For Quick Alerts
  ALLOW NOTIFICATIONS  
  For Daily Alerts

  4ನೇ ದಿನ ದಬಾಂಗ್ ಚಿತ್ರಕ್ಕೆ ಭಾರಿ ಹಿನ್ನಡೆ: ದಿಢೀರ್ ಕುಸಿದ ಕಲೆಕ್ಷನ್

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡದ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ದಬಾಂಗ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿಯಲ್ಲಿ ದಬಾಂಗ್ ಗೆ ನಿರೀಕ್ಷೆಯ ಯಶಸ್ಸು ಸಿಗಲಿಲ್ಲ. ಆದರೆ, ಕನ್ನಡದಲ್ಲಿ ದಬಾಂಗ್ ಸಿನಿಮಾಗೆ ಗೆಲುವು ಸಿಕ್ಕಿದೆ ಎನ್ನಬಹುದು.

  'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

  ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದರೂ ಕಲೆಕ್ಷನ್ ನಲ್ಲಿ ದಬಾಂಗ್ ಚಿತ್ರ ಜಾದೂ ಮಾಡಿತ್ತು. ಮೊದಲ ಮೂರು ದಿನದಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಬಹುಶಃ ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ಮೊದಲ ವಾರಂತ್ಯದಲ್ಲೇ ನೂರು ಕೋಟಿ ಗಳಿಸಬೇಕಿತ್ತು. ಆದ್ರೀಗ, ನಾಲ್ಕು ದಿನ ಕಳೆದರೂ ನೂರು ಕೋಟಿ ಮುಟ್ಟಲಿಲ್ಲ. ಅದರಲ್ಲೂ ನಾಲ್ಕನೇ ದಿನ ದಬಾಂಗ್ ಗೆ ಭಾರಿ ಹಿನ್ನಡೆಯಾಗಿದೆ. ಸೋಮವಾರದ ಕಲೆಕ್ಷನ್ ಎಷ್ಟು? ಮುಂದೆ ಓದಿ....

  ಸೋಮವಾರ ಭಾರಿ ಕುಸಿತ

  ಸೋಮವಾರ ಭಾರಿ ಕುಸಿತ

  ಮೊದಲ ಮೂರು ದಿನದಲ್ಲಿ 81 ಕೋಟಿ ಗಳಿಸಿದ್ದ ದಬಾಂಗ್ 3 ಸಿನಿಮಾ ನಾಲ್ಕನೇ ದಿನ ಭಾರಿ ಕುಸಿತ ಕಂಡಿದೆ. ಶೇಕಡಾ 60 ರಿಂದ 70 ರಷ್ಟು ಕಲೆಕ್ಷನ್ ಕಮ್ಮಿ ಆಗಿದೆ. ಇದು ಚಿತ್ರತಂಡಕ್ಕೆ ಭಾರಿ ನಿರಾಸೆ ಮೂಡಿಸಿದೆ. ಇದು ದಬಾಂಗ್ ಚಿತ್ರದ ಕಲೆಕ್ಷನ್ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ.

  ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದಬಾಂಗ್-3: ಮೂರು ದಿನದ ಕಲೆಕ್ಷನ್ ಇಲ್ಲಿದೆಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದಬಾಂಗ್-3: ಮೂರು ದಿನದ ಕಲೆಕ್ಷನ್ ಇಲ್ಲಿದೆ

  ನಾಲ್ಕನೇ ದಿನದ ಗಳಿಕೆ ಎಷ್ಟು?

  ನಾಲ್ಕನೇ ದಿನದ ಗಳಿಕೆ ಎಷ್ಟು?

  ಬಾಲಿವುಡ್ ವರದಿಗಳ ಪ್ರಕಾರ ದಬಾಂಗ್ 3 ಸಿನಿಮಾ ನಾಲ್ಕನೇ ದಿನ (ಸೋಮವಾರ) ಕೇವಲ 10 ರಿಂದ 11 ಕೋಟಿ ಗಳಿಸಿರಬಹುದು ಎಂದು ಅಂದಾಜಿಸಲಾಗಿದೆ. ಈಗ ನಾಲ್ಕು ದಿನಕ್ಕೆ 93 ಕೋಟಿ ಆಗಿದೆ ಎಂಬ ಲೆಕ್ಕಾಚಾರವಿದೆ.

  ದಬಾಂಗ್ ಚಿತ್ರಕ್ಕೆ ಇದು ಹಿನ್ನಡೆ

  ದಬಾಂಗ್ ಚಿತ್ರಕ್ಕೆ ಇದು ಹಿನ್ನಡೆ

  ಸಾಮಾನ್ಯವಾಗಿ ಸಲ್ಮಾನ್ ಖಾನ್ ಸಿನಿಮಾಗಳು ಮೂರು ಅಥವಾ ನಾಲ್ಕು ದಿನದಲ್ಲಿ ನೂರು ಕೋಟಿ ಕ್ಲಬ್ ಸೇರುತ್ತೆ. ಆದರೆ, ಭಾರಿ ನಿರೀಕ್ಷೆಯ ದಬಾಂಗ್ ಸಿನಿಮಾ ನಾಲ್ಕು ದಿನವಾದರೂ ನೂರು ಕೋಟಿ ಪಟ್ಟಿ ಸೇರಿಲ್ಲ. ಇದು ಸಲ್ಲು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಪೌರತ್ವ ಕಾಯಿದೆಯ ವಿರೋಧಿ ಪ್ರತಿಭಟನೆ ಇದಕ್ಕೆ ನೇರ ಕಾರಣ ಎಂಬ ಅಭಿಪ್ರಾಯ ಚಿತ್ರಜಗತ್ತಿನಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಈ ಪ್ರತಿಭಟನೆ ಇಲ್ಲವಾಗಿದ್ದರೆ ದಬಾಂಗ್ ಕಲೆಕ್ಷನ್ ಇನ್ನು ಹೆಚ್ಚಾಗುತ್ತಿತ್ತಂತೆ.

  ದಬಾಂಗ್ 2 ಹಿಂದಿಕ್ಕುತ್ತಾ?

  ದಬಾಂಗ್ 2 ಹಿಂದಿಕ್ಕುತ್ತಾ?

  ದಬಾಂಗ್ ಸರಣಿಯ ದಬಾಂಗ್ 2 ಸಿನಿಮಾ ಒಟ್ಟಾರೆ 252 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ದಬಾಂಗ್ 3 ಚಿತ್ರದ ಗಳಿಕೆಯಲ್ಲಿ ದಿನದಿಂದ ಕುಸಿತ ಕಾಣುತ್ತಿರುವುದರಿಂದ ಈ ಸಿನಿಮಾ 250 ಕೋಟಿ ಗಡಿದಾಟುತ್ತಾ ಎಂಬ ಅನುಮಾನ ಮೂಡುತ್ತಿದೆ. ಇಲ್ಲಿಯವರೆಗೂ ನಾಲ್ಕು ದಿನದ ಗಳಿಕೆ ನೋಡುವುದಾದರೆ...

  ಶುಕ್ರವಾರ 24.50 ಕೋಟಿ, ಶನಿವಾರ 24.75 ಕೋಟಿ, ಭಾನುವಾರ 31.90 ಕೋಟಿ, ಸೋಮವಾರ 11 ಕೋಟಿ...

  English summary
  Bollywood Superstar Salman Khan and Sudeep starrer Dabangg 3 movie doing very well in Box office. but, monday has not good for salman movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X