'ದಬಾಂಗ್' 15ನೇ ದಿನದ ಗಳಿಕೆ ನೋಡಿದ್ರೆ ಭಾರಿ ನಿರಾಸೆ ಆಗುತ್ತೆ!

ದಬಾಂಗ್ ಸಿನಿಮಾ ಬಿಡುಗಡೆಯಾಗಿ ಹದಿನೈದು ಕಳೆದಿದೆ. ಸಿನಿಮಾ ಗಳಿಕೆಯಲ್ಲಿ ಸೋತಿದೆ ಎಂಬುದು ಈಗಾಗಲೇ ಬಾಲಿವುಡ್ ಇಂಡಸ್ಟ್ರಿ ಘೋಷಿಸಿದೆ. ಆದರೂ ದಬಾಂಗ್ ಸಿನಿಮಾದ ಪ್ರತಿದಿನದ ಗಳಿಕೆ ಬಗ್ಗೆ ಕುತೂಹಲ ಮಾತ್ರ ಕಮ್ಮಿ ಆಗ್ತಿಲ್ಲ.

ಮೂರನೇ ಶುಕ್ರವಾರಕ್ಕೆ ದಬಾಂಗ್ 3 ಸಿನಿಮಾ ಎಷ್ಟು ಗಳಿಸಿದೆ ಎಂಬುದು ಬಹಿರಂಗವಾಗಿದೆ. 15ನೇ ದಿನದ ಗಳಿಕೆ ನೋಡಿದ್ರೆ ನಿಜಕ್ಕೂ ಭಾರಿ ನಿರಾಸೆಯಾಗುತ್ತೆ. ಕಳೆದ ವಾರ ತೆರೆಕಂಡ 'ಗುಡ್ ನ್ಯೂಜ್' ಚಿತ್ರ ಕೂಡ ದಬಾಂಗ್ ಗಳಿಕೆಯನ್ನು ಹಿಂದಿಕ್ಕಿ ಮುಂದೆ ಸಾಗಿದೆ.

ಹಾಗಿದ್ರೆ, ದಬಾಂಗ್ ಸಿನಿಮಾ ಹದಿನೈದನೇ ದಿನದ ಕಲೆಕ್ಷನ್ ಎಷ್ಟು? ಒಟ್ಟಾರೆ ಗಳಿಕೆ ಎಷ್ಟಾಗಿದೆ? ಮುಂದೆ ಓದಿ....

15ನೇ ದಿನ ದಬಾಂಗ್ ಗಳಿಸಿದ್ದು?

15ನೇ ದಿನ ದಬಾಂಗ್ ಗಳಿಸಿದ್ದು?

ಮೊದಲ ವಾರ ಭರ್ಜರಿ ಬಿಸಿನೆಸ್ ಮಾಡಿದ ದಬಾಂಗ್ 3 ಸಿನಿಮಾ ಎರಡನೇ ವಾರಕ್ಕೆ ನಿಧಾನ ಆಯಿತು. ಈಗ ಮೂರನೇ ವಾರವಂತೂ ಸಂಪೂರ್ಣವಾಗಿ ಹಿಂದೆ ಬಿದ್ದಿದೆ. ಬಾಲಿವುಡ್ ವಿಶ್ಲೇಷಕರು ತಿಳಿಸಿರುವ ಪ್ರಕಾರ, ಹದಿನೈದನೇ ದಿನ ದಬಾಂಗ್ ಸಿನಿಮಾ ಕೇವಲ 1 ಕೋಟಿ ಮಾತ್ರ ಗಳಿಸಿದೆಯಂತೆ. ಅದರಲ್ಲಿ ನೆಟ್ ಗಳಿಕೆ ಕೇವಲ 50 ಲಕ್ಷ ಎನ್ನಲಾಗಿದೆ.

ದಬಾಂಗ್ ಹಿಂದಿಕ್ಕಿದ ಗುಡ್ ನ್ಯೂಜ್

ದಬಾಂಗ್ ಹಿಂದಿಕ್ಕಿದ ಗುಡ್ ನ್ಯೂಜ್

ಹದಿನೈದು ದಿನದಲ್ಲಿ ದಬಾಂಗ್ ಸಿನಿಮಾ ಒಟ್ಟಾರೆ 148 ಕೋಟಿ ಬಾಚಿಕೊಂಡಿದೆ. ಇದರಲ್ಲಿ ಹಿಂದಿ ಅವತರಣಿಕೆಯ ಪಾಲು 134 ಕೋಟಿ ಎಂದು ಹೇಳಲಾಗಿದೆ. ಉಳಿದಿದ್ದು ತೆಲುಗು, ತಮಿಳು ಮತ್ತು ಕನ್ನಡ ಭಾಷೆಯಿಂದ ಬಂದಿರುವುದು. ದಬಾಂಗ್ ತೆರೆಕಂಡ ಒಂದು ವಾರದ ಬಳಿಕ ಬಿಡುಗಡೆಯಾಗಿದ್ದ ಗುಡ್ ನ್ಯೂಜ್ ಸಿನಿಮಾ 136 ಕೋಟಿ ಗಳಿಸಿದ್ದು, ದಬಾಂಗ್ ಚಿತ್ರದ ಗಳಿಕೆಯನ್ನು ಹಿಂದಿಕ್ಕಿದೆ.

ಟ್ಯೂಬ್ ಲೈಟ್, ರೇಸ್ 3 ಕಥೆ ಹೀಗೆ ಆಗಿತ್ತು

ಟ್ಯೂಬ್ ಲೈಟ್, ರೇಸ್ 3 ಕಥೆ ಹೀಗೆ ಆಗಿತ್ತು

ಈ ಹಿಂದೆ ಸಲ್ಮಾನ್ ಖಾನ್ ನಟಿಸಿದ್ದ ಟ್ಯೂಬ್ ಲೈಟ್ ಸಿನಿಮಾಗೂ ಇದೇ ರೀತಿ ಆಗಿತ್ತು. ನೂರು ಕೋಟಿ ಗಳಿಸುವುದಕ್ಕೂ ಈ ಚಿತ್ರ ಪರದಾಡಿತ್ತು. ಚಿತ್ರಕ್ಕೂ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಸಿನಿಮಾ ಸೋತಿತ್ತು. ಅದಾದ ಬಳಿಕ ಬಂದ ರೇಸ್ 3 ಸಿನಿಮಾನೂ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಟ್ಯೂಬ್ ಲೈಟ್ ಹಾದಿಯಲ್ಲೇ ಅದು ಸಾಗಿತ್ತು. ಈಗ ದಬಾಂಗ್ 3 ಕೂಡ ಗಳಿಕೆಯಲ್ಲಿ ಹಿಂದೆ ಬಿದ್ದಿದೆ.

ಬೇರೆ ಭಾಷೆಯಲ್ಲೂ ಸದ್ದು ಮಾಡಿಲ್ಲ

ಬೇರೆ ಭಾಷೆಯಲ್ಲೂ ಸದ್ದು ಮಾಡಿಲ್ಲ

ಇದೇ ಮೊದಲ ಸಲ ಸಲ್ಮಾನ್ ಖಾನ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿತ್ತು. ಕನ್ನಡದಲ್ಲಿ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿತ್ತು. ತೆಲುಗು ಮತ್ತು ತಮಿಳಿನಲ್ಲಿ ಸಾಧಾರಣ ಯಶಸ್ಸು ಸಿಕ್ಕಿತ್ತು. ಆದರೆ, ಗಳಿಕೆಯಲ್ಲಿ ದೊಡ್ಡ ಮಟ್ಟದ ಮೋಡಿ ಮಾಡಲಿಲ್ಲ. ಸದ್ಯದ ವರದಿ ಪ್ರಕಾರ, ಡಬ್ಬಿಂಗ್ ವರ್ಷನ್ ನಿಂದ ಇದುವರೆಗೂ 7 ಕೋಟಿ ಗಳಿಕೆ ಕಂಡಿದೆಯಂತೆ.

More from Filmibeat

English summary
Bollywood star salman khan and kannada actor sudeep starrer Dabangg 3 movie 15th day collection report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X