ಹುಡುಗರ ಹೃದಯ ನುಚ್ಚುನೂರು; ಬಾಯ್‌ಫ್ರೆಂಡ್ ಜೊತೆ ಸ್ಮೃತಿ ಮಂಧಾನ ಫೋಟೊ ವೈರಲ್
ಭಾರತ ಮಹಿಳಾ ಕ್ರಿಕೆಟ್ ತಂಡ ಆಟಗಾರ್ತಿ ಸ್ಮೃತಿ ಮಂಧಾನಗೆ ದೊಡ್ಡ ಅಭಿಮಾನಿ ಬಳಗವಿದೆ. ಆಕೆ ಒಳ್ಳೆ ಬ್ಯಾಟ್ಸ್‌ವುಮೆನ್ ಮಾತ್ರವಲ್ಲ, ಬ್ಯೂಟಿ ಕ್ವೀನ್ ಕೂಡ ಹೌದು. ಆಕೆಯ ಕ್ರಿಕೆಟ್ ನೋಡಿ ಮಾತ್ರವಲ್ಲ ಚೆಲುವೆಗೂ ಅಭಿಮಾನಿಗಳಾದವರು ಇದ್ದಾರೆ.
ನ್ಯಾಷನಲ್ ಕ್ರಶ್ ಆಗಿರುವ ಸ್ಮೃತಿ ಮಂಧನಾಗೆ ಬಾಯ್ ಫ್ರೆಂಡ್ ಇರುವ ವಿಚಾರ ಗೊತ್ತಾಗಿ ಪಡ್ಡೆಹುಡುಗರ ಹೃದಯ ನುಚ್ಚು ನೂರಾಗಿತ್ತು. ಇದೀಗ ಮತ್ತಷ್ಟು ನೋಯಿಸುವಂತ ಪೋಸ್ಟ್ ಮಾಡಿದ್ದಾರೆ ಸ್ಮೃತಿ. ಮುಂಬೈ ಮೂಲದ ಈಕೆ ಭಾರತೀಯ ಮಹಿಳಾ ಕ್ರಿಕೆಟ್ ಲೋಕದಲ್ಲಿ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿಯಾಗಿಯೂ ಗುರ್ತಿಸಿಕೊಂಡಿದ್ದಾರೆ.

ಈ ಬಾರಿ ಆರ್‌ಸಿಬಿ ಮಹಿಳಾ ತಂಡ ಟ್ರೋಫಿ ಎತ್ತಿ ಹಿಡಿಯುವಲ್ಲಿ ಸ್ಮೃತಿ ಪಾತ್ರ ದೊಡ್ಡದಿದೆ. ಸದ್ಯ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಸ್ಮೃತಿ ಮಂಧನಾ ಹಾಗೂ ಸಂಗೀತ ನಿರ್ದೇಶಕ ಪಾಲಾಶ್ ಮುಚ್ಚಲ್ ಲವ್ವಿ ಡವ್ವಿ ಗೊತ್ತೇಯಿದೆ. ಇಬ್ಬರ ಪ್ರೀತಿಗೆ ಪ್ರೀತಿಗೆ 5 ವರ್ಷ ತುಂಬಿದ್ದು, ಜೋಡಿ ಕೇಕ್ ಕತ್ತರಿಸಿ ತಮ್ಮ ಪ್ರೀತಿಯ ವಾರ್ಷಿಕೋತ್ಸವನ್ನು ಸೆಲೆಬ್ರೇಟ್ ಮಾಡಿದ್ದಾರೆ.
ಸದ್ಯ ಈ ಫೋಟೊ ಸಖತ್ ವೈರಲ್ ಆಗುತ್ತಿದೆ. ಆರ್‌ಸಿಬಿ ಮಹಿಳಾ ತಂಡ ಐಪಿಎಲ್ ಟ್ರೋಫಿ ಗೆದ್ದಾಗ ಕ್ರೀಡಾಂಗಣದಲ್ಲಿ ಟ್ರೋಫಿ ಜೊತಗೆ ಸ್ಮೃತಿ- ಪಾಲಾಶ್ ಮುಚ್ಚಲ್ ತಬ್ಬಿ ಪೋಸ್ ನೀಡಿದ್ದರು. ಆ ಸಮಯದಲ್ಲೇ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವುದು ಜಗಜ್ಜಾಹೀರಾಗಿತ್ತು.
ಪಾಲಾಶ್ ಮುಚ್ಚಲ್ ಸಂಗೀತ ನಿರ್ದೇಶಕನಾಗಿ ಬಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ಟಿ ಸೀರಿಸ್, ಜೀ ಮ್ಯೂಸಿಕ್‌ಗಾಗಿ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಪಾಲಾಶ್ ಕಂಪೋಸ್ ಮಾಡಿದ್ದಾರೆ. 'ಡಿಶ್ಕಿಯಾವೂನ್', 'ಬೂತ್‌ನಾಥ್ ರಿಟರ್ಟ್ಸ್' ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ - ದೀಪಿಕಾ ಪಡುಕೋಣೆ ನಟನೆಯ 'ಖೇಲೀಂ ಹಮ್ ಜೀ ಜಾನ್ ಸೇ' ಚಿತ್ರದ ಸಣ್ಣ ಪಾತ್ರದಲ್ಲಿ ಪಾಲಾಶ್ ಮಿಂಚಿದ್ದರು.
18 ವರ್ಷ ವಯಸ್ಸಿನಲ್ಲಿ ಮುಚ್ಚಲ್ ಬಾಲಿವುಡ್‌ನ ಅತ್ಯಂತ ಕಿರಿಯ ಸಂಗೀತ ಸಂಯೋಜಕ ಎನಿಕೊಂಡಿದ್ದರು. ಬಾಲಿವುಡ್‌ನ ಅತ್ಯಂತ ಕಿರಿಯ ಸಂಗೀತ ಸಂಯೋಜಕರಾಗಿ ವಿಶ್ವ ದಾಖಲೆಗಳ ಗೋಲ್ಡನ್ ಬುಕ್‌ನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಇದೇ ಮೊದಲ ಬಾರಿಗೆ ಪಾಲಾಶ್ ಹಾಗೂ ಸ್ಮೃತಿ ತಮ್ಮ ಪ್ರೀತಿ ವಿಚಾರದ ಬಗ್ಗೆ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ಸೆಲೆಬ್ರೆಟಿಗಳು ಕೂಡ ಪಾಲಾಶ್ ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪಾಲಾಶ್ ಈ ಪೋಸ್ಟ್ ಮಾಡಿದ್ದಾರೆ. 2 ಮಿಲಿಯನ್ ಫಾಲೋವರ್ಸ್ ಇರುವ ಪೇಜ್‌ನಲ್ಲಿ ಈ ಪೋಸ್ಟ್‌ಗೆ 70 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಇನ್ನು ಪೋಸ್ಟ್‌ಗೆ ಸ್ಮೃತಿ 3 ರೆಡ್ ಹಾರ್ಟ್ ಸಿಂಬಲ್ ಹಾಕಿ ಕಾಮೆಂಟ್ ಮಾಡಿದ್ದಾರೆ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುತ್ತಿದ್ದಾರೆ. ಗಾಯಕನಾಗಿ, ಗೀತ ಸಾಹಿತಿಯಾಗಿ, ಬರಹಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ಸದ್ಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟಿ20 ಸರಣಿಯಲ್ಲಿ ಸ್ಮೃತಿ ಮಂಧಾನ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆದ್ದಿದ್ದರೆ 2 ಪಂದ್ಯ ಮಳೆಯಿಂದ ರದ್ದಾಗಿತ್ತು. 3ನೇ ಪಂದ್ಯ ಇಂದು(ಜುಲೈ 9) ಚೆನ್ನೈನಲ್ಲಿ ನಡೆಯಲಿದೆ.


Click it and Unblock the Notifications











