"ಸೂರ್ಯ ಜೊತೆ ಮದುವೆಯಾಗಿ ಲಿಂಗಭೇದ ಎದುರಿಸುವಂತಾಯಿತು"; ನಟಿ ಜ್ಯೋತಿಕಾ

ತಮಿಳು ನಟಿ ಜ್ಯೋತಿಕಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದ ಬಳಿಕ ಕೊಂಚ ಸಿನಿಮಾಗಳಿಂದ ಬಿಡುವು ಪಡೆದಿದ್ದರು. ಮಕ್ಕಳ ಲಾಲನೆ ಪಾಲನೆಗೆ ಹೆಚ್ಚಿನ ಸಮಯ ವ್ಯಯಿಸಿದ್ದರು. ಸದ್ಯ ಮುಂಬೈಗೆ ವಾಸ್ತವ್ಯ ಬದಲಿಸಿರುವ ಜ್ಯೋತಿಕಾ ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ತಮ್ಮ ಪೋಷಕರು ಜೊತೆ ಇರಲು, ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕೆ ಚೆನ್ನೈನಿಂದ ಸೂರ್ಯ-ಜ್ಯೋತಿಕಾ ದಂಪತಿ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಕಳೆದ ವರ್ಷ 'ಶೈತಾನ್', 'ಶ್ರೀಕಾಂತ್' ಎಂಬ ಎರಡು ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದರು. ಸದ್ಯ ಆಕೆ ನಟಿಸಿರುವ 'ಡಬ್ಬಾ ಕಾರ್ಟೆಲ್' ವೆಬ್ ಸೀರಿಸ್‌ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರಚಾರದ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ.

Dabba Cartel Actress Jyothika spoke about experiencing sexism due to her marriage to Suriya

ಇತ್ತೀಚೆಗೆ ನ್ಯೂಸ್18 ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಕಾ ತಮ್ಮ ವೈಯಕ್ತಿಯ ವಿಚಾರಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಖ್ಯಾತನಟ ಸೂರ್ಯ ಅವರನ್ನು ಮದುವೆ ಆಗಿದ್ದಕ್ಕೂ ಲಿಂಗಭೇದ ಎದುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಇಷ್ಟು ವರ್ಷ ಕೆಲಸ ಮಾಡಿದರೂ ಲಿಂಗ ತಾರತಮ್ಯ ಇನ್ನು ಹೋಗಿಲ್ಲ. ಸೂರ್ಯ ಅವರನ್ನು ಮದುವೆ ಆಗಿದ್ದಕ್ಕೆ ಅದು ಮತ್ತಷ್ಟು ಹೆಚ್ಚಾಯಿತು ಎನ್ನುವ ಅರ್ಥದಲ್ಲಿ ಆಕೆ ಮಾತನಾಡಿದ್ದಾರೆ.

ಪುರುಷ ಪ್ರಧಾನ ಸಮಾಜದಲ್ಲಿ ಲಿಂಗ ತಾರತಮ್ಯ ಮನೆಯಿಂದಲೇ ಆರಂಭವಾಗಿಬಿಡುತ್ತದೆ. ಇನ್ನು ಚಿತ್ರರಂಗದಲ್ಲಿ ಕೂಡ ಪುರುಷ ಪ್ರಾಧಾನ್ಯತೆ ಕಂಡುಬರುತ್ತದೆ. ಈ ಬಗ್ಗೆ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದ್ದಾರೆ. ಜ್ಯೋತಿಕಾ ಮಾತನಾಡಿ "ಇದು ನನಗೆ ದಿನನಿತ್ಯದ ವಿಷಯ ಎನ್ನುವಂತಾಗಿದೆ. ನಾನು ಒಬ್ಬ ಸ್ಟಾರ್ ನಟನನ್ನು ಮದುವೆಯಾಗಿದ್ದೇನೆ. ಇದನ್ನು ಈಗಲೂ ಎದುರಿಸುವಂತಾಗಿದೆ. ಸಂದರ್ಶನಗಳಲ್ಲಿ ಕೂಡ ಇದು ನಡೆಯುತ್ತಿರುತ್ತದೆ" ಎಂದಿದ್ದಾರೆ.

ಮಾತು ಮುಂದುವರೆಸಿರುವ ನಟಿ ಜ್ಯೋತಿಕಾ "ಸೂರ್ಯನನ್ನು ಮದುವೆಯಾಗಲು ನಾನು ಅದೃಷ್ಟಶಾಲಿ ಎಂದು ಹೇಳಿದರು, ಜನರು ಅವನು ನಿಜವಾಗಿಯೂ ಒಳ್ಳೆಯ ವ್ಯಕ್ತಿ ಎನ್ನುತ್ತಾರೆ. ಈಕೆಯನ್ನು ಮದುವೆಯಾಗಲೂ ನಾನು ಅದೃಷ್ಟವಂತ ಎಂದು ಸೂರ್ಯ ಹೇಳಿದರೆ ಆತ ಬಹಳ ಒಳ್ಳೆಯವನು ಹೆಂಡತಿ ಬಗ್ಗೆ ಒಳ್ಳೆ ಭಾವನೆ ಇದೆ ಎನ್ನುವಂತಾಗುತ್ತದೆ. ಇದರಲ್ಲಿ ನನ್ನ ಪ್ರಸ್ತಾಪ ಇರುವುದಿಲ್ಲ. ಹಾಗಿದ್ದರೆ ನನ್ನ ಐಡೆಂಟಿಟಿ ಎಲ್ಲಿ?" ಎಂದು ಪ್ರಶ್ನಿಸಿದ್ದಾರೆ.

Dabba Cartel Actress Jyothika spoke about experiencing sexism due to her marriage to Suriya

"ಭೌತಿಕ ಸಂಗತಿಗಳ ವಿಷಯದಲ್ಲೂ ನೀವು ಸಾಂದರ್ಭಿಕ ಲಿಂಗಭೇದ ಅನುಭವಿಸುತ್ತೀರಿ. ನಾನು ಕಾರು ಖರೀದಿಸಬಹುದು, ಆದರೆ ಬೇರೆ ಯಾರಾದರೂ ಗುಂಡಿಯನ್ನು ಒತ್ತಿ ಅದರ ಫೀಚರ್ಸ್ ಪರಿಶೀಲಿಸಬೇಕಾಗುತ್ತದೆ. ಇದು ಈಗ ದೈನಂದಿನ ಜೀವನದ ಒಂದು ಭಾಗವಾಗಿದೆ. ಇಂತಹ ಸಾಕಷ್ಟು ಸಂಗತಿಗಳನ್ನು ನಾನು ಪಟ್ಟಿ ಮಾಡಬಹುದು" ಎಂದು ಜ್ಯೋತಿಕಾ ತಿಳಿಸಿದ್ದಾರೆ.

ಕೆಲವೊಮ್ಮೆ ಇದು ಐಡೆಂಟಿಟಿ ಸಮಸ್ಯೆ ಹಂತಕ್ಕೆ ಕೊಂಡೊಯ್ಯುತ್ತದೆ. ಒಬ್ಬ ಮಹಿಳೆ ತನ್ನ ಐಡೆಂಟಿಟಿ ಹುಡುಕುವುದು ಒಬ್ಬ ವ್ಯಕ್ತಿಯನ್ನು ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ವಂತವಾಗಿ ಆಯ್ಕೆಗಳನ್ನು ಮಾಡಲು ಪ್ರೇರೇಪಿಸುವಂತಾಗುತ್ತದೆ. ನಾನು ಇದೇ ರೀತಿ ನನ್ನ ವೃತ್ತಿ ಮಾರ್ಗವನ್ನು ಆರಿಸಿಕೊಂಡೆ" ಎಂದು ಜ್ಯೋತಿಕಾ ವಿವರಿಸಿದ್ದಾರೆ. ತಾನು ಒಬ್ಬ ಸೂಪರ್ ಸ್ಟಾರ್ ಆಗಿದ್ದರೂ ಸೂರ್ಯ ಪತ್ನಿ ಎಂದೇ ತಮ್ಮನ್ನು ನೋಡುವದರ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ಸೂರ್ಯ ಹಾಗೂ ಜ್ಯೋತಿಕಾ ಪ್ರೀತಿಸಿ ಮದುವೆ ಆದವರು. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುವಾಗ ಶುರುವಾದ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. 19 ವರ್ಷಗಳ ಹಿಂದೆ ಇಬ್ಬರೂ ಮದುವೆ ಆದರು. ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಹಿತೇಶ್ ಭಾಟಿಯಾ ನಿರ್ದೇಶನದ 'ಡಬ್ಬಾ ಕಾರ್ಟೆಲ್' ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್ ಫೆಬ್ರವರಿ 28ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

More from Filmibeat

Read more about: suriya jyothika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X