twitter
    For Quick Alerts
    ALLOW NOTIFICATIONS  
    For Daily Alerts

    ಕಂಗನಾ ವಿರುದ್ಧ ಮತ್ತೊಂದು ದೇಶದ್ರೋಹ ಪ್ರಕರಣ ದಾಖಲು: ಜೈಲಿಗೆ ಹೋಗಲು ಸಿದ್ಧ ಎಂದ ನಟಿ

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿ ವಿರುದ್ಧ ಮುಂಬೈನ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮತ್ತೊಂದು ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ ಜೈಲಿಗೆ ಹೋಗಲು ಕಾಯುತ್ತಿರುವುದಾಗಿ ಹೇಳಿದ್ದಾರೆ.

    ಗುರುವಾರ ವಕೀಲ ಅಲಿ ಕಾಶಿಫ್ ದೇಶ್ ಮುಖ್, ಕಂಗನಾ ಸಹೋದರಿಯರ ವಿರುದ್ಧ ಧಾರ್ಮಿಕ ವಿಷಯವಾಗಿ ಸಮುದಾಯಗಳ ನಡುವೆ ಕಲಹ, ದ್ವೇಷ ಹುಟ್ಟುಹಾಕುವುದು ಮತ್ತು ನ್ಯಾಯಾಂಗವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ದಾರು ದಾಖಲಿಸಿದ್ದಾರೆ. ಬಾಂದ್ರಾ ಕೋರ್ಟ್ ಎಫ್ ಐ ಆರ್ ದಾಖಲಿಸಲು ಆದೇಶ ನೀಡಿದ್ರೆ, ಪಪ್ಪು ಸೇನಾ ಪದ ಬಳಸುವ ಮೂಲಕ ನ್ಯಾಯಾಲಯದ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಹಿಂದೆ ಕಂಗನಾ ಮತ್ತು ಸಹೋದರಿ ರಂಗೋಲಿ ಮಾಡಿರುವ ಟ್ವೀಟ್ ಗಳನ್ನು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮುಂದೆ ಓದಿ..

    ಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶಕಂಗನಾ ರಣೌತ್ ಹಾಗೂ ಸಹೋದರಿ ಮೇಲೆ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

    ಕಳೆದ ವಾರ ಕಂಗನಾ ವಿರುದ್ಧ ದಾಖಲಾಗಿತ್ತು ದೂರು

    ಕಳೆದ ವಾರ ಕಂಗನಾ ವಿರುದ್ಧ ದಾಖಲಾಗಿತ್ತು ದೂರು

    ಕಳೆದ ವಾರ ಮುಂಬೈನ ಬಾಂದ್ರಾದಲ್ಲಿ ದಾಖಲಾದ ಎಫ್ ಐ ಆರ್ ಬಳಿಕ ಕಂಗನಾ ವಿರುದ್ಧ ದಾಖಲಾಗುತ್ತಿರುವ ಎರಡನೇ ದೂರು ಇದಾಗಿದೆ. ಈ ಬಗ್ಗೆ ಕಂಗನಾ ಇಂದು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಂತೆ ಹೇಗೆ ಭಾವಿಸುತ್ತಾರೆ ಎಂದು ವ್ಯಕ್ತಪಡಿಸಿದ್ದಾರೆ.

    ಜೈಲಿನಲ್ಲಿ ಇರಲು ಕಾಯುತ್ತಿದ್ದೇನೆ-ಕಂಗನಾ

    ಜೈಲಿನಲ್ಲಿ ಇರಲು ಕಾಯುತ್ತಿದ್ದೇನೆ-ಕಂಗನಾ

    ಮಹಾರಾಷ್ಟ್ರ ಸರ್ಕಾರ ತನ್ನನ್ನು ಜೈಲಿಗೆ ಕಳುಹಿಸಲು ನಿರ್ಧರಿಸಿದೆ ಎಂದಿರುವ ಕಂಗನಾ, "ನಾನು ಸಾವರ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಝಾನ್ಸಿ ರಾಣಿಯಂತಹ ಜನರನ್ನು ಪೂಜಿಸುತ್ತೇನೆ. ಆದರೆ ಇಂದು ಸರ್ಕಾರ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ. ಅದು ನನ್ನ ಆಯ್ಕೆಗಳ ಬಗ್ಗೆ ನನಗೆ ವಿಶ್ವಾಸವಿದೆ. ಶೀಘ್ರದಲ್ಲೇ ಜೈಲಿನಲ್ಲಿ ಇರಲು ಕಾಯುತ್ತಿದ್ದೇನೆ. ಇದು ನನ್ನ ಜೀವನಕ್ಕೆ ಒಂದು ಅರ್ಥವನ್ನು ನೀಡುತ್ತಿದೆ. ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.

    ನವರಾತ್ರಿ ಹಬ್ಬಕ್ಕೆ ಅಶ್ಲೀಲ ಸಂದೇಶ: ಎರೋಸ್ ಅನ್ನು ಪಾರ್ನ್ ಹಬ್‌ ಗೆ ಹೋಲಿಸಿದ ನಟಿನವರಾತ್ರಿ ಹಬ್ಬಕ್ಕೆ ಅಶ್ಲೀಲ ಸಂದೇಶ: ಎರೋಸ್ ಅನ್ನು ಪಾರ್ನ್ ಹಬ್‌ ಗೆ ಹೋಲಿಸಿದ ನಟಿ

    ಕ್ಯಾಂಡಲ್ ಮೆರವಣಿಗೆ ಗ್ಯಾಂಗ್, ಪ್ರಶಸ್ತಿ ವಾಪಸ್ಸಿ ಗ್ಯಾಂಗ್

    ಕ್ಯಾಂಡಲ್ ಮೆರವಣಿಗೆ ಗ್ಯಾಂಗ್, ಪ್ರಶಸ್ತಿ ವಾಪಸ್ಸಿ ಗ್ಯಾಂಗ್

    ಮತ್ತೊಂದು ಟ್ವೀಟ್ ನಲ್ಲಿ ಕಂಗನಾ ಕ್ಯಾಂಡಲ್ ಲೈಟ್ ಮೆರವಣಿಗೆ, ಪ್ರತಿಭಟನೆಯ ಸಂಕೇತವಾಗಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಲು ಮುಂದಾಗುವವರ ಬಗ್ಗೆಯೂ ಮಾತನಾಡಿದ್ದಾರೆ. "ಕ್ಯಾಂಡಲ್ ಮೆರವಣಿಗೆ ಗ್ಯಾಂಗ್, ಪ್ರಶಸ್ತಿ ವಾಪಸ್ಸಿ ಗ್ಯಾಂಗ್ ನೋಡಿ ಫ್ಯಾಸಿಸ್ಟ್ ವಿರೋಧಿ ಸ್ಥಾಪನ ಕ್ರಾಂತಿಕಾರಿಗಳಿಗೆ ಏನಾಗುತ್ತಿದೆ, ನಿಮ್ಮೆಲ್ಲರಂತೆ ಅಲ್ಲ, ನಿಮ್ಮನ್ನು ಯಾರು ಕೇಳೋದು ಇಲ್ಲ. ನನ್ನು ನೋಡಿ, ಮಹಾರಾಷ್ಟ್ರದ ನಿಜವಾದ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಹೋರಾಡುವ ನನ್ನ ಜೀವನಕ್ಕೆ ಒಂದು ಅರ್ಥವಿದೆ, ಅದು ನಿಮ್ಮೆಲ್ಲರಂತೆ ಮೋಸವಲ್ಲ" ಎಂದು ಬರೆದುಕೊಂಡಿದ್ದಾರೆ.

    ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಕಳೆದ ವಾರ ಕಂಗನಾ ಮತ್ತು ಸಹೋದರಿ ರಂಗೋಲಿ ವಿರುದ್ಧ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಾದ ದೂರಿನ ಮೇರೆಗೆ ಪೊಲೀಸರು ಕಂಗನಾ ಸಹೋದರಿಯರನ್ನು ಮುಂದಿನ ವಾರ ಅಕ್ಟೋಬರ್ 26 ಮತ್ತು 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

    English summary
    Criminal case filed against Actress Kangana Ranaut for allegedly creating disharmony. She says 'waiting to be in jail'.
    Friday, October 23, 2020, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X