ಸಲ್ಮಾನ್ ಖಾನ್ 'ರೇಸ್-3' ನೋಡಿದ ಧೋನಿ ದಂಪತಿ

By Bharath Kumar

Recommended Video

ರೇಸ್ 3 ಸಿನಿಮಾ ನೋಡಿ ಧೋನಿ ದಂಪತಿ ಹೇಳಿದ್ದೇನು ..? | Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಚಿತ್ರವನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪತ್ನಿ ಸಾಕ್ಷಿ ಜೊತೆ ನೋಡಿದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ 'ರೇಸ್-3' ಜೂನ್ 15 ರಂದು ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುಂಚೆ ಸೆಲೆಬ್ರಿಟಿಗಳಿಗಾಗಿ ಮುಂಬೈನಲ್ಲಿ ಪ್ರೀಮಿಯರ್ ಪ್ರದರ್ಶನ ಆಯೋಜಿಸಲಾಗಿತ್ತು. ಈ ಶೋಗೆ ಧೋನಿ ದಂಪತಿಯನ್ನ ಸ್ವತಃ ಸಲ್ಮಾನ್ ಖಾನ್ ಆಹ್ವಾನಿಸಿದ್ದರು. ಹೀಗಾಗಿ, ರೇಸ್ 3 ಸ್ಪೆಷಲ್ ಸ್ಕ್ರೀನಿಂಗ್ ಗೆ ಧೋನಿ ಬಂದಿದ್ದರು.

ಅಂದ್ಹಾಗೆ, ಧೋನಿ ಮತ್ತು ಸಲ್ಮಾನ್ ಖಾನ್ ಇತ್ತೀಚಿನ ವರ್ಷಗಳಲ್ಲಿ ಬಹಳ ಆತ್ಮೀಯರಾಗಿದ್ದಾರೆ. ಕಳೆದ ವರ್ಷದ ಸಲ್ಲು ಬರ್ತಡೇಯಲ್ಲೂ ಧೋನಿ ಭಾಗಿಯಾಗಿದ್ದರು.

Cricketer MS Dhoni Watches Salman Khans Race 3

ಸದ್ಯ, ಭಾರತ ಮತ್ತು ಅಪ್ಘಾನಿಸ್ತಾನದ ನಡುವೆ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಟೂರ್ನಿಯಿಂದ ಧೋನಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಕುಟುಂಬ ಮತ್ತು ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ ಕ್ರಿಕೆಟ್ ಲೋಕದ ಲೆಜೆಂಡ್ ಕ್ಯಾಪ್ಟನ್.

In pics: ರೇಸ್-3 ಚಿತ್ರವನ್ನ ಯಾರೆಲ್ಲ ನೋಡಿದ್ರು.?

ಧೋನಿ ದಂಪತಿ ಜೊತೆಗೆ ಗಮನ ಸೆಳೆದ ಮತ್ತೊಂದು ಜೋಡಿ ಸಲ್ಮಾನ್ ಖಾನ್ ಸಹೋದರ. ತನ್ನ ಪತ್ನಿ ಸೀಮಾ ಮತ್ತು ಮಗು ಜೊತೆ ಸಿನಿಮಾ ನೋಡಿದ ಶೋಹಿಲ್ ಖಾನ್ ಇತ್ತೀಚಿಗೆ ಐಪಿಎಲ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಇನ್ನು ರೆಮೋ ಡಿಸೋಜಾ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಡೈಸಿ ಶಾ, ಅನಿಲ್ ಕಪೂರ್, ಸಾಕೀಬ್ ಸಲೀಮ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

More from Filmibeat

English summary
Salman Khan's Race 3 is set for release come June 15 but before that the Race 3 family watched the film together with their close friends and relatives on Tuesday. At a special screening in Mumbai, Salman Khan invited cricketer MS Dhoni and his wife Sakshi for a preview show of his film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X