twitter
    For Quick Alerts
    ALLOW NOTIFICATIONS  
    For Daily Alerts

    'ದಬಾಂಗ್ 3': ಬೆಂಕಿಯಿಂದ ಎದ್ದು ಬಂದ ವಿಲನ್ ಸುದೀಪ್

    |

    Recommended Video

    ಸಲ್ಮಾನ್ ಕೊಟ್ಟ ಸಪ್ರೈಸ್ ಗೆ ಕಿಚ್ಚ ಸುದೀಪ್ ಫುಲ್ ಹ್ಯಾಪಿ. | Dabang 3

    'ದಬಾಂಗ್ 3' ಸಿನಿಮಾದಲ್ಲಿ ಕನ್ನಡ ನಟ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಇಂದು (ಸಪ್ಟೆಂಬರ್ 8) ಅವರ ಪಾತ್ರದ ಲುಕ್ ಹೊರಬಂದಿದೆ. ಸಿನಿಮಾದ ನಾಯಕ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

    ''ಖಳ ನಾಯಕ ಎಷ್ಟೋ ದೊಡ್ಡವನಾಗಿದ್ದರೂ, ಅವನಿಗೆ ಟಕ್ಕರ್ ಕೊಡುವುದರಲ್ಲಿ ಇರುವ ಮಜಾನೇ ಬೇರೆ'' ಎಂದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. ಈ ರೀತಿ ತಮ್ಮ ಸಿನಿಮಾದ ವಿಲನ್ ಪೋಸ್ಟರ್ ಅನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಸಲ್ಮಾನ್ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಸಲ್ಮಾನ್ ಖಾನ್ ಜೊತೆಗೆ ತೆರೆ ಹಂಚಿಕೊಂಡ ಖುಷಿಯನ್ನು ವ್ಯಕ್ತಿಪಡಿಸಿದ್ದಾರೆ.

    Dabang 3 Movie Kiccha Sudeep Poster Released

    ಸುದೀಪ್ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರದ ಹೆಸರು ಬಲ್ಲಿ. ಬೆಂಕಿಯ ನಡುವೆ ನಿಂತು ಸುದೀಪ್ ಕಿಲ್ಲಿಂಗ್ ಲುಕ್ ನೀಡಿದ್ದಾರೆ. ಬೆಂಕಿಯ ನಡುವೆ ನಿಂತು ಸುದೀಪ್ ಕಿಲ್ಲಿಂಗ್ ಲುಕ್ ನೀಡಿದ್ದಾರೆ. ಅವರ ಪಾತ್ರ ತುಂಬ ಪವರ್ ಫುಲ್ ಆಗಿದ್ದು, ಲೀಡ್ ರೋಲ್ ಚುಲ್ ಬುಲ್ ಪಾಂಡೆಗೆ ಫೈಟ್ ನೀಡಲಿದ್ದಾರೆ.

    ಪ್ರಭುದೇವ ಸಿನಿಮಾದ ನಿರ್ದೇಶಕನಾಗಿದ್ದಾರೆ. ಸೋನಾಕ್ಷಿ ಸಿನ್ಹಾ ನಾಯಕಿಯಾಗಿದ್ದಾರೆ. ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿಯೂ ಸಿನಿಮಾ ರಿಲೀಸ್ ಆಗುತ್ತಿದೆ.

    'ಫೂಂಕ್', 'ರಣ್' ಸಿನಿಮಾಗಳ ನಂತರ ಮತ್ತೆ ಹಿಂದಿ ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದಾರೆ. 'ಈಗ' ಸಿನಿಮಾದ ಲುಕ್ ಗೆ ಈ ಪೋಸ್ಟರ್ ಹೋಲಿಕೆ ಆಗುತ್ತಿದೆ. ಪೋಸ್ಟರ್ ನಲ್ಲಿ ಸುದೀಪ್ ಹಿಂದೆ ಮಾತ್ರವಲ್ಲದೆ ಅವರ ಕಣ್ಣಿನಲ್ಲಿಯೂ ಬೆಂಕಿ ಇದೆ.
    ಒಂದು ಕಡೆ 'ಪೈಲ್ವಾನ್' ಅಬ್ಬರ ನಡೆಯುತ್ತಿದ್ದು, ಅವರ ಜೊತೆಗೆ 'ದಬಾಂಗ್ 3' ಸದ್ದು ಮಾಡುತ್ತಿದೆ.

    English summary
    'Dabang 3' hindi movie Kiccha Sudeep poster released.
    Tuesday, October 8, 2019, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X