಗಿ ಕಂಡು ಬರುತ್ತಿದೆ. ಗೊತ್ತಿಲ್ಲ.. ಭವಿಷ್ಯದಲ್ಲಿ ಚಿತ್ರ 150 ಕೋಟಿಯನ್ನೂ ಗಳಿಸಬಹುದು. 200 ಕೋಟಿಯನ್ನೂ ಗಳಿಸಬಹುದು. ಆ ''ಅರ್ಹತೆ'' ಹಾಗೂ ''ಯೋಗ್ಯತೆ'' ಎರಡು ''ಕ್ರೂ'' ಚಿತ್ರಕ್ಕೆ ಇದೆ ಅನ್ನುವ ಮಾತು ಸದ್ಯಕ್ಕೆ ಹಿಂದಿ ವಲಯದಲ್ಲಿ ಕೇಳಿ ಬರುತ್ತಿದೆ.

ಒಟ್ನಲ್ಲಿ ಕಳೆದ ಮೂರು ತಿಂಗಳಿನಲ್ಲಿ ''ಹೃತಿಕ್ ರೋಷನ್'', ''ಶಾಹಿದ್ ಕಪೂರ್'', ''ಸಿದ್ಧಾರ್ಥ್ ಮಲ್ಹೋತ್ರಾ'' ಅವರಿಂದಾಗದ ಕೆಲಸವನ್ನ ಒಂದೇ ಚಿತ್ರದ ಮೂಲಕ ''ಕರೀನಾ ಕಪೂರ್'', ''ಟಬು'' ಹಾಗೂ ''ಕೃತಿ ಸನೋನ್'' ಮಾಡಿ ತೋರಿಸಿದ್ದಾರೆ. ಸಂಭ್ರಮದ ಅಲೆಯಲ್ಲಿ ಸದ್ಯಕ್ಕೆ ಮೂವರು ತೇಲುತ್ತಿದ್ದಾರೆ. ಸಹಜವಾಗಿ ಬಾಲಿವುಡ್ ನಲ್ಲಿಯೂ ಹಬ್ಬದ ವಾತಾವರಣ ಮನೆ ಮಾಡಿದೆ. ''ಹೆಣ್ಮಕ್ಳೇ ಸ್ಟ್ರಾಂಗು ಗುರು'' ಅನ್ನುವ ಮಾತು ಮಾರ್ದನಿಸುತ್ತಿದೆ.

More from Filmibeat

English summary
Kareena Kapoor Khan, Tabu And Kriti Sanon Starrer Crew Collected 62 Crore In Three Days At The World Box Office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X