"ನಾನ್ ಯಾವಾಗ ರಶ್ಮಿಕಾ ನನ್ನ ಕ್ರಶ್ ಅಂತ ಹೇಳ್ದೆ"? ಕ್ರಿಕೆಟಿಗ ಶುಭ್‌ಮನ್ ಗಿಲ್ ಶಾಕ್

ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಪಾಸಿಟಿವೋ ನೆಗೆಟಿವೋ ಕೊಡಗಿನ ಕುವರಿ ಸುದ್ದಿಯಲ್ಲಿ ಇರ್ತಾರೆ. ರೋಶ್ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು, ಫೋಟೊ, ವಿಡಿಯೋಗಳು ಎಲ್ಲವೂ ಸದ್ದು ಮಾಡುತ್ತಿರುತ್ತದೆ. ಬಾಲಯ್ಯ ಸೇರಿದಂತೆ ಸೆಲೆಬ್ರೆಟಿಗಳು ಕೂಡ ಕಿರಿಕ್ ಬೆಡಗಿ ಅಭಿಮಾನಿಗಳಾಗಿದ್ದಾರೆ. ಆ ಸಾಲಿಗೆ ಕ್ರಿಕೆಟಿಗ ಶುಭ್‌ಮನ್ ಗಿಲ್ ಸೇರಿದ್ದಾರೆ ಎನ್ನಲಾಗಿತ್ತು.

"ರಶ್ಮಿಕಾ ಮಂದಣ್ಣ ನನ್ನ ಕ್ರಶ್" ಎಂದು ಕ್ರಿಕೆಟಿಗ ಶುಭ್‌ಮನ್ ಗಿಲ್ ಹೇಳಿದ್ದಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಎಂದು ಸ್ವತಃ ಶುಭ್‌ಮನ್ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಪಂಜಾಬ್ ಮೂಲದ ಕ್ರಿಕೆಟಿಗ ರಶ್ಮಿಕಾ ಕುರಿತು ಮಾತನಾಡಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಕೇಳಿ ರೋಶ್ ಅಭಿಮಾನಿಗಳು ಕುಣಿದು ಸಂಭ್ರಮಿಸಿದ್ದರು. ಆದರೆ ಅವರ ಸಂಭ್ರಮದ ಬಲೂನಿಗೆ ಗಿಲ್ ಸೂಜಿ ಚುಚ್ಚಿದ್ದಾರೆ.

Cricketer Shubman gill Dismisses Rumours of Having a Crush on Rashmika Mandanna

ರಶ್ಮಿಕಾ ಮಂದಣ್ಣ ನನ್ನ ಕ್ರಶ್ ಎಂದು ಶುಭ್‌ಮನ್ ಗಿಲ್ ಹೇಳಿದ್ದಾರೆ ಎಂದು ಇನ್‌ಸ್ಟಾಂಟ್ ಬಾಲಿವುಡ್ ಇನ್‌ಸ್ಟಾಗ್ರಾಂ(instant bollywood) ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಆ ಪೋಸ್ಟ್ ನೋಡಿ ಅಚ್ಚರಿಗೊಂಡಿರುವ ಗಿಲ್ ಕಾಮೆಂಟ್ ಮಾಡಿ ಇದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಯಾವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದೆ ಎಂದು ಕೇಳಿದ್ದಾರೆ. ಇನ್ನು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಜೊತೆ ಶುಭ್‌ಮನ್ ಗಿಲ್ ಹೆಸರು ತಳುಕು ಹಾಕಿಕೊಂಡಿರುತ್ತದೆ.

ಕೆಲ ದಿನಗಳ ಹಿಂದೆ ಶುಭ್‌ಮನ್ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದಾಗ ಸಾರಾ ತೆಂಡೂಲ್ಕರ್ ಹೆಸರು ಟ್ರೆಂಡ್ ಆಗಿತ್ತು. ಇನ್ನು ಲಂಡನ್‌ ಕೆಫೆವೊಂದರಲ್ಲಿ ಶುಭ್‌ಮನ್ ಕಾಫಿ ಹೀರುತ್ತಾ ಕ್ಲಿಕ್ಕಿಸಿಕೊಂಡಿದ್ದ ಫೋಟೊ ಶೇರ್ ಮಾಡಿದ್ದರು. ಇದರ ಬೆನ್ನಲ್ಲೇ ಅದೇ ಕೆಫೆಯಲ್ಲಿ ಅದೇ ಜಾಗದಲ್ಲಿ ಸಾರಾ ಕ್ಲಿಕ್ಕಿಸಿಕೊಂಡಿದ್ದ ಫೋಟೋ ತೋರಿಸಿ ಕಾಪಿ ಎಂದಿದ್ದರು. ಇಬ್ಬರು ಒಟ್ಟಿಗೆ ಹೋಗಿದ್ದಾರೆ. ಆಗ ತೆಗೆದುಕೊಂಡಿರುವ ಫೋಟೊ ಅಂತೆಲ್ಲಾ ಕಾಮೆಂಟ್ ಮಾಡಿದರು. ಆದರೆ ಈ ಬಗ್ಗೆ ಶುಭ್‌ಮನ್ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಈಗ ಮಾತ್ರ ರಶ್ಮಿಕಾ ವಿಚಾರದಲ್ಲಿ ಸ್ಪಷ್ಟನೆ ನೀಡಿರೋದು ಅಚ್ಚರಿ ಮೂಡಿಸಿದೆ.

Cricketer Shubman gill Dismisses Rumours of Having a Crush on Rashmika Mandanna

ಅದೆಲ್ಲಾ ಏನೇ ಇದ್ದರೂ ಇದಕ್ಕೂ ರಶ್ಮಿಕಾಗೂ ಸಂಬಂಧ ಇಲ್ಲದೇ ಇದ್ದರೂ ಎರಡು ದಿನಗಳ ಕಾಲ ಈ ಸುದ್ದಿ ವೈರಲ್ ಆಗಿತ್ತು. ಅದು ಶುಭ್‌ಮನ್ ಕಣ್ಣಿಗೆ ಬೀಳುತ್ತಿದ್ದಂತೆ ಈಗ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ರಶ್ಮಿಕಾ ವಿಚಾರಕ್ಕೆ ಬಂದರೆ ನಿಂತರೂ ಕುಂತರೂ ಸುದ್ದಿ ಆಗುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ 2 ಸಿನಿಮಾಗಳು ಮಾತ್ರ ಇವೆ. 'ಪುಷ್ಪ-2' ಹಾಗೂ 'ಅನಿಮಲ್' ಸಿನಿಮಾಗಳ ನಂತರ ಯಾವ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈ 2 ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 'ಪುಷ್ಪ' ಸಿನಿಮಾ ಹಿಟ್ ಆಗಿ ಸೀಕ್ವೆಲ್ ಬಗ್ಗೆ ಕುತೂಹಲ ಮೂಡಿಸಿದೆ.

More from Filmibeat

English summary
Cricketer Shubman gill Dismisses Rumours of Having a Crush on Rashmika Mandanna. He Asked Which media interaction was this, that I myself don’t know about. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X