''ಪ್ರೀತಿ ಯಾವತ್ತೂ ವಿಫಲವಾಗುವುದಿಲ್ಲ''- ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯ ಪ್ರೀತಿ ಪಾಠ..!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.
ಇನ್ನೂ ಪ್ರೀತಿ ಅನ್ನುವ ಪದದ ಅರ್ಥ ಬದಲಾಗದೇ ಇದ್ದರೂ, ಈ ಎರಡು ಕ್ಷೇತ್ರದಲ್ಲಿ ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ತುಂಬಾನೇ ಬದಲಾಗಿದೆ. ಸಂಬಂಧಕ್ಕಿಂತ ದುಡ್ಡೇ ದೊಡ್ಡಪ್ಪ ಎಂಬ ಮನಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅತ್ಯುತ್ತಮ ಸಾಕ್ಷಿ.

ಪರಸ್ಪರ ಪ್ರೀತಿಸಿ ಮೋಹಿಸಿ ಆ ನಂತರ ದೂರವಾದ ಈ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ಕಳೆದು ಹೋಗಿದ್ದಾರೆ. ಈ ಕಡೆ ಹಾರ್ದಿಕ್ ಪಾಂಡ್ಯ ನೋವು ಮರೆತು ಹೊಸ ಲವು ಹುಡುಕಾಡುತ್ತಾ ಕ್ರಿಕೆಟ್ ನಲ್ಲಿ ಮಗ್ನರಾಗಿದ್ದಾರೆ, ಆ ಕಡೆ ಸೆರ್ಬಿಯಾ ಸುಂದರಿ ನತಾಶ ಸದ್ಯಕ್ಕೆ ತವರು ಮನೆ ಸೇರಿದ್ದಾರೆ. ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಪ್ರೀತಿಯ ಕುರಿತು ಪದ್ಯವನ್ನು ಬರೆದಿದ್ದಾರೆ.
ಪ್ರೀತಿ ಅಂದರೆ ತಾಳ್ಮೆ.. ಪ್ರೀತಿ ಅಂದರೆ ದಯೆ.. ಎಂದಿರುವ ನತಾಶಾ, ಪ್ರೀತಿ ಅಸೂಯೆ ಪಡಲ್ಲ, ಪ್ರೀತಿ ಯಾವಾಗಲೈ ಹೆಮ್ಮೆ ಪಡುವುದಿಲ್ಲ. ಅದು ಯಾರನ್ನೂ ಅವಮಾನ ಮಾಡುವುದಿಲ್ಲ. ಯಾವತ್ತೂ ಪ್ರೀತಿ ಹೆಮ್ಮೆಯನ್ನು ಪಡುವುದಿಲ್ಲ, ಸ್ವಾರ್ಥಿಯಂತೂ ಪ್ರೀತಿ ಅಲ್ಲವೇ ಅಲ್ಲ, ಸುಲಭವಾಗಿ ಕೋಪಿಸಿಕೊಳ್ಳುವುದು ಇಲ್ಲ. ಪ್ರೀತಿ ಯಾವತ್ತು ತಪ್ಪುಗಳ ಕುರಿತು ದಾಖಲೆ ಇರಲ್ಲ. ಕೆಡುಕು ಇದ್ದರೆ ಪ್ರೀತಿ ಸಂತೋಷವೂ ಪಡುವುದಿಲ್ಲ. ಬದಲಿಗೆ ಪ್ರೀತಿ ನಮ್ಮನ್ನು ರಕ್ಷಿಸುತ್ತೆ. ನಂಬುತ್ತೆ. ನಮ್ಮ ಬದುಕಿಗೆ ಭರವಸೆಯನ್ನು ಕೂಡ ನೀಡುತ್ತೆ. ಪ್ರೀತಿ ಯಾವತ್ತು ವಿಫಲವಾಗುವುದಿಲ್ಲ ಎಂದು ನತಾಶಾ ಸ್ಟಾಂಕೋವಿಕ್ ಬರೆದುಕೊಂಡಿದ್ದಾರೆ.

ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಈ ಸಾಲುಗಳನ್ನು ಬರೆದುಕೊಂಡಿದ್ದು, ಸದ್ಯಕ್ಕೆ ಈ ಬರಹ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಯಾರು ಯಾರಿಂದ ಇಲ್ಲಿ ಮೋಸ ಹೋದರು ಎನ್ನುವ ಚರ್ಚೆ ನಡೆಯುತ್ತಿದೆ.
ಇನ್ನೂ ತೀರಾ ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಮೋಸ ಮತ್ತು ಭಾವನಾತ್ಮಕ ನಿಂದನೆಯ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದ ಫೋಸ್ಟ್‌ನ್ನು ಮೆಚ್ಚಿಕೊಂಡಿದ್ದರು. ಈ ಹಿನ್ನೆಲೆ ಆ ಫೋಸ್ಟ್ ಜೊತೆ ನತಾಶಾ ಅವರ ಈ ಬರಹವನ್ನು ತಾಳೆ ಹಾಕಿ ನೋಡುತ್ತಿರುವ ಅನೇಕರು ನತಾಶಾ ಅವರಿಗೆ ಹಾರ್ದಿಕ್ ಪಾಂಡ್ಯ ಅವರೇ ಮೋಸ ಮಾಡಿದ್ದಾರೆ ಎನ್ನುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಜೊತೆ ಮದುವೆಯಾದ ನಂತರ ನತಾಶಾ ತುಂಬಾ ನೊಂದು ಬೆಂದು ಹೋಗಿದ್ದಾರೆ ಎನ್ನುವುದಕ್ಕೆ ಅವರ ಈ ಬರಹವೇ ಸಾಕ್ಷಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ನತಾಶಾ ಅವರಿಗೆ ಧೈರ್ಯವನ್ನೂ ಹೇಳುತ್ತಿದ್ದಾರೆ.


Click it and Unblock the Notifications











