For Quick Alerts
ALLOW NOTIFICATIONS  
For Daily Alerts

  ತಾರೆಗಳ ಹಾಟ್ ಅಂಡ್ ಸೆಕ್ಸಿ ಕ್ಯಾಲೆಂಡರ್ 2013

  By ಉದಯರವಿ
  |

  ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಕ್ಯಾಲೆಂಡರ್ ಗೆ ಸೆಡ್ಡುಹೊಡೆಯಲು ಮತ್ತೊಂದು ಹಾಟ್ ಕ್ಯಾಲೆಂಡರ್ ಬಂದಿದೆ. ಈ ವಿಭಿನ್ನ ಕ್ಯಾಲೆಂಡರನ್ನು ಹೊರತಂದಿರುವವರು ಬಾಲಿವುಡ್ ನ ಮೋಸ್ಟ್ ಕ್ರಿಯೇಟಿವ್ ಛಾಯಾಗ್ರಾಹಕರಲ್ಲಿ ಒಬ್ಬರಾಗಿರುವ ದಾಬೂ ರತ್ನಾನಿ.

  ಅವರು ಹೊರತಂದಿರುವ 2013ನೇ ಸಾಲಿನ ಹಾಟ್ ಕ್ಯಾಲೆಂಡರ್ ಗಾಗಿ ತಾರೆಗಳಾದ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಸೇರಿದಂತೆ ಟಾಪ್ ಬಾಲಿವುಡ್ ತಾರೆಗಳು ವಿವಿಧ ಭಂಗಿಗಳಲ್ಲಿ ಪೋಸು ನೀಡಿದ್ದಾರೆ.

  ಕ್ಯಾಲೆಂಡರ್ ನಲ್ಲಿ ಐಶ್ವರ್ಯಾ ರೈ

  ಐಶ್ವರ್ಯಾ ರೈ ಅವರು ಒಂದು ಮಗುವಿನ ತಾಯಿಯಾಗಿದ್ದರೂ ಅವರ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿದ್ದಾರೆ ದಾಬು ರತ್ನಾನಿ.

  ಕಪ್ಪು ಬಿಳುಪಿನಲ್ಲಿ ಮಿಂಚಿದ ಸಲ್ಮಾನ್

  ಸಲ್ಮಾನ್ ಖಾನ್ ಅವರ ಮತ್ತೊಂದು ಕೋನ ಈ ಚಿತ್ರದಲ್ಲಿ ಅನಾವರಣವಾಗಿದೆ.

  ಕತ್ರಿನಾ ಅಪೂರ್ವ ಚೆಲುವು

  ಈ ಫೋಟೋದಲ್ಲಿ ಕತ್ರಿನಾ ಕೈಫ್ ಅವರ ಅಪೂರ್ವ ಚೆಲುವನ್ನು ಸೆರೆಹಿಡಿಯಲಾಗಿದೆ.

  ಜಾನ್ ಅಬ್ರಹಾಂ ಹಾವ ಭಾವಗಳು

  ನಟ ಜಾನ್ ಅಬ್ರಹಾಂ ಅವರ ಹಾವಭಾವಗಳನ್ನು ಸೆರೆಹಿಡಿದು ಒಂದೇ ಪುಟದಲ್ಲಿ ನೀಡಿರುವುದು ವಿಶೇಷ.

  ಕರೀನಾ ಕಪೂರ್ ಸುಂದರ ಮೈಮಾಟ

  ಈ ಫೋಟೋದಲ್ಲಿ ಕರೀನಾ ಕಪೂರ್ ಅವರ ಮೈಮಾಟ ಅನಾವರಣಗೊಂಡಿದೆ.

  ನೆರಳು ಬೆಳಕಿನಲ್ಲಿ ರಣಬೀರ್ ಕಪೂರ್

  ಇದು ರಣಬೀರ್ ಕಪೂರ್ ಅವರ ನೆರಳು ಬೆಳಕಿನ ಚಿತ್ರ.

  ಟಾಮಿ ಜೊತೆ ದಬಾಂಗ್ ಗರ್ಲ್

  ತನ್ನ ಮುದ್ದಿನ ನಾಯಿಯೊಂದಿಗೆ ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ. ಪದಗಳಲ್ಲಿ ಸೆರೆಹಿಡಿಯಲಾಗದ ಸೌಂದರ್ಯ.

  ಈ ಬಾರಿಯ ಕ್ಯಾಲೆಂಡರ್ ಹೊಸ ಮುಖ

  ಈ ಬಾರಿಯ ಕ್ಯಾಲೆಂಡರ್ ನ ಹೊಸ ಮುಖ ವರುಣ್ ಧವನ್.

  ಪ್ರಿಯಾಂಕಾ ಚೋಪ್ರಾ ಐಶಾರಾಮಿ ಚೆಲುವು

  ಕಾರಿನಲ್ಲಿ ವಿರಾಜಮಾನರಾಗಿರುವ ಪ್ರಿಯಾಂಕಾ ಚೋಪ್ರಾ ಅವರ ಐಶಾರಾಮಿ ಚೆಲುವು ಈ ಫೋಟೋದಲ್ಲಿ ಅನಾವರಣಗೊಂಡಿದೆ.

  ಅಕ್ಷಯ್ ಕುಮಾರ್ ಹೊಸ ಸ್ಟೈಲ್

  ರಜನಿಕಾಂತ್ ಅವರ ಸಿಗರೇಟ್ ಸ್ಟೈಲ್ ಗಿಂತಲೂ ಅಕ್ಷಯ್ ಕುಮಾರ್ ಅವರ ಈ ಸ್ಟೈಲ್ ಬಲು ಸೊಗಸಾಗಿದೆ.

  ವಿದ್ಯಾಬಾಲನ್ ಊ ಲಾ ಲಾ ಫೋಟೋ

  ಊ ಲಾ ಲಾ ಬೆಡಗಿ ವಿದ್ಯಾ ಬಾಲನ್ ಅವರ ಮತ್ತೊಂದು ಹಾಟ್ ಫೋಟೋ.

  ಅಭಿಷೇಕ್ ಬಚ್ಚನ್ ಅದ್ಭುತ ಫೋಟೋ

  ಅಭಿಷೇಕ್ ಬಚ್ಚನ್ ಅವರನ್ನು ಆಕಾಶದೆತ್ತರ ತೋರಿಸುವ ಪ್ರಯತ್ನ ಇಲ್ಲಿ ಅದ್ಭುತವಾಗಿ ಮೂಡಿಬಂದಿದೆ.

  ಮಹೇಶ್ ಭಟ್ ಮಗಳು ಅಲಿಯಾ ಭಟ್

  ಈ ಬಾರಿಯ ಕ್ಯಾಲೆಂಡರ್ ನಲ್ಲಿ ಸ್ಥಾನ ಪಡೆದಿರುವ ಮಹೇಶ್ ಭಟ್ ಪುತ್ರಿ.

  ಅಜಯ್ ದೇವಗನ್ ಆಕ್ಷನ್ ಚಿತ್ರ

  ಆಕ್ಷನ್ ಮೂಡ್ ನಲ್ಲಿರುವ ಅಜಯ್ ದೇವಗನ್.

  ತುಂಡುಗೆಯಲ್ಲಿ ಅನುಷ್ಕಾ ಶರ್ಮಾ

  ಅನುಷ್ಕಾ ಶರ್ಮಾ ಅವರ ಮತ್ತೊಂದು ರೋಚಕ ಫೋಟೋ.

  ಅಮಿತಾಬ್ ಬಚ್ಚನ್ ಹೊಸ ಲುಕ್

  ಈ ಇಳಿವಯಸ್ಸಿನಲ್ಲೂ ಅಮಿತಾಬ್ ಬಚ್ಚನ್ ಸ್ಟೈಲ್ ಗೆ ಮಾರುಹೋಗದವರುಂಟೆ?

  ಬಣ್ಣಗಳ ಸಂಯೋಜನೆ ಆಕರ್ಷಣೆ

  ಈ ಫೋಟೋದಲ್ಲಿನ ಬಣ್ಣಗಳ ಸಂಯೋಜನೆ ಗಮನಿಸಿ. ಕಪ್ಪು ಕುದುರೆ, ಕಪ್ಪು ಉಡುಗೆಯಲ್ಲಿ ಅಸಿನ್...ಮನಮೋಹಕ ಚಿತ್ರ.

  ಮಾರ್ಚ್ ಹಾಳೆಯಲ್ಲಿ ಅರ್ಜುನ್ ರಾಂಪಾಲ್

  ಮಾರ್ಚ್ ತಿಂಗಳ ಹಾಳೆಯಲ್ಲಿ ಅರ್ಜುನ್ ರಾಂಪಾಲ್.

  ಹಾಲು ಬಿಳುಪು ಬಣ್ಣದಲ್ಲಿ ದೀಪಿಕಾ ಪಡುಕೋಣೆ

  ಕಣ್ಣಿಗೆ ಹಿತವಾಗಿರುವ ಹಾಲು ಬಿಳುಪು ಬಣ್ಣದಲ್ಲಿ ದೀಪಿಕಾ ಆಕರ್ಷಕ ಫೋಟೋ.

  ಹೃತಿಕ್ ರೋಷನ್ ಎಂಟು ಪ್ಯಾಕ್ ಪ್ರದರ್ಶನ

  ಸಿಕ್ಸ್ ಪ್ಯಾಕ್ ಕಾಮನ್. ಆದರೆ ಇಲ್ಲಿ ಹೃತಿಕ್ ರೋಷನ್ ಎಂಟು ಪ್ಯಾಕ್ ಬಾಡಿಯನ್ನು ಪ್ರದರ್ಶಿಸಿದ್ದಾರೆ.

  ಟೂಪೀಸ್ ನಲ್ಲಿ ಬಿಪಾಶಾ ಬಸು

  ಟೂಪೀಸಲ್ಲಿ ತಮ್ಮ ಮೈಮಾಟ ತೋರಿದ ಬಿಪಾಶಾ ಬಸು.


  ಕಳೆದ 14 ವರ್ಷಗಳಿಂದ ಮಿಸ್ ಆಗದಂತೆ ಪ್ರತಿವರ್ಷವೂ ದಾಬೂ ರತ್ನಾನಿ ಈ ಕ್ಯಾಲೆಂಡರನ್ನು ಹೊರತರುತ್ತಿದ್ದಾರೆ. ಈ ವರ್ಷ 24 ಮಂದಿ ಬಾಲಿವುಡ್ ಸೆಲಿಬ್ರಿಟಿಗಳೊಂದಿಗೆ ಕ್ಯಾಲೆಂಡರನ್ನು ರೂಪಿಸಿದ್ದಾರೆ. ಈ ಕ್ಯಾಲೆಂಡರ್ ನಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಐಶ್ವರ್ಯಾ ರೈ, ಕಾಜೋಲ್, ಹೃತಿಕ್ ರೋಷನ್ ಮುಂತಾದವರಿದ್ದಾರೆ.

  ಬಾಲಿವುಡ್ ನ ಅತ್ಯಂತ ಜನಪ್ರಿಯ ಕ್ಯಾಲೆಂಡರ್ ಗಳಲ್ಲಿ ದಾಬೂ ರತ್ನಾನಿ ಅವರ ಕ್ಯಾಲೆಂಡರ್ ಸಹ ಒಂದು. ಈ ವರ್ಷದ ಕ್ಯಾಲೆಂಡರ್ ನಲ್ಲಿ ದಾಬೂ ಎರಡು ಹೊಸ ಮುಖಗಳನ್ನೂ ಸೇರಿಸಿದ್ದಾರೆ. ಅದರಲ್ಲಿ ಒಬ್ಬರು ಮಹೇಶ್ ಭಟ್ ಮಗಳು ಅಲಿಯಾ ಭಟ್, ಇನ್ನೊಬ್ಬರು ವರುನ್ ದಾವನ್.

  ಇವರೊಂದಿಗೆ ರಣಬೀರ್ ಕಪೂರ್, ಬಿಪಾಶಾ ಬಸು, ಜಾನ್ ಅಬ್ರಹಾಂ, ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಅರ್ಜುನ್ ರಾಂಪಾಲ್, ಕರೀನಾ ಕಪೂರ್ ಈ ಬಾರಿಯ ಕ್ಯಾಲೆಂಡರ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Daboo Ratnani is one of the most creative photographer we have today. Daboo recently unveiled his 2013 calender which features top Bollywood actors in a very artistic and unique way. Though we loved Akshay Kumar's photoshoot the most, Sonakshi Sinha and Asin have never looked so beautiful before.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more