ದಬಾಂಗ್-3 ಚಿತ್ರಕ್ಕೆ ಭಾರಿ ಮುಖಭಂಗ: ಸಲ್ಲು-ಸುದೀಪ್ ಜೋಡಿಗೆ ಹಿನ್ನಡೆ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿದ್ದ ದಬಾಂಗ್ 3 ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ಬಾಕ್ಸ್ ಆಫೀಸ್ ನಲ್ಲಿ ದಬಾಂಗ್ 3 ಚಿತ್ರ ಹೊಸ ದಾಖಲೆ ಬರೆಯಲಿದೆ, ಈ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಲಿದೆ ಎಂಬ ಲೆಕ್ಕಾಚಾರ ಮಾಡಲಾಗಿತ್ತು.

ಆದರೆ ಈ ಲೆಕ್ಕಾಚಾರ ಉಲ್ಟಾಪಲ್ಟ ಆಗಿದೆ. ಸಲ್ಮಾನ್ ಖಾನ್ ಮತ್ತು ಸುದೀಪ್ ಜೋಡಿಗೆ ದೊಡ್ಡ ಮಟ್ಟದ ಹಿನ್ನಡೆ ಆಗಿದೆ. ಗಲ್ಲಾಪೆಟ್ಟಿಯಲ್ಲಿ ದಬಾಂಗ್ 3 ಸಿನಿಮಾ ಮಕಾಡೆ ಮಲಗಿದೆ. ಇದು ಸಲ್ಲು ಮತ್ತು ಸುದೀಪ್ ಅಭಿಮಾನಿಗಳಲ್ಲಿ ನಿರಾಸೆಗೆ ಕಾರಣವಾಗಿದೆ.

ಅಷ್ಟಕ್ಕೂ, ದಬಾಂಗ್ 3 ಚಿತ್ರಕ್ಕೆ ಆದ ಮುಖಭಂಗ ಏನು? ಸದ್ಯ ದಬಾಂಗ್ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು? ಮುಂದೆ ಓದಿ...

100 ಕೋಟಿ ತಲುಪಲು ಹರಸಾಹಸ

100 ಕೋಟಿ ತಲುಪಲು ಹರಸಾಹಸ

ಸಹಜವಾಗಿ ಸಲ್ಮಾನ್ ಖಾನ್ ಸಿನಿಮಾಗಳು ಅಂದ್ರೆ ಮೂರು ದಿನಕ್ಕೆ ಅಥವಾ ನಾಲ್ಕು ದಿನಕ್ಕೆ ನೂರು ಕೋಟಿ ಕ್ಲಬ್ ಸೇರುತ್ತೆ ಎಂಬ ಟ್ರೆಂಡ್ ಇದೆ. ಆದರೆ ದಬಾಂಗ್ 3 ಸಿನಿಮಾ ಐದನೇ ದಿನಕ್ಕೆ ನೂರು ಕೋಟಿ ಬಾಗಿಲು ಮುಟ್ಟಿದೆ. ಮೊದಲ ಮೂರು ದಿನದಲ್ಲಿ ಒಳ್ಳೆಯ ಒಪನಿಂಗ್ ಪಡೆದುಕೊಂಡಿತ್ತಾದರೂ, ನಂತರ ದಬಾಂಗ್ ಕಲೆಕ್ಷನ್ ನಿಧಾನವಾಯಿತು.

ಮೂರನೇ ವಾರಕ್ಕೆ ಸುಸ್ತಾದ ಸಲ್ಲು ಚಿತ್ರ

ಮೂರನೇ ವಾರಕ್ಕೆ ಸುಸ್ತಾದ ಸಲ್ಲು ಚಿತ್ರ

ಮೊದಲ ವಾರ ಒಳ್ಳೆಯ ಗಳಿಕೆ ಕಂಡ ದಬಾಂಗ್ 3 ಸಿನಿಮಾ, ಎರಡನೇ ವಾರ ಮುಗಿಸುವಷ್ಟರಲ್ಲಿ ಮಕಾಡೆ ಮಲಗಿತು. ಐದು ದಿನಕ್ಕೆ ನೂರು ಕೋಟಿ ಗಳಿಸಿದ್ದರೂ 13 ದಿನ ಬಂದರೂ 130 ಕೋಟಿಯ ಅಸುಪಾಸು ಒದ್ದಾಡುತ್ತಿದೆ. ಅಲ್ಲಿಗೆ, ಬಾಕ್ಸ್ ಆಫೀಸ್ ನಲ್ಲಿ ದಬಾಂಗ್ ಸೋತಿದೆ ಎಂದು ಬಾಲಿವುಡ್ ವಿಶ್ಲೇಷಕರು ಹೇಳುತ್ತಿದ್ದಾರೆ.

ಹೊಸ ವರ್ಷಕ್ಕೆ ದಬಾಂಗ್ ಗಳಿಸಿದ್ದೆಷ್ಟು?

ಹೊಸ ವರ್ಷಕ್ಕೆ ದಬಾಂಗ್ ಗಳಿಸಿದ್ದೆಷ್ಟು?

ಹೊಸ ವರ್ಷದ ದಿನವೂ ದಬಾಂಗ್ ಚಿತ್ರಕ್ಕೆ ಅಷ್ಟಾಗಿ ಸಕ್ಸಸ್ ಸಿಕ್ಕಿಲ್ಲ. ಜನವರಿ 1 ರಂದು ಸಲ್ಲು ಚಿತ್ರ ಕೇವಲ 3.50 ಕೋಟಿ ಮಾತ್ರ ಗಳಿಕೆ ಮಾಡಿದೆ. ಸದ್ಯಕ್ಕೆ ಒಟ್ಟು 13 ದಿನಗಳಲ್ಲಿ ದಬಾಂಗ್ ಸಿನಿಮಾ 132.50 ಕೋಟಿ ಕಲೆಕ್ಷನ್ ಮಾಡಿದೆಯಂತೆ.

ನಿರೀಕ್ಷೆ ಹುಸಿ ಮಾಡಿದ ಸಲ್ಲು-ಸುದೀಪ್!

ನಿರೀಕ್ಷೆ ಹುಸಿ ಮಾಡಿದ ಸಲ್ಲು-ಸುದೀಪ್!

ಸಲ್ಮಾನ್ ಖಾನ್ ಸಿನಿಮಾ ಮತ್ತು ಸುದೀಪ್ ಇಬ್ಬರು ಒಂದೇ ಚಿತ್ರದಲ್ಲಿ ನಟಿಸಿದ್ದು, ಚಿತ್ರಜಗತ್ತಿನಲ್ಲಿ ಸ್ವಲ್ಪ ನಿರೀಕ್ಷೆ ಜಾಸ್ತಿ ಮಾಡಿತ್ತು. ವೇಗವಾಗಿ ನೂರು ಕೋಟಿ, ಇನ್ನೂರು ಕೋಟಿ, ಮೂನ್ನೂರು ಕೋಟಿ ಕ್ಲಬ್ ಕೂಡ ಸೇರಬಹುದು ಎಂಬ ಭರವಸೆ ಇತ್ತು. ಆದರೆ, 150 ಕೋಟಿ ಗಳಿಸುವುದಕ್ಕೂ ಈಗ ಅಂಬೆಗಾಲು ಇಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

More from Filmibeat

English summary
Bollywood Superstar Salman Khan and Sudeep starrer Dabangg 3 movie Flopped in Box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X