ದಬಾಂಗ್ ಹೀನಾಯ ಪ್ರದರ್ಶನ: ಸೌತ್ ನಟನ ಮುಂದೆ ಮಂಕಾದ ಸಲ್ಲು-ಸುದೀಪ್!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯಿಸಿದ್ದ ದಬಾಂಗ್ 3 ಸಿನಿಮಾ ಸುಮಾರು 300 ಕೋಟಿವರೆಗೂ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಸಲ್ಲು ಚಿತ್ರ ದಾಖಲೆ ಮಾಡುತ್ತಿತ್ತು. ಆದರೆ, ನಿರೀಕ್ಷಿಸಿದಂತೆ ಆಗಲಿಲ್ಲ.

ಸದ್ಯದ ಮಟ್ಟಿಗೆ ದಬಾಂಗ್ ಸಿನಿಮಾದ ಗಳಿಕೆ ನೋಡಿದ್ರೆ ಬಾಕ್ಸ್ ಆಫೀಸ್ ನಲ್ಲಿ ಸೋಲು ಎಂದು ನಿರ್ಧರಿಸಲಾಗಿದೆ. 200 ಕೋಟಿ ಅಥವಾ 250 ಕೋಟಿ ಕಲೆಕ್ಷನ್ ಮಾಡೋದು ಅನುಮಾನವಾಗಿದೆ.

ಈ ಸೋಲು ಸಲ್ಮಾನ್ ಖಾನ್ ಪ್ರತಿ‍ಷ್ಠೆಗೆ ಮುಳುವಾಗಿದೆ. ಸೌತ್ ಸ್ಟಾರ್ ನಟನ ಮುಂದೆ ಸಲ್ಲು ಚಿತ್ರ ಮಂಡಿಯೂರಿರುವುದು ಖಾನ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟಕ್ಕೂ, ಆ ಸೌತ್ ಸ್ಟಾರ್ ಯಾರು? ಏನಿದು ಕಥೆ? ಮುಂದೆ ಓದಿ....

'ಸಾಹೋ' ಚಿತ್ರದ ಮುಂದೆ ದಬಾಂಗ್ ಡಲ್ಲು

'ಸಾಹೋ' ಚಿತ್ರದ ಮುಂದೆ ದಬಾಂಗ್ ಡಲ್ಲು

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ನಟಿಸಿದ್ದ ಸಾಹೋ ಸಿನಿಮಾ ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಪ್ರೇಕ್ಷಕರನ್ನು ನಿರಾಸೆ ಮಾಡಿದ ಸಾಹೋ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿರಲಿಲ್ಲ. 350 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ 433 ಕೋಟಿವರೆಗೂ ಗಳಿಕೆ ಕಂಡಿತ್ತು. ಹಿಂದಿಯಲ್ಲಿ ಮಾತ್ರ 148 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ, ದಬಾಂಗ್ ಚಿತ್ರದ ಈ ಸಿನಿಮಾದ ದಾಖಲೆ ಬ್ರೇಕ್ ಮಾಡಲು ಕಷ್ಟಪಡುತ್ತಿದೆ.

ಸಲ್ಲು ಮಾರುಕಟ್ಟೆ ಕಮ್ಮಿ ಆಯ್ತಾ?

ಸಲ್ಲು ಮಾರುಕಟ್ಟೆ ಕಮ್ಮಿ ಆಯ್ತಾ?

ತೆಲುಗು ನಟನ ಚಿತ್ರವೊಂದು ಹಿಂದಿ ಬಾಕ್ಸ್ ಆಫೀಸ್ ನಲ್ಲಿ ಸಾಧಿಸಿದಷ್ಟು ಅಧಿಪತ್ಯ ಸಲ್ಮಾನ್ ಖಾನ್ ಸಿನಿಮಾದಿಂದ ಯಾಕೆ ಆಗಿಲ್ಲ ಎನ್ನುವುದು ಈಗ ಚರ್ಚೆಗೆ ಕಾರಣವಾಗಿದೆ. ಸಲ್ಲು ಸಿನಿಮಾ ಚೆನ್ನಾಗಿದ್ದರೂ ಚೆನ್ನಾಗಿರಲಿಲ್ಲ ಅಂದರೂ 150 ಕೋಟಿ ಬಿಸಿನೆಸ್ ಸುಲಭವಾಗಿ ಆಗಬೇಕಿತ್ತು ಎಂಬ ಮಾತಿದೆ. ಆದರೆ, ಇದು ಯಾಕೆ ಸಾಧ್ಯವಾಗಲಿಲ್ಲ ಎನ್ನುವುದು ಈಗ ಬಿಟೌನ್ ಇಂಡಸ್ಟ್ರಿಯನ್ನು ಕಾಡುತ್ತಿದೆ.

ಬಾಹುಬಲಿ ಶಕ್ತಿ ಪ್ರಭಾಸ್ ಮೇಲಿತ್ತು

ಬಾಹುಬಲಿ ಶಕ್ತಿ ಪ್ರಭಾಸ್ ಮೇಲಿತ್ತು

ಬಾಹುಬಲಿ ಸಿನಿಮಾದ ಸಕ್ಸಸ್ ಪ್ರಭಾಸ್ ಗೆ ಶಕ್ತಿ ತುಂಬಿತ್ತು. ಬಾಹುಬಲಿ ಸಿನಿಮಾವನ್ನ ಮೆಚ್ಚಿಕೊಂಡಿದ್ದ ಹಿಂದಿ ಪ್ರೇಕ್ಷಕರು, ಸಾಹೋ ಸಿನಿಮಾದಲ್ಲೂ ನಿರೀಕ್ಷೆ ಮಾಡಿದ್ದರು. ಹಾಗಾಗಿ, ಸಾಹೋ ಚಿತ್ರಕ್ಕೆ ಬಾಲಿವುಡ್ನಲ್ಲಿ ಒಳ್ಳೆಯ ಓಪನಿಂಗ್ ಪಡೆಯುವಂತೆ ಮಾಡಿತು. ಇದರ ಪರಿಣಾಮ ಸಾಹೋ ಗಳಿಕೆಯೂ ಹಿಂದಿಯಲ್ಲಿ ಉತ್ತಮವಾಗಿತ್ತು.

ಪೌರತ್ವ ಕಾಯಿದೆ ಪ್ರತಿಭಟನೆ ಬಿಸಿ

ಪೌರತ್ವ ಕಾಯಿದೆ ಪ್ರತಿಭಟನೆ ಬಿಸಿ

ಸಲ್ಮಾನ್ ಖಾನ್ ದಬಾಂಗ್ 3 ಸಿನಿಮಾ ತೆರೆಕಂಡ ವೇಳೆ ದೇಶದಲ್ಲಿ ಪೌರತ್ವ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ದೊಡ್ಡ ಮಟ್ಟದಲ್ಲಿ ಈ ಪ್ರತಿಭಟನೆ ನಡೆದ ಕಾರಣ, ದಬಾಂಗ್ ಚಿತ್ರಕ್ಕೆ ಆರಂಭಿಕ ಹಿನ್ನಡೆ ಆಯಿತು. ಅಷ್ಟೊರಳಗೆ ಸಿನಿಮಾ ಬಗ್ಗೆ ನೆಗಿಟೀವ್ ಟಾಕ್ ಹೆಚ್ಚಾಗಿದ್ದರಂತೆ ಕಲೆಕ್ಷನ್ ಮೇಲೂ ಪರಿಣಾಮ ಬೀರಿತು.

ದಾಖಲೆ ಬ್ರೇಕ್ ಆಗುತ್ತೆ!

ದಾಖಲೆ ಬ್ರೇಕ್ ಆಗುತ್ತೆ!

ಹಿಂದಿ ಅವತರಣಿಕೆಯಲ್ಲಿ ಸಾಹೋ ಸಿನಿಮಾದ ಒಟ್ಟಾರೆ ಗಳಿಕೆ 148 ಕೋಟಿ. ದಬಾಂಗ್ ಒಟ್ಟಾರೆ ಗಳಿಕೆ 147 ಕೋಟಿ. ಹಾಗಾಗಿ, ಸಾಹೋ ಸಿನಿಮಾದ ಗಳಿಕೆಯ ದಾಖಲೆ ಬ್ರೇಕ್ ಮಾಡುತ್ತೆ. ಅದಕ್ಕಾಗಿ ದಬಾಂಗ್ ತೆಗೆದುಕೊಂಡ ಕಾಲಾವಕಾಶ ಮಾತ್ರ ನಿರಾಸೆ ತಂದಿದೆ.

More from Filmibeat

English summary
Bollywood Superstar Salman Khan and Sudeep starrer Dabangg 3 movie Flopped in Box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X