ದಕ್ಷಿಣದ ಆ ನಿರ್ದೇಶಕ ಅಸಭ್ಯವಾಗಿ ನನ್ನ ಮುಟ್ಟಿದ ; ಕಹಿ ಅನುಭವ ನೆನೆದು ಬಿಕ್ಕಿದ 'ಭದ್ರ' ನಟಿ ಡೈಸಿ ಶಾ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ.

ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ. ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಒದ್ದು ಬರುತ್ತಾರೆ.

Daisy Shah Inappropriately Touched by South Filmmaker during Audition

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ.ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಉದಾಹರಣೆಗೆ ಡೈಸಿ ಶಾ.

ಹೌದು ಡೈಸಿ ಶಾ .. ಬಾಲಿವುಡ್‌ನ ಬೆಡಗಿ. ಒಂದ್ಕಾಲದಲ್ಲಿ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ತಂಡದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಡೈಸಿ ಶಾ ಬಾಲಿವುಡ್‌ನ ಕೆಲ ಚಿತ್ರಗಳಲ್ಲಿ ಡ್ಯಾನ್ಸರ್ ಆಗಿ ಹೆಜ್ಜೆಯನ್ನು ಹಾಕಿದ್ದಾರೆ.

ಚಿತ್ರರಂಗದಲ್ಲಿ ಒಂದು ದೊಡ್ಡ ಗೆಲುವು ಪಡೆಯಲು 2001ರಿಂದ ಕಸರತ್ತು ಮಾಡುತ್ತಿರುವ ಡೈಸಿ ಶಾ , ಸಲ್ಮಾನ್ ಖಾನ್ ಅಭಿನಯದ ''ಜೈಹೋ'' ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು. ಇದಕ್ಕೂ ಮುನ್ನ ಪ್ರಜ್ವಲ್ ದೇವರಾಜ್ ಅಭಿನಯದ ''ಭದ್ರ''.. ಜಗ್ಗೇಶ್ ಅಭಿನಯದ ''ಬಾಡಿಗಾರ್ಡ್''.. ''ಗಜೇಂದ್ರ''.. ಹೀಗೆ ಒಂದಾದ ಮೇಲೊಂದು 3 ಕನ್ನಡ ಚಿತ್ರಗಳನ್ನು ಕೂಡ ಮಾಡಿದ್ದರು ಡೈಸಿ ಶಾ.

ಸದ್ಯ ಡೈಸಿ ಶಾಗೆ ಈಗ 41ರ ಹರೆಯ. ಆದರೆ ಇನ್ನೂ ಮದುವೆಯಾಗಿಲ್ಲ. ಕೈಯಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಕೂಡ ಇಲ್ಲ. ಇಂಥಾ ಡೈಸಿ ಶಾ ಈಗ ತಮಗಾದ ಕಹಿ ಅನುಭವ ಹಂಚಿಕೊಂಡಿದ್ಧಾರೆ. ದಕ್ಷಿಣದ ನಿರ್ದೇಶಕರೊಬ್ಬರು ನನಗೆ ಕೆಟ್ಟದಾಗಿ ಮುಟ್ಟಿದರು ಎಂದು ಹೇಳಿದ್ದಾರೆ.

Daisy Shah Inappropriately Touched by South Filmmaker during Audition

ಈ ಕುರಿತು ''ದಿ ಫ್ರೀ ಪ್ರೆಸ್ ಜರ್ನಲ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಡೈಸಿ ಶಾ, ಮುಂಬೈಗೆ ದಕ್ಷಿಣದ ನಿರ್ದೇಶಕರೊಬ್ಬರು ತಮ್ಮ ಚಿತ್ರಕ್ಕೆ ಪಾತ್ರಧಾರಿಗಳನ್ನು ಆಯ್ಕೆ ಮಾಡಲು ಬಂದಿದ್ದರು ಎಂದು ಹೇಳಿದ್ದಾರೆ.

ಅವರು ಬರುತ್ತಿರುವ ಹಿನ್ನೆಲೆ ನಾವು 6-7 ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೆವು ಎಂದು ಹೇಳಿರುವ ಡೈಸಿ ಶಾ ಅವರಿ ಎಲ್ಲರನ್ನೂ ಒಬ್ಬೊಬ್ಬರನ್ನಾಗಿಯೇ ಕರೆದು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಮುಂದುವರೆದು ನನ್ನ ಸರದಿ ಬಂದಾಗ ನಾನು ಹೋದೆ, ಆ ಸಮಯದಲ್ಲಿ ಅವರು ತುಂಬಾ ಅಸಭ್ಯವಾಗಿ ನನ್ನನ್ನು ಮುಟ್ಟಿದರು ಎಂದು ಹೇಳಿರುವ ಡೈಸಿ ಶಾ ನನ್ನ ಕೈಯನ್ನು ಅವರು ಹಿಡಿದುಕೊಂಡರು ಎಂದು ಹೇಳಿದ್ದಾರೆ. ಅವರ ಆ ವರ್ತನೆ ನನಗೆ ಇಷ್ಟವಾಗಲಿಲ್ಲ, ಬದಲಿಗೆ ಜಿಗುಪ್ಸೆ ಉಂಟಾಯ್ತು ಎಂದು ಹೇಳಿದ್ದಾರೆ.

ನನಗೆ ಸಾಮಾನ್ಯವಾಗಿ ಯಾರಾದರೂ ಮುಟ್ಟಿದರೆ ಇಷ್ಟ ಆಗುವುದಿಲ್ಲ ಎಂದು ಹೇಳಿರುವ ಡೈಸಿ ಶಾ, ಇದೇ ಕಾರಣಕ್ಕೆ ನಾನು ಮಸಾಜ್ ಕೂಡ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಒಬ್ಬ ಮಹಿಳೆ ಮುಟ್ಟುವುದೇ ಇಷ್ಟವಾಗುವುದಿಲ್ಲ, ಹೀಗಿರುವಾಗ ಒಬ್ಬ ಪುರುಷ ಅಸಭ್ಯವಾಗಿ ವರ್ತಿಸದರೆ ನಾನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಹೇಳಿರುವ ಡೈಸಿ ಶಾ ನನಗೆ ಅವರ ಆ ವರ್ತನೆಯಿಂದ ತುಂಬಾ ಬೇಸರವಾಯ್ತು ಎಂದು ಹೇಳಿದ್ದಾರೆ.

ಆ ನಂತರ ನಾನು ನಿಮ್ಮನ್ನು ಮತ್ತೆ ಸಂಪರ್ಕ ಮಾಡುತ್ತೇನೆ ಎಂದು ಹೇಳಿ ಅಲ್ಲಿಂದ ನಾನು ಕಾಲ್ಕಿತ್ತೆ ಎಂದು ಹೇಳಿರುವ ಡೈಸಿ ಶಾ ಆ ನಂತರ ಆ ವ್ಯಕ್ತಿಯನ್ನು ನಾನು ಯಾವತ್ತು ಭೇಟಿಯಾಗಿಲ್ಲ ಎಂದಿದ್ದಾರೆ. ಎಂದಿನಂತೆ ಆ ವ್ಯಕ್ತಿ ಯಾರು..? ಆ ಚಿತ್ರ ಯಾವುದು..? ಎನ್ನುವ ರಹಸ್ಯವನ್ನು ಡೈಸಿ ಶಾ ಹೇಳಿಲ್ಲ.

ಈ ಕುರಿತು

English summary
Daisy Shah reveals a harrowing experience during a South film audition. Read how an inappropriate touch by a filmmaker left the actress feeling "put off."
Read more about: casting couch daisy shah
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X