'ಹೌಸ್ ಫುಲ್-4' ಶೂಟಿಂಗ್ ವೇಳೆ ಡ್ಯಾನ್ಸರ್ ಗೆ ಕಿರುಕುಳ.!
ದೇಶಾದ್ಯಂತ ಮೀಟೂ ಅಭಿಯಾನ ದೊಡ್ಡ ಸದ್ದು ಮಾಡುತ್ತಿದೆ. ಹಲವು ವರ್ಷಗಳ ಹಿಂದೆ ನಡೆದ ಘಟನೆಗಳು, ಕಿರುಕುಳಗಳನ್ನ ನೊಂದ ಯುವತಿಯರು, ನಟಿಯರು, ಮಹಿಳೆಯರು ಹೊರಹಾಕುತ್ತಿದ್ದಾರೆ. ಈ ಮಧ್ಯೆ 'ಹೌಸ್ ಫುಲ್-4' ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಒಬ್ಬರ ಮೇಲೆ ದೌರ್ಜನ್ಯವಾಗಿದೆ ಎಂಬ ಸುದ್ದಿ ವರದಿಯಾಗಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್ ಅಭಿನಯದ 'ಹೌಸ್ ಫುಲ್-4' ಚಿತ್ರದ ಚಿತ್ರೀಕರಣ ಮುಂಬೈನ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ಸೆಟ್ ಗೆ ಬಂದಿದ್ದ ವ್ಯಕ್ತಿಯೊಬ್ಬ ಸಹಕಲಾವಿದೆಗೆ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರಿದ್ದಾಳೆ.
ಆರು ಜನರ ಜೊತೆ ಬಂದ ಪವನ್ ಶೆಟ್ಟಿ ಎಂಬ ಯುವಕ ಸ್ನೇಹಿತೆಯರ ಜೊತೆಯಲ್ಲಿದ್ದ ಯುವತಿ ಮೇಲೆ ರೇಗಾಡಿದ್ದಾನೆ. ಅಷ್ಟೇ ಅಲ್ಲದೇ ಆ ಹುಡುಗಿಯ ಖಾಸಗಿ ಅಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾನೆಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆ ಸಮಯದಲ್ಲಿ ಆ ಹುಡುಗಿ ಜೋರಾಗಿ ಕಿರುಚಿಕೊಂಡು, ಪ್ರೊಡಕ್ಷನ್ ತಂಡಕ್ಕೆ ವಿಷ್ಯ ತಿಳಿಸಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ ಮತ್ತು ರಿತೇಶ್ ದೇಶಮುಖ್ ಕೂಡ ಸ್ಥಳಕ್ಕೆ ಆಗಮಿಸಿ, ಯುವತಿಗೆ ಪೊಲೀಸ್ ದೂರು ನೀಡಲು ಸೂಚಿಸಿದರಂತೆ. ಅದರಂತೆ ಯುವತಿ ಕಂಪ್ಲೆಂಟ್ ಕೂಡ ದಾಖಲು ಮಾಡಿದ್ದಾರೆ.
ಇದಕ್ಕೂ ಮುಂಚೆ ಮೀಟೂ ಆರೋಪ ಕೇಳಿಬಂದ ಹಿನ್ನೆಲೆ ನಿರ್ದೇಶಕ ಸಾಜಿದ್ ಖಾನ್ ಮತ್ತು ನಟ ನಾನಾ ಪಾಟೇಕರ್ ಹೌಸ್ ಫುಲ್ 4 ಚಿತ್ರದಿಂದ ಹಿಂದೆ ಸರಿದಿದ್ದರು. ಇದೀಗ, ಅದೇ ಚಿತ್ರತಂಡದಲ್ಲಿ ಮತ್ತೊಂದು ಘಟನೆ ನಡೆದಿರುವುದು ವಿಚಾದನೀಯ ಸಂಗತಿ.


Click it and Unblock the Notifications