For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಕಡೆ ಮುಖ ಮಾಡಿದ ಯುವರಾಜ್ ಸಿಂಗ್!

  By Bharath Kumar
  |

  ನಟಿ ಹೇಜಲ್ ಕೀಚ್ ಜೊತೆಗೆ ಸಪ್ತಪದಿ ತುಳಿದಿದ್ದ ಯುವರಾಜ್ ಸಿಂಗ್ ಈಗ ಬಾಲಿವುಡ್ ಕಡೆಗೆ ಮುಖ ಮಾಡ್ತಿದ್ದಾರೆ. ಹಾಗಂತ ಯುವರಾಜ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರ ಅಂತ ಅಂದುಕೊಳ್ಳಬೇಡಿ. ಬದಲಾಗಿ ತಮ್ಮ ಸಹೋದರನನ್ನ ಬಿಗ್ ಸ್ಕ್ರೀನ್ ಗೆ ಕರೆತರಲು ಚಿಂತಿಸಿದ್ದಾರೆ.

  ಹೌದು, ಯುವರಾಜ್ ಸಿಂಗ್ ಸಹೋದರ ಜೋರಾವರ್ ಅವರ ಜೊತೆ ಸಿನಿಮಾ ಮಾಡಲು ಯುವಿ ಪ್ಲಾನ್ ಮಾಡ್ತಿದ್ದಾರೆ. ಯುವರಾಜ್ ಮತ್ತು ಅವರ ತಾಯಿ ಶಬನಮ್, ಬಾಲಿವುಡ್ ನಿರ್ಮಾಪಕರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ಕೂಡ ನಡೆಸಿದ್ದಾರಂತೆ.

  ಅಂದ್ಹಾಗೆ, ಕಳೆದ ವರ್ಷ ಯುವರಾಜ್ ಸಿಂಗ್ ಸಹೋದರ ಜೋರಾವರ್ ವಿವಾದದಿಂದಾಗಿಯೇ ಸುದ್ದಿಯಲ್ಲಿದ್ದರು. ಯುವರಾಜ್ ತಾಯಿ ಶಬನಮ್ ವಿರುದ್ಧ ಬಿಗ್ ಬಾಸ್ ನಲ್ಲಿ ಜೋರಾವರ್ ಸಿಂಗ್ ರ ವಿಚ್ಛೇದಿತ ಪತ್ನಿ ಆಕಾಂಕ್ಷಾ ಶರ್ಮಾ ಆರೋಪ ಮಾಡಿದ್ದಳು. ತಮ್ಮ ಮದುವೆ ಮುರಿದು ಬೀಳಲು ಶಬನಮ್ ಕಾರಣ ಅಂತಾ ಹೇಳಿದ್ದಳು. ಅಷ್ಟೇ ಅಲ್ಲ ಜೋರಾವರ್ ಕೆಲಸ ಮಾಡದ ಶುದ್ಧ ಸೋಂಬೇರಿ ಅಂತಾನು ಹೇಳಿದ್ದರು.

  ಇದೀಗ, ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಸಹೋದರ ಜೋರಾವರ್ ಅವರನ್ನ ಬಾಲಿವುಡ್ ಗೆ ಪರಿಚಯಿಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಜೋರಾವರ್ ಕೂಡ ತೂಕ ಇಳಿಸಿಕೊಂಡು ಹ್ಯಾಂಡ್ ಸಮ್ ಲುಕ್ ಪಡೆದುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೇ, ಯುವರಾಜ್ ಸಿಂಗ್ ಸಹೋದರ ಆದಷ್ಟೂ ಬೇಗ ಬಾಲಿವುಡ್ ಬೆಳ್ಳಿ ಪರದೆಯ ಮೇಲೆ ಮಿಂಚಲಿದ್ದಾರೆ.

  English summary
  As per news sources, the stylish southpaw wants to launch his younger brother, Zorawar, in films as a hero. In this regard, Yuvi, along with mother Shabnam, has held several meetings with well-known film producers and financiers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X