ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ವಿರುದ್ಧ ಸಿಡಿದೆದ್ದ 'ದಬಾಂಗ್' ನಿರ್ದೇಶಕ ಅಭಿನವ್
ಬಾಲಿವುಡ್ ಎನ್ನುವ ದೊಡ್ಡ ಸಾಗರದಲ್ಲಿ ಈಜಿ ದಡಸೇರುವುದು ಅಷ್ಟು ಸುಲಭದ ಮಾತಲ್ಲ. ಪ್ರತಿಭೆ ಇದ್ದರು ಅಲ್ಲಿ ಇದ್ದು ಜಯಿಸುವುದು ಕಷ್ಟ. ಗಾಡ್ ಫಾದರ್ ಇಲ್ಲದೆ ಎಲ್ಲವನ್ನು ಮೆಟ್ಟಿನಿಂತು ಮೇಲೆ ಬರುವುದು ಕಷ್ಟ. ಅದರಲ್ಲೂ ಒಳ ರಾಜಕೀಯ ಎಂಥಾ ಪ್ರತಿಭಾವಂತರನ್ನೂ ಸಹ ಒಪ್ಪಿಕೊಳ್ಳುವುದಿಲ್ಲ. ಸಿನಿಮಾ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾರಂಗದಲ್ಲಿ ಬೆಳೆಯುವುದು ಎಷ್ಟು ಕಷ್ಟ ಎನ್ನುವ ಸತ್ಯ ಸುಶಾಂತ್ ಸಿಂಗ್ ಗೆ ಅನುಭವವಾಗಿದೆ.
Recommended Video
ಕಷ್ಟ, ಅವಮಾನ, ತಿರಸ್ಕಾರಗಳ ನಡುವೆಯೂ ಸುಶಾಂತ್ ಬಾಲಿವುಡ್ ನಲ್ಲಿ ಸಕ್ಸಸ್ ಫುಲ್ ನಟನಾಗಿ ಹೊರಹೊಮ್ಮಿದ್ದರು. ಆದರೆ ಬಾಲಿವುಡ್ ತನ್ನನ್ನು ಒಪ್ಪಿಕೊಂಡಿಲ್ಲ ಎನ್ನುವ ಬೇಸರ, ನೋವು ಅವರಲ್ಲಿತ್ತು. ಆ ನೋವಿನ ಜೊತೆಯೆ ಸುಶಾಂತ್ ಇಹಲೋಕ ತ್ಯಜಿಸಿದ್ದಾರೆ. ಸುಶಾಂತ್ ಸಾವಿನ ಬಳಿಕ ಪ್ರತಿಕ್ರಿಯಿಸಿದ ಅನೇಕ ಕಲಾವಿದರು ಮತ್ತು ನಿರ್ಮಾಪಕರ ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸಾವಿನ ನಂತರ ಮೊಸಳೆ ಕಣ್ಣೀರೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಮುಂದೆ ಓದಿ..

ಸಲ್ಮಾನ್ ಖಾನ್ ಕುಟುಂಬ ಮಾನಸಿಕ ನೆಮ್ಮದಿ ಹಾಳು ಮಾಡಿದೆ
ಇದೀಗ ಬಾಲಿವುಡ್ ನ ನಿರ್ದೇಶಕ ಅಭಿನವ್ ಸಿಂಗ್ ಕಶ್ಯಪ್, ಸಲ್ಮಾನ್ ಖಾನ್ ಮತ್ತು ಕುಟುಂಬದ ವಿರುದ್ಧ ಸಿಡಿದೆದ್ದಿದ್ದಾರೆ. 2010ರಲ್ಲಿ ರಿಲೀಸ್ ಆದ ದಬಾಂಗ್ ಸಿನಿಮಾದ ನಂತರ ತನ್ನ ವೃತ್ತಿ ಜೀವನವನ್ನೆ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಲ್ಮಾನ್ ಕುಟುಂಬ ತನ್ನ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ದಬಾಂಗ್-2 ಸಿನಿಮಾದಿಂದ ಹೊರಬಂದ ಸತ್ಯ ಬಹಿರಂಗ
"ಹತ್ತು ಹರ್ಷಗಳ ಹಿಂದೆ ನಾನು ದಬಾಂಗ್ 2 ತಯಾರಿಕೆಯಿಂದ ಹೊರಬರಲು ಕಾರಣವೆಂದರೆ ಸೊಹೈಲ್ ಖಾನ್ ಮತ್ತು ಕುಟುಂಬದೊಂದಿಗೆ ಅರ್ಬಾಜ್ ಖಾನ್ ನನ್ನನ್ನು ಬೆದರಿಸುವ ಮೂಲಕ ನನ್ನ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಿದ್ದರು. ಹಾಗಾಗಿ ಸಿನಿಮಾದಿಂದ ಹೊರಬಂದೆ. ಅರ್ಬಾಜ್ ಖಾನ್ ನನ್ನ ಎರಡನೇ ಪ್ರೊಜೆಕ್ಟ್ ಅನ್ನು ಹಾಳುಗೆಡವಿದ್ದಾರೆ. ಶ್ರೀ ರಾಜ್ ಮೆಹ್ತಾ ಅವರನ್ನು ವೈಯಕ್ತಿಕವಾಗಿ ಕರೆದು ಅವರ ನನ್ನೊಂದಿಗೆ ಚಿತ್ರ ಮಾಡಿದರೆ ಭೀಕರ ಪರಿಣಾಮಗಳನ್ನು ಎದುರಿಸುವುದಾಗಿ ಬೆದರಿಕೆ ಹಾಕಿದ್ದರು. ನಾನು ಸಹಿ ಹಾಕಿದ ಹಣವನ್ನು ಶ್ರೀ ಅಷ್ಟವಿನಾಯಕ್ ಚಿತ್ರಗಳಿಗೆ ಹಿಂದಿರುಗಿಸಬೇಕಾಗಿತ್ತು" ಎಂದು ಬರೆದುಕೊಂಡಿದ್ದಾರೆ.

ಎಲ್ಲಾ ಯೋಜನೆಗಳನ್ನು ಹಾಳುಮಾಡಿದ್ದಾರೆ
"ನನ್ನ ಎಲ್ಲಾ ಯೋಜನೆಗಳು ಮತ್ತು ಸೃಜನಶೀಲ ಪ್ರಯತ್ನಗಳನ್ನು ಹಾಳುಮಾಡಲಾಗಿದೆ. ಮತ್ತು ನನ್ನ ಕುಟುಂಬದ ಮಹಿಳಾ ಸದಸ್ಯರಿಗೆ ನೀಡಲಾದ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು ಪದೇ ಪದೇ ಇದೆ. ಇದು ನನ್ನ ಮಾನಸಿಕ ನೆಮ್ಮದಿ ಮತ್ತು ಕುಟುಂಬದ ಆರೋಗ್ಯವನ್ನು ನಾಶಪಡಿಸಿದೆ. ಇದು ನನ್ನ ವಿಚ್ಛೇದನ ಮತ್ತು ಕುಟುಂಬ ಒಡೆಯಲು ಕಾರಣವಾಗಿದೆ" ಎಂದು ಹೇಳಿದ್ದಾರೆ.

ಯಾವತ್ತು ಸೋಲೊಪ್ಪಿಕೊಳ್ಳುವುದಿಲ್ಲ
"ನಾನು ಯಾವತ್ತು ಸೋಲುವುದಿಲ್ಲ. ನನ್ನ ಅಂತ್ಯವನ್ನು ನೋಡುವ ತನಕ ಹೋರಾಡುತ್ತೇನೆ. ಸಾಕಷ್ಟು ಸಹನೆ, ಜಗಳವಾಡುವ ಸಮಯ ಇದು" ಎಂದು ಹೇಳಿದ್ದಾರೆ. ಇದೆ ಸಮಯದಲ್ಲಿ ಸರ್ಕಾರಕ್ಕೆ ಸುಶಾಂತ್ ಸಿಂಗ್ ವಿವರವಾದ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.


Click it and Unblock the Notifications











