twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ 'ದಬಾಂಗ್-3: ಮೂರು ದಿನದ ಕಲೆಕ್ಷನ್ ಇಲ್ಲಿದೆ

    |

    ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಬಾಂಗ್-3' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.

    ಬಾಕ್ಸ್ ಆಫೀಸ್ ನಲ್ಲೂ ಚಿಂದಿ ಉಡಾಯಿಸುತ್ತಿರುವ ದಬಾಂಗ್ ಮೊದಲ ಮೂರು ದಿನದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಪೌರತ್ವ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ನಡುವೆಯೂ ದಬಾಂಗ್ ಸಿನಿಮಾ ಧೂಳೆಬ್ಬಿಸಿದೆ.

    'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?'ದಬಾಂಗ್-3' ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

    ಮೊದಲ ದಿನ 24 ಕೋಟಿ ಗಳಿಸಿದ್ದ ಸಲ್ಲು ಸಿನಿಮಾ, ವಾರಾಂತ್ಯದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಹಾಕಲಾಗಿತ್ತು. ಆ ನಿರೀಕ್ಷೆ ನಿರಾಸೆಯಾಗಿದೆ. ಹಾಗಿದ್ರೆ, ದಬಾಂಗ್ ಮೂರು ದಿನದ ಗಳಿಕೆ ಎಷ್ಟು? ಮುಂದೆ ಓದಿ.....

    ಮೂರನೇ ದಿನದ ಗಳಿಕೆ ಎಷ್ಟು?

    ಮೂರನೇ ದಿನದ ಗಳಿಕೆ ಎಷ್ಟು?

    ಮೊದಲ ಎರಡು ದಿನಕ್ಕೆ ಹೋಲಿಸಿಕೊಂಡರೆ ಮೂರನೇ ದಿನ ದಬಾಂಗ್-3 ಸಿನಿಮಾ ಹೆಚ್ಚು ಗಳಿಕೆ ಕಂಡಿದೆ. ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿರುವ ಪ್ರಕಾರ, ಭಾನುವಾರ ದಬಾಂಗ್ ಸಿನಿಮಾ 31.90 ಕೋಟಿ ಗಳಿಕೆ ಕಂಡಿದೆ.

    Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ'

    ಒಟ್ಟು ಕಲೆಕ್ಷನ್ ಎಷ್ಟು?

    ಒಟ್ಟು ಕಲೆಕ್ಷನ್ ಎಷ್ಟು?

    ಮೊದಲ ದಿನ 24.50 ಕೋಟಿ, ಎರಡನೇ ದಿನ 24.75 ಕೋಟಿ ಮತ್ತು ಮೂರನೇ ದಿನ 31.90 ಕೋಟಿ ಗಳಿಕೆ ಕಂಡಿರುವ ದಬಾಂಗ್ ಸಿನಿಮಾ ಒಟ್ಟಾರೆ 81.15 ಕೋಟಿ ಕಲೆಕ್ಷನ್ ಮಾಡಿದೆ.

    ನೂರು ಕೋಟಿ ಮಿಸ್ ಆಯ್ತು

    ನೂರು ಕೋಟಿ ಮಿಸ್ ಆಯ್ತು

    ಸಲ್ಮಾನ್ ಸಿನಿಮಾಗಳು ಅಂದ್ರೆ ಮೊದಲ ಮೂರು ದಿನದಲ್ಲೇ ನೂರು ಕೋಟಿ ಗಳಿಸುತ್ತೆ ಎಂಬ ಟಾಕ್ ಇದೆ. ಈ ಸಲ ಮೊದಲ ವಾರಾಂತ್ಯದಲ್ಲಿ ಈ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

    ಕನ್ನಡದಲ್ಲಿ ದಬಾಂಗ್-3 ನೋಡಿದವರಿಗೆ ಒಂದು ವಿಷ್ಯದಲ್ಲಿ ಭಾರಿ ನಿರಾಸೆ!ಕನ್ನಡದಲ್ಲಿ ದಬಾಂಗ್-3 ನೋಡಿದವರಿಗೆ ಒಂದು ವಿಷ್ಯದಲ್ಲಿ ಭಾರಿ ನಿರಾಸೆ!

    ಭಾರತ್ ಸಿನಿಮಾ ಎಷ್ಟು ಗಳಿಸಿತ್ತು?

    ಭಾರತ್ ಸಿನಿಮಾ ಎಷ್ಟು ಗಳಿಸಿತ್ತು?

    ದಬಾಂಗ್ 3 ಸಿನಿಮಾ ಬಿಡುಗಡೆಯಾಗುವುದಕ್ಕೂ ಮುಂಚೆ ಭಾರತ್ ಸಿನಿಮಾ ರಿಲೀಸ್ ಆಗಿತ್ತು. ಭಾರತ್ ಚಿತ್ರ ಮೊದಲ ದಿನ 42.30 ಕೋಟಿ ಬಾಚಿಕೊಂಡಿತ್ತು. ಬುಧವಾರ ತೆರೆಕಂಡಿದ್ದ ಭಾರತ್ ಮೊದಲ ವಾರಾಂತ್ಯಕ್ಕೆ (ಐದು ದಿನ) 150 ಕೋಟಿ ಕಲೆಕ್ಷನ್ ಮಾಡಿತ್ತು.

    English summary
    Bollywood Superstar Salman Khan and Sudeep starrer Dabangg 3 movie doing very well in Box office. first three days movie collect almost 82 crores.
    Monday, December 23, 2019, 16:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X