ಮಗಳ ಬಾಲಿವುಡ್ ಎಂಟ್ರಿಯ ಬಗ್ಗೆ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದೇನು?

ಟೀಂ ಇಂಡಿಯಾಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್. ಭಾರತ ವಿಶ್ವಕ್ರಿಕೆಟ್ ಗೆ ಪರಿಚಯಿಸಿದ ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ ಜೀವನ ಈಗ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಸುಮಾರು ಒಂದು ವರ್ಷದಿಂದ ಕಪಿಲ್ ದೇವ್ ಸಿನಿಮಾ ತಯಾರಾಗುತ್ತಿದೆ.

Recommended Video

Virat Kohli calls this pacer as a surprise package | VIRAT KOHLI | PRASIDH | ONEINDIA KANNADA

ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ 83 ಎಂದು ಹೆಸರಿಡಲಾಗಿದೆ. ತನ್ನ ಜೀವನಾಧಾರಿತ ಸಿನಿಮಾದ ಬಗ್ಗೆ ಮಾತನಾಡುತ್ತ ಕಪಿಲ್ ದೇವ್ ಮಗಳ ಸಿನಿ ಬದುಕಿನ ಬಗ್ಗೆಯು ವಿವರಿಸಿದ್ದಾರೆ. ವಿಶೇಷ ಅಂದರೆ '83' ಸಿನಿಮಾದಲ್ಲಿ ಕಪಿಲ್ ದೇವ್ ಮಗಳು ಅಮಿಯಾ ದೇವ್ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಾಗಾಗಿ ಕಪಿಲ್ ದೇವ್ ಪುತ್ರಿ ಬಾಲಿವುಡ್ ನಲ್ಲಿಯೆ ವೃತ್ತಿ ಜೀವನವನ್ನು ಮುಂದು ವರೆಸುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಇತ್ತೀಚಿಗೆ ಸಂದರ್ಶವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ಮಗಳ ಬಾಲಿವುಡ್ ಎಂಟ್ರಿಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

Cricketer Kapil Dev Speak About His Daughter Amiya Bollywood Career

"ಈ ಬಗ್ಗೆ ನನಗೆ ಗೊತ್ತಿಲ್ಲ. ಈ ಸಿನಿಮಾದ ಭಾಗವಾಗಬೇಕು ಎನ್ನುವುದು ಆಕೆಯ ಆಸೆಯಾಗಿತ್ತು. ನಿರ್ದೇಶಕ ಕಬೀರ್ ಖಾನ್ ಕೂಡ ಮಗಳು ಈ ಸಿನಿಮಾದಲ್ಲಿ ಕೆಲಸ ಮಾಡುವುದನ್ನು ಒಪ್ಪಿಕೊಂಡರು. ಮಗಳು ಬಾಲಿವುಡ್ ಎಂಟ್ರಿ ಕೊಡುವ ಬಗ್ಗೆ ನಾನು ಇದುವರೆಗೂ ಮಗಳ ಜೊತೆ ಮಾತನಾಡಿಲ್ಲ. ಆಕೆ ಇನ್ನು ಓದುತ್ತಿದ್ದಾಳೆ. ಓದು ಮುಗಿದ ಮೇಲೆ ಬಾಲಿವುಡ್ ಗೆ ಬರಬೇಕೊ ಅಥವಾ ಬೇಡವೊ ಎನ್ನುವ ಬಗ್ಗೆ ಆಕೆ ನಿರ್ಧಾರ ತೆಗೆದುಕೊಳ್ಳುತ್ತಾಳೆ" ಎಂದು ಹೇಳಿದ್ದಾರೆ.

'83' ಸಿನಿಮಾ ಈಗಾಗಲೆ ಫಸ್ಟ್ ಲುಕ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಭಾರತ ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದ ರೋಚಕ ಕ್ಷಣವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲ ಕಪಿಲ್ ದೇವ್ ಆಗಿ ರಣ್ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಪತ್ನಿಯ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಕಬೀರ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಏಪ್ರಿಲ್ 10ಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
Cricketer Kapil Dev speak about his daughter Amiya Bollywood career. Amiya was one of the assistant Director in the 83 movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X