ಮದುವೆ ನಂತರ ಬಂತು ಕಿಯಾರಾ ಬೆತ್ತಲೆ ಫೋಟೊ.. ಇದ್ದಕ್ಕಿದ್ದಂತೆ ಫುಲ್ ವೈರಲ್ ಆಗಿದ್ದೇಕೆ?
ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಬೋಲ್ಡ್‌ನೆಸ್ ಬಗ್ಗೆ ಬಿಡಿಸಿ ಹೇಳೋದು ಬೇಕಾಗಿಲ್ಲ. 'ಲಸ್ಟ್ ಸ್ಟೋರಿಸ್'ನಲ್ಲಿ ಆಕೆ ನಟಿಸಿ ಎಲ್ಲರ ಹುಬ್ಬೇರಿಸಿದ್ದು ಗೊತ್ತೇಯಿದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಚೆಲುವೆ ಇತ್ತೀಚಿಗೆ ನಟ ಸಿದ್ದಾರ್ಥ್ ಮಲ್ಹೋತ್ರಾನ ಪ್ರೀತಿ ಮದುವೆ ಆಗಿದ್ದರು. ಬಹಳ ಅದ್ಧೂರಿಯಾಗಿ ಇಬ್ಬರ ಮದುವೆ ನಡೆದಿತ್ತು. ತೆಲುಗು ಚಿತ್ರಗಳಲ್ಲೂ ಈಕೆ ನಟಿಸಿದ್ದಾರೆ.
ಸಿನಿಮಾಗಳನ್ನು ಬಿಟ್ಟರೆ ಸೋಶಿಯಲ್ ಮೀಡಿಯಾದಲ್ಲಿ ಕಿಯಾರಾ ಸಖತ್ ಆಕ್ಟೀವ್ ಆಗಿ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 29 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಈಕೆ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಸದಾ ಸುದ್ದಿಯಲ್ಲಿ ಇರ್ತಾರೆ. ಸದ್ಯ ತೆಲುಗಿನ 'ಗೇಮ್ ಚೇಂಜರ್' ಹಾಗೂ 'ಸತ್ಯಪ್ರೇಮ್ ಕಥಾ' ಸಿನಿಮಾಗಳಲ್ಲಿ ಕಿಯಾರಾ ನಟಿಸ್ತಿದ್ದಾರೆ. ಮದುವೆ ನಂತರ ಇತ್ತೀಚೆಗೆ ಸಿದ್ದಾರ್ಥ್ ಕಿಯಾರಾ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಿ ಬಂದಿದ್ದರು. ಮತ್ತೆ ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು.

ಸದ್ಯ ಕಿಯಾರಾ ಅಡ್ವಾಣಿಯ ಹಳೇ ಫೋಟೊಶೂಟ್ ಫೋಟೊವೊಂದು ಮತ್ತೆ ವೈರಲ್ ಆಗ್ತಿದೆ. ಈ ಹಿಂದೆ ಸೆಲೆಬ್ರೆಟಿ ಫೋಟೊಗ್ರಾಫರ್ ಡಬ್ಬೂ ರತ್ನಾನಿ ಈ ಫೋಟೊಶೂಟ್ ಮಾಡಿದ್ದರು. ಕಿಯಾರಾ ಬೆತ್ತಲಾಗಿ ಬರೀ ಎಲೆಯಿಂದ ಎದೆ ಮುಚ್ಚಿಕೊಂಡಿದ್ದ ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಈ ಫೋಟೊ ಮತ್ತೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಈ ಫೋಟೊವನ್ನು ಫೋಟೊಗ್ರಾಫರ್ ಡಬ್ಬೂ ರತ್ನಾನಿ ಮತ್ತೆ ಪೋಸ್ಟ್ ಮಾಡಿರೋದು. ಹೌದು ಇದ್ದಕ್ಕಿದಂತೆ ಈ ಫೋಟೊವನ್ನು ಡಬ್ಬೂ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.
ಡಬ್ಬೂ ಪೋಸ್ಟ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಕಿಯಾರಾ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈಗ ಇದೆಲ್ಲಾ ಬೇಕಿತ್ತಾ? ಡಬ್ಬೂ ರತ್ನಾನಿ ನಿನಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಕಿಯಾರಾ ಮದುವೆ ಆಗಿದ್ದಾಳೆ. ಇಂತಹ ಸಮಯದಲ್ಲಿ ಈ ಫೋಟೊ ಹಾಕಿದ್ಯಾಕೆ? ಹಳೇ ಫೋಟೊ ಮತ್ತೆ ವೈರಲ್ ಆಗುವಂತೆ ಮಾಡಿದ್ಯಾಕೆ? ಎಂದು ಕೇಳುತ್ತಿದ್ದಾರೆ. 2020ರಲ್ಲಿ ಡಬ್ಬೂ ರತ್ನಾನಿ ಫ್ಯಾಷನ್ ಕ್ಯಾಲೆಂಡರ್‌ಗಾಗಿ ಕಿಯಾರಾ ಈ ರೀತಿ ಪೋಸ್ ನೀಡಿದ್ದರು.

"ಕಿಯಾರಾ ಹಣಕ್ಕಾಗಿ ಈ ಫೋಟೊಶೂಟ್‌ನಲ್ಲಿ ಭಾಗಿ ಆಗಲಿಲ್ಲ. ಇದನ್ನು ಮುಂಬೈನ ಹೋಟೆಲ್ ರೆಸಾರ್ಟ್‌ನಲ್ಲಿ ಶೂಟ್ ಮಾಡಿದ್ದು" ಎಂದು ಡಬ್ಬೂ ರತ್ನಾನಿ ಹೇಳಿದ್ದರು. ಪ್ರತಿವರ್ಷ ಡಬ್ಬೂ ರತ್ನಾನಿ ಕ್ಯಾಲೆಂಡರ್‌ಗಾಗಿ ಬಾಲಿವುಡ್ ನಟ- ನಟಿಯರು ಪೋಸ್ ನೀಡುತ್ತಾರೆ. ಅಮಿತಾಬ್, ಶಾರುಕ್, ಐಶ್ವರ್ಯ ರೈ, ದೀಪಿಕಾ ಪಡುಕೋಣೆ, ವಿದ್ಯಾ ಬಾಲನ್‌ರಂತಹ ಘಟಾನುಘಟಿ ಕಲಾವಿದರೇ ಈ ಸೆಲೆಬ್ರೆಟಿ ಫೋಟೊಗ್ರಾಫರ್ ಕ್ಯಾಮರಾ ಮುಂದೆ ನಿಲ್ಲುತ್ತಾರೆ. ವಿಭಿನ್ನ ಕಾನ್ಸೆಪ್ಟ್ ಹಾಗೂ ವಿಭಿನ್ನ ಕಾಸ್ಟ್ಯೂಮ್‌ನಲ್ಲಿ ಫೋಟೊಗಳನ್ನು ಕ್ಲಿಕ್ಕಿಸುತ್ತಾರೆ.
2 ವರ್ಷಗಳ ಹಿಂದಿನ ಈ ಫೋಟೊ ಅಂತರ್ಜಾಲಕ್ಕೆ ಕಿಚ್ಚು ಹಚ್ಚಿತ್ತು. ಸಿಕ್ಕಾಪಟ್ಟೆ ವೈರಲ್ ಆಗಿ ಸದ್ದು ಮಾಡಿತ್ತು. ಡಬ್ಬೂ ರತ್ನಾನಿ ರೀ ಪೋಸ್ಟ್ ಮಾಡಿದ್ದಕ್ಕೆ ಮತ್ತೊಮ್ಮೆ ಈ ಫೋಟೊ ಹಲ್‌ಚಲ್ ಎಬ್ಬಿಸಿದೆ. ಇನ್ನು ಕಿಯಾರಾ ಕರಿಯರ್ ವಿಚಾರಕ್ಕೆ ಬಂದರೆ ಆರಕ್ಕೇರದೇ ಮೂರಕ್ಕಿಳಿದ ನಟಿಯಾಗಿ ಉಳಿದುಬಿಟ್ಟಿದ್ದಾರೆ. ಗ್ಲಾಮರ್, ಅಭಿನಯ ಎರಡಕ್ಕೂ ಸೈ ಅಂದ್ರು ಬಾಲಿವುಡ್ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಮಾತ್ರ ಸಿಗಲಿಲ್ಲ. ಆಕೆ ಆರಂಭದಲ್ಲಿ 'ಲಸ್ಟ್ ಸ್ಟೋರೀಸ್' ಆಂಥಾಲಜಿ ಸಿನಿಮಾದಲ್ಲಿ ನಟಿಸಿದ್ದೇ ಇದಕ್ಕೆಲ್ಲಾ ಕಾರಣ ಅನ್ನುವವರು ಇದ್ದಾರೆ. ಮದುವೆ ನಂತರ ಹೆಚ್ಚು ಹೆಚ್ಚು ಅವಕಾಶಗಳು ಸಿಗುವುದು ಕಷ್ಟ ಎನ್ನಲಾಗ್ತಿದೆ.


Click it and Unblock the Notifications











