ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡದ ಅಭಿನಯ ಚಕ್ರವರ್ತಿ ಅಭಿನಯದ ಬಹುನಿರೀಕ್ಷೆಯ ದಬಾಂಗ್ 3 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

ನಿರೀಕ್ಷೆಯಂತೆ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು, ಚುಲ್ ಬುಲ್ ಪಾಂಡೆಯಾಗಿ ಸಲ್ಲು ಭಾಯ್ ಅಬ್ಬರಿಸಿದ್ದಾರೆ. ಈ ಹಿಂದಿನ ಆವೃತ್ತಿಗಿಂತ ಹೆಚ್ಚು ಮಜಾ ಕೊಡ್ತಾರೆ ಎಂಬ ಭರವಸೆ ಹುಟ್ಟಿಕೊಂಡಿದೆ.

ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಕಾಣಿಸಿಕೊಂಡಿದ್ದ ಸುದೀಪ್ ಹೇಗೆ ನಟಿಸಿರಬಹುದು, ಅವರ ಪಾತ್ರ ಹೇಗೆ ಬಂದಿರಬಹುದು ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿತ್ತು. ಈಗ ಟ್ರೈಲರ್ ನೋಡಿದ್ಮೇಲೆ ಕಿಚ್ಚನ ಫ್ಯಾನ್ಸ್ ದೀಪಾವಳಿ ಹಬ್ಬವನ್ನ ಜೋರಾಗಿ ಆಚರಿಸುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Dabangg 3 Trailer Released

ಸಲ್ಲು ಎದುರು ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಹೀರೋ ಅಷ್ಟೇ ಪ್ರಾಮುಖ್ಯತೆ ಸುದೀಪ್ ಪಾತ್ರಕ್ಕೂ ಇದೆ. ಚುಲ್ ಬುಲ್ ಪಾಂಡೆ ಮತ್ತು ಕಿಚ್ಚ ಜುಗಲ್ ಬಂದಿ ನೋಡಲು ಸಖತ್ ಇರುತ್ತೆ ಎನ್ನುವುದಕ್ಕೆ ಈ ಟ್ರೈಲರ್ ಸಾಕ್ಷಿ.

ಇನ್ನುಳಿದಂತೆ ಡಿಸೆಂಬರ್ 20 ರಂದು ದಬಾಂಗ್ 3 ಸಿನಿಮಾ ತೆರೆಗೆ ಬರ್ತಿದ್ದು, ಹಿಂದಿ ಜೊತೆಗೆ ಕನ್ನಡದಲ್ಲೂ ಈ ಸಿನಿಮಾ ಬಿಡುಗಡೆಯಾಗ್ತಿದೆ. ಪ್ರಭುದೇವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Salman khan and Sudeep starrer Dabangg 3 trailer has released. the movie will release on december 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X